ಮಲೈಕಾ ಅರೋರಾ ನೃತ್ಯಕ್ಕೆ ಮನಸೋತ ರಾಧಿಕಾ
2005ರಲ್ಲಿ ತೆಲುಗು ಚಿತ್ರವೊಂದರ ಚಿತ್ರೀಕರಣದಲ್ಲಿದ್ದ ರಾಧಿಕಾ, ವೈಯಕ್ತಿಕ ಕಾರಣದಿಂದ ಚಿತ್ರರಂಗಕ್ಕೆ ದಿಢೀರ್ ನಿವೃತ್ತಿ ಘೋಷಿಸಿದ್ದರು. ಈಗ ಮತ್ತೆ ಆ ಚಿತ್ರವನ್ನು ಮರುಚಿತ್ರೀಕರಣ ಮಾಡಲಾಗುತ್ತಿದೆ. ಅದಕ್ಕಾಗಿ ರಾಧಿಕಾ ಮತ್ತೆ ಬಣ್ಣಹಚ್ಚಿದ್ದಾರೆ. ಆ ಚಿತ್ರದ ಚಿತ್ರೀಕರಣ ಮುಗಿದ ತಕ್ಷಣ, ಮತ್ತೆ ನಟಿಸಲು ರಾಧಿಕಾ ಮನಸ್ಸು ಮಾಡಿದ್ದಾರೆ.
ಸದ್ಯದಲ್ಲೇ ಕೋಡಿ ರಾಮಕೃಷ್ಣ ನಿರ್ದೇಶನದ ಚಿತ್ರದಲ್ಲಿ ನಟಿಸುವ ಮೂಲಕ ರಾಧಿಕಾ ಹೊಸ ಇನ್ನಿಂಗ್ಸ್ ಪ್ರಾರಂಭಿಸಲಿದ್ದಾರೆ. ತಮ್ಮ ಈಗಿನ ಸ್ಥಿತಿಗತಿಗನುಗುಣವಾಗಿ ಹೊಂದಿಕೆಯಾಗಬಲ್ಲ ಪಾತ್ರಗಳಲ್ಲಿ ಮಾತ್ರ ತಾವು ಇನ್ನು ಮುಂದೆ ನಟಿಸುವುದಾಗಿ ರಾಧಿಕಾ ಘೋಷಿಸಿದ್ದಾರೆ. ಮದುವೆಯಾಗಿ ಮಗುವಿನ ತಾಯಿಯಾಗಿರುವ ತಾವು ಇನ್ನು ದೇಹಪ್ರದರ್ಶನ ಮಾಡುವುದಿಲ್ಲ ಎಂದಿದ್ದಾರೆ.
"ದಬಾಂಗ್ ನಲ್ಲಿ ಮಲೈಕಾ ಅರೋರಾಖಾನ್ ಮಾಡಿದ ಐಟಂ ಸಾಂಗ್ 'ಮುನ್ನಿ ಬದ್ನಾಮ್ ಹುಯಿ...(Munni Badnaam Hui) ಹಾಡನ್ನು ನಾನು ಬಹಳ ಇಷ್ಟಪಟ್ಟಿದ್ದೇನೆ. ಅಂತಹ ಹಾಡಿಗೆ ನರ್ತಿಸಲು ಕಾದಿದ್ದೇನೆ. ದೇಹ ಪ್ರದರ್ಶನವನ್ನು ಮಾಡದೇ ಸಮರ್ಥವಾಗಿ ಅಂತಹ ಹಾಡಿಗೆ ಹೆಜ್ಜೆ ಹಾಕುವ ಸಾಮರ್ಥ್ಯ ನನಗಿದೆ. ಆದರೆ, ಇಲ್ಲಿಯವೆರೆಗೂ ಚಿತ್ರರಂಗ ನನ್ನ ನೃತ್ಯ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡಿಲ್ಲ" ಎಂದಿದ್ದಾರೆ.
ತೆಲುಗಿನ ಚಿತ್ರದ ಮರುಚಿತ್ರೀಕರಣದ ನಂತರ ರಾಧಿಕಾರನ್ನು ಕನ್ನಡ ಪ್ರೇಕ್ಷಕರು ಮತ್ತೆ ಕನ್ನಡ ಚಿತ್ರಗಳಲ್ಲಿ ನೋಡಬಹುದು. ಕೋಡಿ ರಾಮಕೃಷ್ಣ ಚಿತ್ರದಲ್ಲಿ ನಟಿಸಿದ ನಂತರ ಮತ್ತೆ ಚಿತ್ರ ನಿರ್ಮಾನಕ್ಕೆ ಮುಂದಾಗಲಿದ್ದಾರಂತೆ ರಾಧಿಕಾ. ಒಟ್ಟಿನಲ್ಲಿ ನಟಿ ಹಾಗೂ ನಿರ್ಮಾಪಕಿಯಾಗಿ ರಾಧಿಕಾ ಚಿತ್ರರಂಗದ ಪಯಣವನ್ನು ಮುಂದುವರಿಸಲಿದ್ದಾರೆ ಎಂಬುದು ಸದ್ಯಕ್ಕೆ ಸಿಕ್ಕ ಮಾಹಿತಿ. (ಒನ್ ಇಂಡಿಯಾ ಕನ್ನಡ)


Click it and Unblock the Notifications












