For Quick Alerts
  ALLOW NOTIFICATIONS  
  For Daily Alerts

  'ಸ್ಟಾರ್ ನಟರು ತಮ್ಮ ಮಕ್ಕಳ ಜೀವನ ಹಾಳು ಮಾಡುತ್ತಿದ್ದಾರೆ'

  |

  ಜಯಂ, ಔನನ್ನ ಕಾದನ್ನ, ಚಿತ್ರಂ ಅಂಥಹಾ ಸೂಪರ್ ಡೂಪರ್ ಪ್ರೇಮಕತೆಗಳನ್ನು ನೀಡಿರುವ ನಿರ್ದೇಶಕ ತೇಜ, ವಿವಾದಕ್ಕೆ ಗುರಿಯಾಗುವ ಹೇಳಿಕೆಗಳನ್ನು ನೀಡುವುದರಲ್ಲಿಯೂ ಮುಂದೆ ಇರುತ್ತಾರೆ.

  ಆಗಾಗ್ಗೆ ತೆಲುಗು ಸಿನಿಮಾ ಉದ್ಯಮದ ಬಗ್ಗೆ, ಉದ್ಯಮದ ನಟ, ನಿರ್ದೇಶಕರುಗಳ ಬಗ್ಗೆ ವ್ಯತಿರಿಕ್ತವಾಗಿ ಹೇಳಿಕೆಗಳನ್ನು ನೀಡಿ ಸುದ್ದಿಯಾಗುತ್ತಲೇ ಇರುತ್ತಾರೆ.

  ಇದೀಗ ಸ್ಟಾರ್ ನಟರು ಹಾಗೂ ಅವರ ಮಕ್ಕಳ ಬಗ್ಗೆ ಹೇಳಿಕೆ ನೀಡಿದ್ದಾರೆ ನಿರ್ದೇಶಕ ತೇಜ. ಸ್ಟಾರ್ ನಟ-ನಟಿಯರು ತಮ್ಮ ಮಕ್ಕಳ ಜೀವನವನ್ನು ಹಾಳು ಮಾಡುತ್ತಿದ್ದಾರೆ. ನಟ-ನಟಿಯರು ಮಾಡುತ್ತಿರುವ ಕೆಲಸದಿಂದ ಅವರ ಮಕ್ಕಳು ಜೀವನದಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗಿ ಬರುತ್ತಿದೆ ಎಂದಿದ್ದಾರೆ ತೇಜ.

  'ನಟರ ಮಕ್ಕಳು ಯಾರೆಂಬುದೇ ಗೊತ್ತಾಗುತ್ತಿರಲಿಲ್ಲ'

  'ನಟರ ಮಕ್ಕಳು ಯಾರೆಂಬುದೇ ಗೊತ್ತಾಗುತ್ತಿರಲಿಲ್ಲ'

  ಈ ಹಿಂದೆ ಖ್ಯಾತ ನಟರ ಮಕ್ಕಳು ಸಿನಿಮಾ ನಾಯಕರೋ, ನಾಯಕಿಯರೋ ಆಗುವವರೆಗೂ ಅವರ ಮಕ್ಕಳು ಯಾರೆಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ, ಸ್ಟಾರ್ ನಟ-ನಟಿಯರೇ ತಮ್ಮ ಸಣ್ಣ ಮಕ್ಕಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಇದು ಸರಿಯಲ್ಲ ಎಂದಿದ್ದಾರೆ ನಿರ್ದೇಶಕ ತೇಜ.

  ಮಕ್ಕಳೊಂದಿಗೆ ಅನ್ಯರ ವರ್ತನೆ ಬದಲಾಗುತ್ತದೆ: ತೇಜ

  ಮಕ್ಕಳೊಂದಿಗೆ ಅನ್ಯರ ವರ್ತನೆ ಬದಲಾಗುತ್ತದೆ: ತೇಜ

  ಸಿನಿಮಾ ನಟರ ಮಕ್ಕಳು ಎಂಬುದು ಎಲ್ಲರಿಗೂ ಗೊತ್ತಾದರೆ, ಮಕ್ಕಳೊಂದಿಗೆ ಜನರ ವರ್ತನೆ ಬದಲಾಗುತ್ತದೆ. ಎಲ್ಲೆಡೆ ಅವರಿಗೆ ಮನ್ನಣೆ ದೊರೆಯಲು ಪ್ರಾರಂಭವಾಗುತ್ತದೆ. ಶಾಲೆಯಲ್ಲಿ ಸಹ ಅವರ ಸಹಪಾಠಿಗಳ ವರ್ತನೆ, ಶಿಕ್ಷಕರ ವರ್ತನೆ ಬೇರೆಯಾಗುತ್ತದೆ ಇದು ಮಗುವಿನ ಮಾನಸಿಕತೆ ಮೇಲೆ ಪರಿಣಾಮ ಬೀಳಬಹುದು ಎಂದಿದ್ದಾರೆ ತೇಜಾ.

  ಮಕ್ಕಳ ಭದ್ರತೆಗೂ ಸಮಸ್ಯೆ ಆಗುತ್ತದೆ: ತೇಜ

  ಮಕ್ಕಳ ಭದ್ರತೆಗೂ ಸಮಸ್ಯೆ ಆಗುತ್ತದೆ: ತೇಜ

  ಅಷ್ಟೆ ಅಲ್ಲದೆ ಮಕ್ಕಳ ಭದ್ರತೆಗೂ ಸಮಸ್ಯೆ ಆಗುತ್ತದೆ. ಮಕ್ಕಳ ಚಿತ್ರಗಳನ್ನು ಹಂಚಿಕೊಂಡು ಬಹಿರಂಗಗೊಳಿಸುವುದರಿಂದ ಮಾಧ್ಯಮಗಳ ಕಣ್ಣು ಸಹ ಮಕ್ಕಳ ಮೇಲೆ ಬಿದ್ದು, ಮಕ್ಕಳಿಗೆ ಅನಗತ್ಯ ಒತ್ತಡ ಪ್ರಾರಂಭವಾಗುತ್ತದೆ. ಇದು ಮಕ್ಕಳ ಮಾನಸಿಕ ಸಂತುಲನವನ್ನೂ ಸಹ ಹಾಳು ಮಾಡಬಹುದು ಎಂದಿದ್ದಾರೆ ತೇಜ.

  ಉಲ್ಟಾ ಹೊಡೆದ Rajni ರಾಜಕೀಯ ಜೀವನ | Filmibeat Kannada
  'ಸ್ಟಾರ್ ನಟರು ವೈಯಕ್ತಿಕ ಜೀವನದ ಬಗ್ಗೆ ಬಹಿರಂಗಗೊಳಿಸಬಾರದು'

  'ಸ್ಟಾರ್ ನಟರು ವೈಯಕ್ತಿಕ ಜೀವನದ ಬಗ್ಗೆ ಬಹಿರಂಗಗೊಳಿಸಬಾರದು'

  ಸ್ಟಾರ್ ನಟರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಿರಂಗವೇ ಗೊಳಿಸಬಾರದು ಎಂದಿದ್ದಾರೆ ತೇಜ. ಸಾಮಾನ್ಯವಾಗಿ ಸಿನಿಮಾ ನೋಡಲು ಬರುವುದು 18 ರಿಂದ 30 ರ ಒಳಗಿನ ಮಂದಿ ಅದರಲ್ಲಿ ಅವಿವಾಹಿತರೇ ಹೆಚ್ಚು. ತಮ್ಮ ಮೆಚ್ಚಿನ ನಾಯಕನಿಗೆ ಮದುವೆ ಆಗಿ ಮಕ್ಕಳಿದ್ದಾರೆ ಎಂಬುದು ಗೊತ್ತಾದರೆ ಅವರು ನಟನನ್ನು ಮೆಚ್ಚದೇ ಹೋಗಬಹುದು ಎಂದಿದ್ದಾರೆ ತೇಜ.

  English summary
  Telugu movie director Teja said star actors ruining their Kids future by posting their pictures in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X