For Quick Alerts
  ALLOW NOTIFICATIONS  
  For Daily Alerts

  ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾದ ಸಂಕಲನಕಾರ ಶ್ರೀಕರ್ ಪ್ರಸಾದ್ ಹೆಸರು

  |

  ಖ್ಯಾತ ಸಂಕಲನಕಾರ ಶ್ರೀಕರ್ ಪ್ರಸಾದ್ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆಯಾಗಿದೆ. ಭಾರತದ ಅತಿ ಹೆಚ್ಚು ಭಾಷೆಯ ಸಿನಿಮಾಗಳ ಎಡಿಟರ್ ಎನ್ನುವ ದಾಖಲೆ ಅವರ ಹೆಸರಿನಲ್ಲಿದೆ.

  ಶ್ರೀಕರ್ ಪ್ರಸಾದ್ ಮೂಲತಃ ಚೆನ್ನೈನವರು. ತೆಲುಗು ಸಿನಿಮಾದ ಮೂಲಕ ತಮ್ಮ ಕೆರಿಯರ್ ಶುರು ಮಾಡಿದರು. 7 ಬಾರಿ ಅತ್ಯುತ್ತಮ ಸಂಕಲನಕಾರ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡರು. ಅಲ್ಲದೆ, 2013 ರಲ್ಲಿ 'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್'ನ 'ಪಿಪಲ್ ಆಫ್ ದಿ ಹಿಯರ್ 2013'ನಲ್ಲಿ ಅವರ ಹೆಸರು ಇತ್ತು.

  ತೆರೆಮೇಲೆ ಮೊದಲು 'ಕಿಸ್' ದೃಶ್ಯ ಮಾಡಿದ ನಟಿಯ ರೋಚಕ ಕಥೆತೆರೆಮೇಲೆ ಮೊದಲು 'ಕಿಸ್' ದೃಶ್ಯ ಮಾಡಿದ ನಟಿಯ ರೋಚಕ ಕಥೆ

  ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ನೇಪಾಳಿ, ಇಂಗ್ಲೀ‍ಷ್, ಬೆಂಗಾಲಿ, ಅಸ್ಸಾಮಿ, ಒಡಿಯಾ, ಪಂಜಾಬಿ ಸೇರಿದಂತೆ ಭಾರತದ 17 ಭಾಷೆಯ ಸಿನಿಮಾಗಳಿಗೆ ಶ್ರೀಕರ್ ಪ್ರಸಾದ್ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ.

  'ದಿ ಟೆರರಿಸ್ಟ್', 'ವಾನಪ್ರಸ್ಥಂ', 'ರಾಖ್', 'ಫಿರಾಕ್' ಶ್ರೀಕರ್ ಪ್ರಸಾದ್ ಸಂಕಲನ ಮಾಡಿರುವ ಪ್ರಮುಖ ಸಿನಿಮಾಗಳಾಗಿವೆ. ಈ ಸಿನಿಮಾಗಳಿಗಾಗಿ ಅವರು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

  ಭಾರತಕ್ಕೆ 'ಆಸ್ಕರ್' ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ ಏಕೆ?ಭಾರತಕ್ಕೆ 'ಆಸ್ಕರ್' ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ ಏಕೆ?

  ಮಣಿರತ್ನಂ, ರಾಜಮೌಳಿ, ಶಂಕರ್‌ರಂತಹ ದೊಡ್ಡ ದೊಡ್ಡ ನಿರ್ದೇಶಕರ ಜೊತೆಗೆ ಶ್ರೀಕರ್ ಪ್ರಸಾದ್ ಕೆಲಸ ಮಾಡಿದ್ದಾರೆ. 'ಸೂಪರ್ 30', 'ಸೈರಾ ನರಸಿಂಹ ರೆಡ್ಡಿ', 'ದರ್ಬಾರ್', 'ಸಾಹೋ' ಅವರ ಇತ್ತೀಚಿಗಿನ ಸಿನಿಮಾಗಳಾಗಿವೆ. 'ಇಂಡಿಯನ್ 2' ಹಾಗೂ 'ಆರ್ ಆರ್ ಆರ್' ಚಿತ್ರಗಳಲ್ಲಿಯೂ ಶ್ರೀಕರ್ ಪ್ರಸಾದ್ ಕೆಲಸ ಮಾಡುತ್ತಿದ್ದಾರೆ.

  English summary
  Movie Editor Sreekar Prasad enters limca book of records.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X