Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟ ಸಿಂಬು ವಿರುದ್ಧ ಪ್ರಾಣಿ ದಯಾಸಂಘದಿಂದ ದೂರು ದಾಖಲು
ತಮಿಳು ನಟ ಸಿಂಬು ವಿರುದ್ಧ ಪ್ರಾಣಿ ದಯಾಸಂಘ ಕೋಪಗೊಂಡಿವೆ. ನಟ ಸಿಂಭು ತಮ್ಮ ಪ್ರಾಣಿ ಹಿಂಸೆ ಮಾಡಿದ್ದಾರೆಂದು ಪ್ರಾಣಿ ದಯಾಸಂಘಗಳು ದೂರು ದಾಖಲಿಸಿವೆ.
ನಟ ಸಿಂಬು ಈಶ್ವರನ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್‌ನಲ್ಲಿ ಸಿಂಬು ಹಾವೊಂದನ್ನು ಹಿಡಿದಿರುವ ಚಿತ್ರವಿದೆ.
ಈಶ್ವರನ್ ಸಿನಿಮಾದ ಚಿತ್ರದಲ್ಲಿ ಭಾಗವಹಿಸಿದ್ದ ನಟ ಸಿಂಬು ಅವರು ಜೀವಂತ ಹಾವೊಂದನ್ನು ಹಿಡಿಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅದೇ ವಿಡಿಯೋದ ಆಧಾರದಲ್ಲಿ ಸಿಂಭು ವಿರುದ್ಧ ಈಗ ಪ್ರಕರಣ ದಾಖಲಿಸಲಾಗಿದೆ.

ಸಿಂಭು ನಾಗರಹಾವು ಹಿಡಿದಿರುವ ವಿಡಿಯೋ ವೈರಲ್ ಆಗಿದೆ
ಈಶ್ವರನ್ ಸಿನಿಮಾದಲ್ಲಿ ನಟ ಸಿಂಭು ಮರದ ನಾಗರಹಾವೊಂದನ್ನು ಹಿಡಿದು ಅದನ್ನು ಚೀಲವೊಂದರ ಒಳಕ್ಕೆ ಬಿಡುವ ದೃಶ್ಯವಿದೆ. ಈ ದೃಶ್ಯಕ್ಕಾಗಿ ನಿಜವಾದ ನಾಗರಹಾವನ್ನು ಚಿತ್ರತಂಡ ಬಳಸಿದೆ. ಇದು ಈಗ ಪ್ರಾಣಿ ದಯಾ ಸಂಘಗಳ ಕೆಂಗಣ್ಣಿಗೆ ಗುರಿಯಾಗಿದೆ.

ಪ್ರಾಣಿ ಸಂರಕ್ಷಣಾ ಕಾಯ್ದೆ 1972 ರ ಉಲ್ಲಂಘನೆ
ಜೀವಂತ ಹಾವನ್ನು ಚಿತ್ರೀಕರಣಕ್ಕೆ ಬಳಸಲು ಸಿನಿಮಾ ತಂಡವು ಅನುಮತಿ ಪಡೆದಿದೆಯೇ ಎಂಬ ಪ್ರಶ್ನೆ ಎದ್ದಿದೆ. ಚಿತ್ರತಂಡವು ಪ್ರಾಣಿ ಸಂರಕ್ಷಣಾ ಕಾಯ್ದೆ 1972 ಅನ್ನು ಉಲ್ಲಂಘಿಸಿದೆ ಎಂದು ಪ್ರಾಣಿ ದಯಾಸಂಘ ಹಾಗೂ ಅರಣ್ಯ ಇಲಾಖೆ ಸಿನಿಮಾ ತಂಡದ ವಿರುದ್ಧ ಪ್ರಕರಣ ದಾಖಲಿಸಿದೆ.

ಪ್ರಾಣಿ ಹಿಂಸೆ ದೂರು ಸಹ ದಾಖಲು
ಖಾಸಗಿ ವ್ಯಕ್ತಿಯೊಬ್ಬರು ಪ್ರತ್ಯೇಕವಾಗಿ ನಟ ಸಿಂಭು ವಿರುದ್ಧ ಪ್ರಕರಣ ದಾಖಲಿಸಿದ್ದು, 'ಹಾವನ್ನು ಹಿಡಿಯುವಾಗ ಸಿಂಭು ಹಾವಿಗೆ ಘಾಸಿ ಮಾಡಿದ್ದಾರೆ. ಹಾಗಾಗಿ ಸಿಂಭು ವಿರುದ್ಧ ಪ್ರಾಣಿ ಹಿಂಸೆ ಅಡಿ ಕಾನೂನು ಕ್ರಮ ಜರುಗಿಸಬೇಕು' ಎಂದು ಮನವಿ ಮಾಡಿದ್ದಾರೆ.
Recommended Video

ಸುಸೀಂಥಿರನ್ ನಿರ್ದೇಶನದ ಸಿನಿಮಾ
ಈಶ್ವರನ್ ಸಿನಿಮಾವನ್ನು ಸುಸೀಂಥಿರನ್ ನಿರ್ದೇಶಿಸಿದ್ದಾರೆ. ಸಿನಿಮಾದ ನಾಯಕಿ ನಿಧಿ ಅಗರ್ವಾಲ್. ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಮಾಧವನ್ ಮೀಡಿಯಾ. ಸಿನಿಮಾವು 2021 ರ ಆರಂಭದಲ್ಲಿ ಬಿಡುಗಡೆ ಆಗಲಿದೆ.