For Quick Alerts
  ALLOW NOTIFICATIONS  
  For Daily Alerts

  "ನಿಮ್ಮ ಆಸ್ಕರ್ ಅವಾರ್ಡ್ ಮುಟ್ಟಲು ಅವಕಾಶ ಕೊಡ್ತೀರಾ?" ಎಂದು ಕೇಳಿದ ಶಾರುಕ್: ರಾಮ್ ಚರಣ್ ಏನಂದ್ರು?

  |

  ಎಸ್‌. ಎಸ್ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ರಾಮ್‌-ಭೀಮ್ ಆಗಿ ರಾಮ್‌ಚರಣ್, ಜ್ಯೂ. ಎನ್‌ಟಿಆರ್ ಅಬ್ಬರಿಸಿದ್ದರು. ಭಾರತೀಯ ಪ್ರೇಕ್ಷಕರು ಮಾತ್ರವಲ್ಲ. ಹಾಲಿವುಡ್ ಪ್ರೇಕ್ಷಕರು, ಫಿಲ್ಮ್ ಮೇಕರ್ಸ್‌ ಕೂಡ ಜಕ್ಕಣ್ಣ ಅಂಡ್ ಟೀಂ ಪ್ರಯತ್ನಕ್ಕೆ ಬಹುಪರಾಕ್ ಹೇಳಿತ್ತು. ಸದ್ಯ 'RRR' ಆಸ್ಕರ್ ರೇಸ್‌ನಲ್ಲಿದೆ. ಯಾವುದಾದರೂ ವಿಭಾಗದಲ್ಲಿ ಚಿತ್ರಕ್ಕೆ ಆಸ್ಕರ್ ಲಭಿಸುವುದು ಗ್ಯಾರೆಂಟಿ ಎನ್ನಲಾಗುತ್ತಿದೆ.

  ಶಾರುಕ್ ಖಾನ್ ನಟನೆಯ 'ಪಠಾಣ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಚಿತ್ರದ ತೆಲುಗು ವರ್ಷನ್ ಟ್ರೈಲರ್‌ನ ರಾಮ್‌ಚರಣ್ ತೇಜಾ ರಿಲೀಸ್ ಮಾಡಿದ್ದಾರೆ. ಅದಕ್ಕೆ ಧನ್ಯವಾದ ತಿಳಿಸಿರುವ ನಟ ಶಾರುಕ್ ಖಾನ್ ಒಂದು ವಿಶೇಷ ಬೇಡಿಕೆಯನ್ನು ಇಟ್ಟಿದ್ದಾರೆ. ಇಂಗ್ಲೀಷ್‌ನಲ್ಲಿ ಮಾತ್ರವಲ್ಲದೇ ತೆಲುಗಿನಲ್ಲೂ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಚರಣ್‌ ಕೂಡ ಓಕೆ ಎಂದು ಪ್ರತಿಕ್ರಿಯಿಸಿದ್ದಾರೆ. ಸೂಪರ್‌ ಸ್ಟಾರ್‌ಗಳಿಬ್ಬರ ಟ್ವಿಟ್ಟರ್ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  'ಪಠಾಣ್' ಸಿನಿಮಾ ಟ್ರೈಲರ್ ರಿಲೀಸ್‌ ಮಾಡಿ ಬೆಂಬಲಿಸಿದ ಚರಣ್‌ಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ ಕಿಂಗ್‌ಖಾನ್, "ನಿಮ್ಮ 'RRR' ತಂಡ ಆಸ್ಕರ್ ಅವಾರ್ಡ್ ಭಾರತಕ್ಕೆ ತಂದಾಗ, ಒಮ್ಮೆ ಅದನ್ನು ಮುಟ್ಟಲು ನನಗೆ ಅವಕಾಶ ಮಾಡಿಕೊಡಿ" ಎಂದು ಬರೆದಿದ್ದಾರೆ. ಅದಕ್ಕೆ ಇದೀಗ ಚರಣ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ಖಂಡಿತ ಶಾರುಕ್ ಖಾನ್ ಸರ್, ಆ ಪ್ರಶಸ್ತಿ ನಮ್ಮ ಭಾರತೀಯ ಚಿತ್ರರಂಗಕ್ಕೆ ಸೇರಿದ್ದು" ಎಂದಿದ್ದಾರೆ. ಸದ್ಯ ಈ ಟ್ವೀಟ್‌ಗಳು ಸಖತ್ ಸದ್ದು ಮಾಡ್ತಿದೆ.

  Please let me touch Oscar : ShahRukh Khan- Ramcharans Twitter conversation goes viral

  ಸಿದ್ಧಾರ್ಥ್ ಆನಂದ್ ನಿರ್ದೇಶನದ ಸ್ಪೈ ಥ್ರಿಲ್ಲರ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಪಠಾಣ್' ಜನವರಿ 25ಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಶಾರುಕ್ ಖಾನ್ ಸೈನಿಕನಾಗಿ ಅಬ್ಬರಿದರೆ ಜಾನ್ ಅಬ್ರಹಾಂ ಉಗ್ರನಾಗಿ ಅಖಾಡಕ್ಕೆ ಇಳಿದಿದ್ದಾರೆ. ನಾಯಕಿಯಾಗಿ ಮತ್ತೊಂದು ಮುಖ್ಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಹಿಂದಿ ಮಾತ್ರವಲ್ಲದೇ ತೆಲುಗು, ತಮಿಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ. ತಮಿಳು ಟ್ರೈಲರ್‌ನಲ ಇಳಯ ದಳಪತಿ ವಿಜಯ್ ರಿಲೀಸ್ ಮಾಡಿರುವುದು ವಿಶೇಷ.

  ರಾಮ್‌ಚರಣ್ ತೇಜಾ ಸದ್ಯ ಶಂಕರ್ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ನಟಿಸ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸೋಶಿಯಲ್ ಮೆಸೇಜ್ ಹೊತ್ತು ಈ ಸಿನಿಮಾ ತೆರೆಗೆ ಬರಲಿದೆ. ಇತ್ತೀಚೆಗೆ ವಿದೇಶಕ್ಕೆ ಹೋಗಿ ಚಿತ್ರತಂಡ ಸಿನಿಮಾ ಚಿತ್ರೀಕರಣ ಮಾಡಿ ಬಂದಿದೆ. ಕೈರಾ ಅದ್ವಾನಿ ಚಿತ್ರದಲ್ಲಿ ನಾಯಕಿಯಾಗಿ ನಟಿಸ್ತಿದ್ದಾರೆ. ಈ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರಲಿದೆ.

  English summary
  Please let me touch Oscar: Shah Rukh Khan- Ramcharan's Twitter conversation goes viral. Bollywood Badsha asks Ram Charan to let him touch the Oscar they win for RRR. Know more.
  Tuesday, January 10, 2023, 22:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X