For Quick Alerts
  ALLOW NOTIFICATIONS  
  For Daily Alerts

  ಮಹಾ ಸಮಸ್ಯೆಗೆ ಸಿಲುಕಿದ ನಿರ್ದೇಶಕ ಮಣಿರತ್ನಂ

  |

  ಮಣಿರತ್ನಂ ಕನಸಿನ ಚಿತ್ರ 'ಪೂಕದೈ' ಈಗ ಶೀರ್ಷಿಕೆ ವಿವಾದಕ್ಕೆ ತುತ್ತಾಗಿದೆ. ಈಗಾಗಲೇ ಸಾಕಷ್ಟು ನಟಿಯರನ್ನು ಸ್ಕ್ರೀನ್ ಟೆಸ್ಟ್ ಮಾಡಿ ಮನೆಗೆ ಕಳಿಸಿ ಸುಸ್ತಾಗಿರುವ ನಿರ್ದೇಶಕ ಮಣಿರತ್ನಂ, ಇದೀಗ ಭಾರೀ ಸಮಸ್ಯೆಯೊಂದರಲ್ಲಿ ಸಿಲುಕಿದಂತಾಗಿದೆ. ಕಾರಣ ಚಿತ್ರದ ಶೀರ್ಷಿಕೆಗೇ ಕುತ್ತು ಬಂದಿದೆ.

  ತೀರಾ ಇತ್ತೀಚಿಗೆ ನಿರ್ದೇಶಕ ಸರನ್ ಶಿಷ್ಯನೊಬ್ಬ ನಿರ್ದೆಶಕರ ಸಂಘಕ್ಕೆ ಹೋಗಿ ಬಾಗಿಲು ತಟ್ಟಿದ್ದಾನೆ. ಕಾರಣ ಬಹಳ ಕಾಲದ ಹಿಂದೆಯೇ ಈ ಟೈಟಲ್ ಅನ್ನು ತಾನು ರಿಜಿಸ್ಟರ್ ಮಾಡಿಸಿದ್ದೇನೆಂದು ಕೇಸ್ ಜಡಿದಿದ್ದಾನೆ. ಈ ಘಟನೆಯಿಂದ ವಿಚಲಿತರಾದ ಮಣಿ ನಿದ್ದೆ ಬಾರದೇ ಹೊರಳಾಡುತ್ತಿದ್ದಾರೆ.

  ರಾಮೇಶ್ವರದ ಮೀನುಗಾರನೊಬ್ಬನ ಪ್ರೀತಿಯ ನೈಜ ಘಟನೆಯನ್ನಾದರಿಸಿದ ಈ ಚಿತ್ರಕ್ಕೆ ಮಣೀರತ್ನಂ ಈಗ ಬೇರೆ ಶೀರ್ಷಿಕೆ ಹುಡುಕುವುದು ಖಾತ್ರಿಯಾಗಿದೆ. ಮೊದಲ ಬಾರಿಗೆ ಶೀರ್ಷಿಕೆ ವಿವಾದಕ್ಕೆ ಈಡಾಗಿದ್ದಾರೆ ಮೇರು ನಿರ್ದೇಶಕ ಮಣಿರತ್ನಂ. ಈ ಮೊದಲು ಬಾಂಬೆ ಚಿತ್ರದ ಕೆಲವು ದೃಶ್ಯಗಳ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. (ಏಜೆನ್ಸೀಸ್)

  English summary
  Mani Rathnam's upcoming movie Pookadai title is in Trouble. Recently one of the assistant's of director Saran met the Directors Association and claimed that the title Pookadai has been registered by him long back.
 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X