For Quick Alerts
  ALLOW NOTIFICATIONS  
  For Daily Alerts

  ರಜನೀಕಾಂತ್‌ಗಾಗಿ ಲೊಕೇಶನ್ ಬದಲು: ಚಿತ್ರೀಕರಣಕ್ಕೆ ಹಾಜರಾದ ತಲೈವರ್

  |

  ಎರಡು ತಿಂಗಳ ವಿಶ್ರಾಂತಿ ಬಳಿಕ ನಟ ರಜನೀಕಾಂತ್ ಚಿತ್ರೀಕರಣಕ್ಕೆ ಮರಳಿದ್ದಾರೆ. ರಜನೀಕಾಂತ್ ಅನಾರೋಗ್ಯಕ್ಕೀಡಾದ ಕಾರಣ ನಿಲ್ಲಿಸಲಾಗಿದ್ದ 'ಅನ್ನಾತೆ' ಚಿತ್ರೀಕರಣ ಇದೀಗ ಪುನಃ ಪ್ರಾರಂಭಗೊಂಡಿದೆ.

  ತೆಲುಗಿನಲ್ಲಿ ಹಾರುತ್ತಿದೆ ಕನ್ನಡ ನಿರ್ದೇಶಕನ ಕೀರ್ತಿ ಪತಾಕೆ | Filmibeat Kannada

  ಡಿಸೆಂಬರ್ ತಿಂಗಳಲ್ಲಿ 'ಅನ್ನಾತೆ' ಸಿನಿಮಾದ ಚಿತ್ರೀಕರಣವು ಹೈದರಾಬಾದ್‌ನಲ್ಲಿ ನಡೆಯುತ್ತಿತ್ತು. ಆಗ 'ಅನ್ನಾತೆ' ಸೆಟ್‌ನಲ್ಲಿದ್ದ ಕೆಲವರು ಕೊರೊನಾ ಸೋಂಕಿಗೆ ಗುರಿಯಾದರು. ಅದೇ ಸಮಯದಲ್ಲಿ ರಜನೀಕಾಂತ್‌ಗೆ ಸಹ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು.

  ಇಳಯರಾಜ ಹೊಸ ಸ್ಟುಡಿಯೋಗೆ ಭೇಟಿ ನೀಡಿದ ರಜನಿಕಾಂತ್

  ಹೈದರಾಬಾದ್‌ನಲ್ಲಿಯೇ ಆಸ್ಪತ್ರೆಗೆ ದಾಖಲಾಗಿದ್ದ ರಜನೀಕಾಂತ್‌ಗೆ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದರು. ಅಂತೆಯೇ ರಾಜಕೀಯದಿಂದಲೂ ಹಿಂದೆ ಸರಿಯುವ ಘೋಷಣೆ ಮಾಡಿದ ರಜನೀಕಾಂತ್. ಚಿತ್ರೀಕರಣದಿಂದಲೂ ದೂರ ಉಳಿದರು. ಇದೀಗ ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ.

  ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ 'ಅನ್ನಾತೆ' ಚಿತ್ರೀಕರಣವನ್ನು ಚೆನ್ನೈಗೆ ಸ್ಥಳಾಂತರ ಮಾಡಲಾಗಿದ್ದು, ಅದೇ ಮಾದರಿಯಲ್ಲಿ ಇಲ್ಲಿ ಸಹ ಸೆಟ್ ಹಾಕಲಾಗಿದೆ. 30 ದಿನಗಳ ಶೆಡ್ಯೂಲ್ ನಿಗದಿಪಡಿಸಲಾಗಿದ್ದು. ರಜನೀಕಾಂತ್ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಕಲ ವ್ಯವಸ್ಥೆಯನ್ನೂ ಚಿತ್ರೀಕರಣ ಸ್ಥಳದಲ್ಲಿ ಮಾಡಲಾಗಿದೆ.

  'ಅನ್ನಾತೆ' ಸಿನಿಮಾದಲ್ಲಿ ನಟಿಸುತ್ತಿರುವ ನಯನತಾರಾ, ಕೀರ್ತಿ ಸುರೇಶ್, ಖುಷ್ಬು, ಪ್ರಕಾಶ್ ರೈ, ಮೀನಾ ಇನ್ನಿತರೆ ಕೆಲವು ನಟ-ನಟಿಯರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. 'ಅನ್ನಾತೆ' ಸಿನಿಮಾಕ್ಕೆ ಜಗಪತಿಬಾಬು ಸಹ ಸೇರಿಕೊಂಡಿದ್ದಾರೆ. ಖಡಕ್ ಖಳನ ಪಾತ್ರವನ್ನು ಜಗಪತಿಬಾಬು ನಿರ್ವಹಿಸಲಿದ್ದಾರೆ. ರಜನೀಕಾಂತ್ ಅವರೊಟ್ಟಿಗೆ ಜಗಪತಿ ಬಾಬುಗೆ ಇದು ಮೂರನೇ ಸಿನಿಮಾ.

  'ಅನ್ನಾತೆ' ಸಿನಿಮಾವನ್ನು ಶಿವ ನಿರ್ದೇಶನ ಮಾಡಲಿದ್ದಾರೆ. ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಕಲಾನಿಧಿ ಮಾರನ್.

  English summary
  Rajinikanth starer Annaatthe shooting resume in Chennai. Shooting stopped in December due to Rajinikanth's health problem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X