ಕನ್ನಡಾಭಿಮಾನ ಮೆರೆದ ಅರ್ಜುನ್ ಸರ್ಜಾ ಕುಟುಂಬ

ತುಮಕೂರಿನ ಮಧುಗಿರಿಯಲ್ಲಿ ತಮ್ಮ ತಾಯಿ ನಿರ್ಮಿಸಿರುವ ದೇವಾಲಯದ ಪ್ರಾರಂಭೋತ್ಸವಕ್ಕೆ ಬಂದಿದ್ದರು ಅರ್ಜುನ್ ಸರ್ಜಾ. ಸದ್ದಿಲ್ಲದೇ ಕುಟುಂಬದೊಂದಿಗೆ ಬಂದು ಸುದ್ದಿಮಾಡದೇ ಹೊರಟುಹೋಗಿದ್ದಾರೆ ಈ ಕನ್ನಡದ ಕುಡಿ ತಮಿಳು ನಟ. ನೆರೆಭಾಷೆಯಲ್ಲಿ ಮಿಂಚುತ್ತಿದ್ದರೂ ಹುಟ್ಟಿದ ಕನ್ನಡನಾಡಿನಲ್ಲಿ ದೇವಾಲಯ ನಿರ್ಮಿಸಿ ಕನ್ನಡಾಭಿಮಾನ ಮೆರೆದ ಸರ್ಜಾರ ಅಭಿಮಾನಕ್ಕೆ ಕನ್ನಡಿಗರ ಹೃದಯ ತುಂಬಿಬಂದಿದೆ.
ಅಂದಹಾಗೆ ಅರ್ಜುನ್ ಸರ್ಜಾ ಸಹೋದರಿಯ ಮಕ್ಕಳಾದ ಚಿರಂಜೀವಿ ಸರ್ಜಾ ಈಗಾಗಲೇ ಕನ್ನಡ ನಟ ಎನಿಸಿಕೊಂಡಿದ್ದಾರೆ. ಅವರ ಸಹೋದರ ಧ್ರುವ ಸರ್ಜಾ 'ಅದ್ದೂರಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಕ್ಕೆ ದಿನಗಣನೆ ಪ್ರಾರಂಭಿಸಿದ್ದಾರೆ. ಸ್ಬತಃ ಅರ್ಜುನ್ ಸರ್ಜಾ, ಕನ್ನಡದಲ್ಲಿ ನಟಿಸಿರುವ 'ಪ್ರಸಾದ್' ಚಿತ್ರದ ಆಡಿಯೋ ಬಿಡುಗಡೆ ಇತ್ತೀಚಿಗಷ್ಟೇ ನಡೆದಿದೆ. ಒಟ್ಟಿನಲ್ಲಿ ಅರ್ಜುನ್ ಸರ್ಜಾ ಕನ್ನಡಾಭಿಮಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Actor Arjun Sarja's mother Lakshmidevi constructed a Temple in Madhugiri, Tumkur District. Arjun Sarja came for Madhigiri for the temple Ingratiation recently.


Click it and Unblock the Notifications











