Don't Miss!
- News
Vande Bharat Express ರೈಲಿನಲ್ಲಿ ಕಂಡುಬಂದ ಕಸದ ರಾಶಿ: ಫೋಟೊ ವೈರಲ್, ಕರ್ತವ್ಯ ಮರೆತ ಜನ ಎಂದ ನೆಟ್ಟಿಗರು
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂಕ್ರಾಂತಿ ಹಬ್ಬಕ್ಕೆ ವಾಲಿಮೈ: ರಿಲೀಸ್ ದಿನಾಂಕ ಘೋಷಿಸಿದ ಬೋನಿ ಕಪೂರ್
ದಕ್ಷಿಣ ಭಾರತದ ನಿರೀಕ್ಷೆಯ ಚಿತ್ರಗಳೆಲ್ಲವೂ ಸಂಕ್ರಾಂತಿ ಹಬ್ಬವನ್ನು ಟಾರ್ಗೆಟ್ ಮಾಡಿವೆ. ಅದರಲ್ಲೂ ತೆಲುಗು ಮತ್ತು ತಮಿಳಿನ ಸ್ಟಾರ್ ನಟರ ಸಿನಿಮಾಗಳು ಅಭಿಮಾನಿಗಳೊಂದಿಗೆ ಪೊಂಗಲ್ ಆಚರಿಸಲು ಸಜ್ಜಾಗಿದ್ದಾರೆ. ಈಗಾಗಲೇ ಸಂಕ್ರಾಂತಿ ಹಬ್ಬದಂದು ನಾವು ಬರ್ತಿದ್ದೇವೆ ಎಂದು ಹಲವು ಚಿತ್ರಗಳು ಪ್ರಕಟಿಸಿದೆ. ಈಗ ಮತ್ತೊಂದು ನಿರೀಕ್ಷೆಯ ಸಿನಿಮಾ ಅದೇ ದಿನ ನಾವು ಬರ್ತೇವೆ ಎಂದು ಘೋಷಿಸಿಕೊಂಡಿದೆ.
ತಮಿಳು ನಟ ಅಜಿತ್ ಕುಮಾರ್ ನಟನೆಯಲ್ಲಿ ತಯಾರಾಗಿರುವ ಭಾರಿ ನಿರೀಕ್ಷೆಯ ಚಿತ್ರ ವಾಲಿಮೈ ಸಂಕ್ರಾಂತಿ ಹಬ್ಬಕ್ಕೆ ತೆರೆಮೇಲೆ ಬರುವುದು ಖಚಿತವಾಗಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕ ಬೋನಿ ಕಪೂರ್ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತಪಡಿಸಿದ್ದಾರೆ. ''ಸಂಕ್ರಾಂತಿ ಹಬ್ಬಕ್ಕೆ ವಾಲಿಮೈ ಚಿತ್ರ ಥಿಯೇಟರ್‌ಗೆ ಬರುತ್ತಿದೆ ಎಂದು ಹೇಳಲು ನನಗೆ ಸಂತಸವಾಗಿದೆ'' ಎಂದು ಪೋಸ್ಟ್ ಹಾಕಿದ್ದಾರೆ.
ಸಂಕ್ರಾಂತಿ
ವಾರ್‌ಗೆ
ಮತ್ತೊಂದು
ಮೆಗಾ
ಸಿನಿಮಾ
ಎಂಟ್ರಿ
ಅಜಿತ್ ಹುಟ್ಟುಹಬ್ಬದ ಹಿನ್ನೆಲೆ 'ವಾಲಿಮೈ' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಅದಕ್ಕೂ ಮುಂಚೆ ಚಿತ್ರದ ಮೊದಲ ಹಾಡು ರಿಲೀಸ್ ಮಾಡಲಾಗಿದೆ. ಯುವನ್ ಶಂಕರ್ ರಾಜಾ ಹಾಗೂ ಅನುರಾಗ್ ಕುಲಕರ್ಣಿ ಧ್ವನಿಯಲ್ಲಿ ಮೂಡಿಬಂದಿದ್ದ ಈ ಹಾಡಿಗೆ ಭರ್ಜರಿ ರೆಸ್‌ಪಾನ್ಸ್ ಸಿಕ್ಕಿತ್ತು. ಮುಂದೆ ಓದಿ...

ಅಜಿತ್-ವಿನೋದ್ ಕಾಂಬಿನೇಷನ್
ವಾಲಿಮೈ ಚಿತ್ರವನ್ನು ಎಚ್ ವಿನೋದ್ ನಿರ್ದೇಶನ ಮಾಡುತ್ತಿದ್ದು, ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಬಂಡವಾಳ ಹಾಕಿದ್ದಾರೆ. ಇದಕ್ಕೂ ಮುಂಚೆ 'ನೇರ್ಕೊಂಡ ಪಾರ್ವೈ' ಚಿತ್ರ ನಿರ್ದೇಶಿಸಿದ್ದ ಎಚ್ ವಿನೋದ್ ಎರಡನೇ ಸಲ ಅಜಿತ್ ಜೊತೆ ಕೆಲಸ ಮಾಡ್ತಿದ್ದಾರೆ. ದಕ್ಷಿಣ ಚಿತ್ರರಂಗದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಈ ಸಿನಿಮಾದಲ್ಲಿ ಹುಮಾ ಖುರೇಶಿ ಹಾಗೂ ತೆಲುಗು ನಟ ಕಾರ್ತಿಕೇಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸರ್ಕಾರು ವಾರಿ ಪಾಟ
ಸಂಕ್ರಾಂತಿ ಹಬ್ಬಕ್ಕೆ ಈಗಾಗಲೇ ಹಲವು ಚಿತ್ರಗಳು ದಿನಾಂಕ ಲಾಕ್ ಮಾಡಿ ಕೂತಿವೆ. ತೆಲುಗು ನಟ ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಟಾಲಿವುಡ್ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡುತ್ತಿರುವ ಈ ಚಿತ್ರದಲ್ಲಿ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಮೊದಲ ಸಲ ಒಟ್ಟಿಗೆ ತೆರೆಹಂಚಿಕೊಂಡಿದ್ದಾರೆ.
ಪ್ರಭಾಸ್
vs
ಮಹೇಶ್
ಬಾಬು:
ಸಂಕ್ರಾಂತಿ
ಹಬ್ಬದಲ್ಲಿ
'ಬಿಗ್'
ವಾರ್

ಪ್ರಭಾಸ್ 'ರಾಧೆಶ್ಯಾಮ್'
ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ 'ರಾಧೆಶ್ಯಾಮ್' ಸಂಕ್ರಾಂತಿ ಹಬ್ಬಕ್ಕೆ ಚಿತ್ರಮಂದಿರಕ್ಕೆ ಬರ್ತಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಪ್ರಭಾಸ್ ಜೊತೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ.

'ಭಿಮ್ಲಾ ನಾಯಕ್' ಪ್ರವೇಶ
ಇನ್ನು ಪವನ್ ಕಲ್ಯಾಣ್-ರಾಣಾ ದಗ್ಗುಬಾಟಿ ನಟನೆಯ ಭಿಮ್ಲಾ ನಾಯಕ್ ಚಿತ್ರವೂ ಸಂಕ್ರಾಂತಿ ಹಬ್ಬಕ್ಕೆ ಥಿಯೇಟರ್‌ಗೆ ಬರ್ತಿದೆ. ಇದರ ಜೊತೆಗೆ ವೆಂಕಟೇಶ್ ಹಾಗೂ ವರುಣ್ ತೇಜ ನಟನೆಯ 'ಎಫ್ 3 'ಸಿನಿಮಾನೂ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಲಿದೆ.

ಆರ್‌ಆರ್‌ಆರ್ ಯಾವಾಗ?
ಸಂಕ್ರಾಂತಿ ಹಬ್ಬಕ್ಕೂ ಮೊದಲು 2021ರ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ ಭಾಗ 1', ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ರಿಲೀಸ್ ದಿನಾಂಕ ಘೋಷಿಸಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅಣ್ಣಾತ್ತೆ ಸಿನಿಮಾ ದೀಪಾವಳಿ ಹಬ್ಬಕ್ಕೆ ನವೆಂಬರ್ 4 ರಂದು ರಿಲೀಸ್ ಆಗಲಿದೆ. ಇದೆಲ್ಲದರ ನಡುವೆ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಈ ಹಿಂದಿನ ವರದಿಯಂತೆ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡಲು ನಿರ್ಮಾಪಕರು ಚಿಂತಿಸಿದರು. ಆದರೆ, ರಾಜಮೌಳಿ ಮನವಿಗೆ ಪ್ರಭಾಸ್ ಒಪ್ಪದ ಕಾರಣ ಆ ದಿನಾಂಕದಿಂದ ಹಿಂದೆ ಸರಿದಿದೆ ಎನ್ನಲಾಗಿದೆ.