For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಿರ್ದೇಶಕನ ವಿರುದ್ಧ ನಟಿ ಕಿಡಿ: ಅಸಭ್ಯ ರೀತಿ ನಿಂದನೆ

  |

  ವಿವಾದ ಹಾಗೂ ನಟಿ ಶ್ರೀರೆಡ್ಡಿ ನೆರೆ-ಹೊರೆಯವರು! ತೆಲುಗು ಚಿತ್ರರಂಗದ ಸ್ಟಾರ್ ನಟ-ನಟಿ, ನಿರ್ದೇಶಕ, ನಿರ್ಮಾಪಕರು ಹಲವರನ್ನು ತಮ್ಮ ಹರಿತವಾದ ಮಾತುಗಳಿಂದ ಚುಚ್ಚಿದ್ದಾರೆ ನಟಿ ಶ್ರೀರೆಡ್ಡಿ. ಮೀ ಟೂ ಸಮಯದಲ್ಲಿ ಅರೆಬೆತ್ತಲೆಯಾಗಿ ಶ್ರೀರೆಡ್ಡಿ ಮಾಡಿದ್ದ ಪ್ರತಿಭಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

  ಮೀ ಟೂ ಆರೋಪ, ವಿವಾದದ ಬಳಿಕವೂ ತಣ್ಣಗಾಗದ ನಟಿ ಶ್ರೀರೆಡ್ಡಿ ಅವಕಾಶ ಸಿಕ್ಕಾಗೆಲ್ಲಾ ತೆಲುಗು-ತಮಿಳಿನ ಸ್ಟಾರ್ ನಟ-ನಟಿಯರು, ನಿರ್ದೇಶಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿರುತ್ತಾರೆ. ಸಾಮಾನ್ಯವಾಗಿ ತೀರಾ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುತ್ತಾರೆ.

  'ಸಮಂತಾ ಬಿಕಿನಿ ವೇಸ್ಟ್' ಎಂದು ತನ್ನ ಬಿಕಿನಿ ಚಿತ್ರ ಹಂಚಿಕೊಂಡ ನಟಿ'ಸಮಂತಾ ಬಿಕಿನಿ ವೇಸ್ಟ್' ಎಂದು ತನ್ನ ಬಿಕಿನಿ ಚಿತ್ರ ಹಂಚಿಕೊಂಡ ನಟಿ

  ಈಗಲೂ ಸಹ ತೆಲುಗಿನ ಸ್ಟಾರ್ ನಿರ್ದೇಶಕರೊಬ್ಬರ ಮೇಲೆ ಕಿಡಿಕಾರಿದ್ದಾರೆ ನಟಿ ಶ್ರೀರೆಡ್ಡಿ, ಅಶ್ಲೀಲ ಸಂಜ್ಞೆಗಳನ್ನು ಮಾಡಿ ನಿರ್ದೇಶಕನನ್ನು ಹೀಗಳೆದಿದ್ದಾರೆ, ತನ್ನ ತಂಟೆಗೆ ಬರಬೇಡವೆಂದು ಎಚ್ಚರಿಕೆ ನೀಡಿದ್ದಾರೆ.

  ಜಯಂ, ಚಿತ್ರಂ, ನುವ್ವು ನೇನು, ನಿಜಂ, ಔನನ್ನ ಕಾದನ್ನ ಅಂತಹಾ ಹಿಟ್ ಸಿನಿಮಾಗಳನ್ನು ನೀಡಿರುವ ತೇಜ ವಿರುದ್ಧ ಗರಂ ಆಗಿದ್ದಾರೆ ನಟಿ ಶ್ರೀ ರೆಡ್ಡಿ.

  ನಟಿ ಸಮಂತಾ ಬಗ್ಗೆ ಶ್ರೀರೆಡ್ಡಿ ಕೀಳು ಹೇಳಿಕೆನಟಿ ಸಮಂತಾ ಬಗ್ಗೆ ಶ್ರೀರೆಡ್ಡಿ ಕೀಳು ಹೇಳಿಕೆ

  ಕಿಡಿ ಕಾರಿದ ನಟಿ ಶ್ರೀ ರೆಡ್ಡಿ

  ಕಿಡಿ ಕಾರಿದ ನಟಿ ಶ್ರೀ ರೆಡ್ಡಿ

  'ನೀನು ನನ್ನ ವಿರುದ್ಧ ಮಾಡಿರುವ ಕಮೆಂಟ್‌ಗಳನ್ನು ಯೂಟ್ಯೂಬ್‌ನಲ್ಲಿ ನೋಡಿದೆ, ನೀನು ನನ್ನ ಕೂದಲಿಗೆ ಸಮವಷ್ಟೆ, ರಾಮ್ ಗೋಪಾಲ್ ವರ್ಮಾ ಬಗ್ಗೆಯೂ ಮಾತನಾಡಿದ್ದೀಯ, ಆತನ ಚಪ್ಪಲಿಗೂ ನೀನು ಸಮವಲ್ಲ' ಎಂದು ಫೇಸ್‌ಬುಕ್ ವಿಡಿಯೋದಲ್ಲಿ ಹರಿಹಾಯ್ದಿದ್ದಾರೆ ನಟಿ ಶ್ರೀ ರೆಡ್ಡಿ.

  'ನೀನು ನಟಿಯರನ್ನು ಹೊಡೆಯುತ್ತೀಯಾ ಎಂದು ಗೊತ್ತಾಯಿತು'

  'ನೀನು ನಟಿಯರನ್ನು ಹೊಡೆಯುತ್ತೀಯಾ ಎಂದು ಗೊತ್ತಾಯಿತು'

  'ತೆಲುಗು ಚಿತ್ರರಂಗ ಏನು ನಿನ್ನದಾ? ನೀನು ಒಳ್ಳೆಯ ನಿರ್ದೇಶಕ ಎಂದುಕೊಂಡಿದ್ದೆ, ನಾನು ನಿನ್ನ ಅಭಿಮಾನಿ ಆಗಿದ್ದೆ. ಆದರೆ ನೀನು ನಟಿಯರನ್ನು ಹೊಡೆಯುತ್ತೀಯ, ಅವರನ್ನು ಟಾರ್ಚರ್ ಮಾಡುತ್ತೀಯ ಎಂದು ಗೊತ್ತಾದ ಮೇಲೆ ನಾನು ನಿನ್ನನ್ನು ದ್ವೇಷಿಸಲು ಪ್ರಾರಂಭಿಸಿದೆ' ಎಂದಿದ್ದಾರೆ ಶ್ರೀರೆಡ್ಡಿ.

  ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದ ತೇಜ

  ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದ ತೇಜ

  ಯೂಟ್ಯೂಬ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ತೇಜಾ ಗೆ 'ಶ್ರೀರೆಡ್ಡಿ, ರಾಮ್ ಗೋಪಾಲ್ ವರ್ಮಾ ಅವರುಗಳು ತೆಲುಗು ಇಂಡಸ್ಟ್ರಿಯನ್ನು ರಸ್ತೆಗೆ ಎಳೆದು ತಂದರು ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?' ಎಂದು ಕೇಳುತ್ತಾರೆ. ಇದರಿಂದ ಕೆರಳುವ ತೇಜಾ, 'ವರ್ಮಾ ಅಂತಹಾ ಕೆಲವರು ಏನೋ ಹೇಳಿಬಿಟ್ಟ ಮಾತ್ರಕ್ಕೆ ಚಿತ್ರರಂಗದ ಕತೆ ಮುಗಿದಂತಲ್ಲ, ಈ ಚಿತ್ರರಂಗ ನಮ್ಮದು, ನಮ್ಮ ಹಾಗೂ ಪ್ರೇಕ್ಷಕನ ನಡುವಿನ ಬಂಧವನ್ನು ಯಾರೂ ಏನೂ ಮಾಡಲು ಆಗದು' ಎಂದಿದ್ದಾರೆ. ಇದು ಶ್ರೀರೆಡ್ಡಿಯನ್ನು ಕೆರಳಿಸಿದೆ.

  ಶ್ರೀರೆಡ್ಡಿ ಪರ ಮನವಿ ಮಾಡಿದ್ದ ತೇಜ

  ಶ್ರೀರೆಡ್ಡಿ ಪರ ಮನವಿ ಮಾಡಿದ್ದ ತೇಜ

  ಶ್ರೀರೆಡ್ಡಿ ಅರೆಬೆತ್ತಲೆ ಪ್ರತಿಭಟನೆ ಮಾಡಿದಾಗ ಇದೇ ತೇಜಾ ಆಕೆಯನ್ನು ಕರೆಸಿ ಮಾತನಾಡಿ, ತನ್ನ ಎರಡು ಸಿನಿಮಾದಲ್ಲಿ ಆಕೆಗೆ ಅವಕಾಶ ಕೊಡುತ್ತೇನೆ ಎಂದು ಹೇಳಿದ್ದರು. ಸಿನಿಮಾ ರಂಗದ ಇತರ ನಿರ್ದೇಶಕರುಗಳು ಸಹ ಶ್ರೀ ರೆಡ್ಡಿಗೆ ಅವಕಾಶ ಕೊಡಿರೆಂದು ಮನವಿ ಮಾಡಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಇಬ್ಬರ ನಡುವೆ ಬಿರುಕು ಬಂದಿದೆ.

  English summary
  Actress Sri Reddy scoled director Teja by using bad words in facebook. She uploaded a video in facebook.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X