For Quick Alerts
  ALLOW NOTIFICATIONS  
  For Daily Alerts

  ನಿತ್ಯಾನಂದ ಸ್ವಾಮೀಜಿ ಜೊತೆಗಿನ ಫೋಟೋ ಬಗ್ಗೆ ಗಾಯಕಿ ಚಿನ್ಮಯಿ ಸ್ಪಷ್ಟನೆ

  |

  ಸೌತ್ ಇಂಡಸ್ಟ್ರಿಯಲ್ಲಿ ಹಲವರ ಮೇಲೆ ಮೀಟೂ ಆರೋಪ ಮಾಡಿ ಸಂಚಲನ ಸೃಷ್ಟಿಸಿದ್ದ ಗಾಯಕಿ ಚಿನ್ಮಯಿ ಶ್ರೀಪಾದ್ ಮತ್ತೆ ಸುದ್ದಿಯಾಗಿದ್ದಾರೆ. ನಿತ್ಯಾನಂದ ಸ್ವಾಮೀಜಿ ಜೊತೆಯಲ್ಲಿ ಚಿನ್ಮಯಿ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಫೋಟೋ ಕುರಿತು ಹಲವು ಚರ್ಚೆಗಳು ಹುಟ್ಟಿಕೊಂಡಿತ್ತು.

  ಈ ಫೋಟೋ ಕುರಿತು ಗಾಯಕಿ ಚಿನ್ಮಯಿ ಸ್ಪಷ್ಟನೆ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿನ್ಮಯಿ ''ಇದು ಫೇಕ್ ಫೋಟೋ. ಆದರೂ ಯಾಕೆ ಈ ಜನರು ಇದನ್ನ ಮತ್ತೆ ಮತ್ತೆ ಪೋಸ್ಟ್ ಮಾಡುತ್ತಿದ್ದಾರೆ. ಇದು ಸುಮ್ಮನೆ ಮಾಡುತ್ತಿದ್ದಾರಾ ಅಥವಾ ಯಾರಾದರೂ ದುಡ್ಡು ಕೊಟ್ಟು ಮಾಡಿಸುತ್ತಿದ್ದಾರಾ?'' ಎಂದು ಕಿಡಿ ಕಾರಿದ್ದಾರೆ.

  'ಮೀಟೂ' ಆರೋಪ ಮಾಡಿದ್ದಕ್ಕೆ ಗಾಯಕಿ ಚಿನ್ಮಯಿ ಸಿನಿಜೀವನ ಅಂತ್ಯ.!'ಮೀಟೂ' ಆರೋಪ ಮಾಡಿದ್ದಕ್ಕೆ ಗಾಯಕಿ ಚಿನ್ಮಯಿ ಸಿನಿಜೀವನ ಅಂತ್ಯ.!

  ಚಿನ್ಮಯಿ ಮತ್ತು ಆಕೆಯ ತಾಯಿ ನಿತ್ಯಾನಂದ ಸ್ವಾಮೀಜಿಯಿಂದ ಪ್ರಸಾದ ಪಡೆಯುತ್ತಿರುವ ಫೋಟೋ ವೈರಲ್ ಆಗಿದೆ. ಆದರೆ, ಅದು ನಿತ್ಯಾನಂದ ಸ್ವಾಮೀಜಿ ಅಲ್ಲ, ಯಾವುದೋ ದೇವಸ್ಥಾನದ ಪೂಜಾರಿ. ಆ ಅರ್ಚಕರ ಬದಲು ನಿತ್ಯಾನಂದ ಸ್ವಾಮೀಜಿಯನ್ನ ಗ್ರಾಫಿಕ್ಸ್ ಮಾಡಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ಚಿನ್ಮಯಿ ಫೋಟೋ ಸಮೇತ ಬಹಿರಂಗಪಡಿಸಿದ್ದಾರೆ.

  'ತಬ್ಬಿಕೊಂಡು, ಮುತ್ತುಕೊಡಲು ಪ್ರಯತ್ನ ಮಾಡಿದ್ದು ನಿಜ', ಆದರೆ.. : ರಘು ದೀಕ್ಷಿತ್ ನೇರ ಸ್ಪಷ್ಟನೆ'ತಬ್ಬಿಕೊಂಡು, ಮುತ್ತುಕೊಡಲು ಪ್ರಯತ್ನ ಮಾಡಿದ್ದು ನಿಜ', ಆದರೆ.. : ರಘು ದೀಕ್ಷಿತ್ ನೇರ ಸ್ಪಷ್ಟನೆ

  ಚಿನ್ಮಯಿ ಅವರು ಈ ಸ್ಪಷ್ಟನೆಯ ಪೋಸ್ಟ್ ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಸೈಬರ್ ಕ್ರೈಂ ಪೋಲಿಸರಿಗೆ ದೂರು ನೀಡಿ ಎಂದು ಸಲಹೆ ನೀಡುತ್ತಿದ್ದಾರೆ. ಇಂತಹ ಅಪಪ್ರಚಾರದ ಬಗ್ಗೆ ನೀವು ಹೆಚ್ಚಾಗಿ ಚಿಂತಿಸಬೇಡಿ ಎಂದು ಕೂಡ ಕೆಲವರು ಧೈರ್ಯ ತುಂಬಿದ್ದಾರೆ.

  ಅಂದ್ಹಾಗೆ, ಚಿನ್ಮಯಿ ಶ್ರೀಪಾದ್ ಅವರು ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲೂ ಹಾಡಿದ್ದಾರೆ. ತ್ರಿಷಾ, ಸಮಂತಾ ಅಂತಹ ನಟಿಯರಿಗೆ ವಾಯ್ಸ್ ಡಬ್ ಮಾಡಿದ್ದಾರೆ. ತಮಿಳಿನ ಖ್ಯಾತ ಸಾಹಿತಿ ವೈರಮುತ್ತು, ಕನ್ನಡದ ಗಾಯಕ ರಘುದೀಕ್ಷಿತ್ ಅವರ ವಿರುದ್ಧ ಮೀಟೂ ಆರೋಪ ಮಾಡಿದ್ದರು.

  English summary
  Singer Chinmayi Sripada clarified on photo with swami Nithyananda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X