For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಬೆಂಬಲದೊಂದಿಗೆ ಚುನಾವಣೆಗೆ ಧುಮುಕಲಿರುವ ಪ್ರಕಾಶ್ ರೈ

  |

  ಆಂಧ್ರ, ತೆಲಂಗಾಣದಲ್ಲಿ ರಾಜಕೀಯವೂ ಸಹ ಸಿನಿಮಾ ಮಾದರಿಯಲ್ಲಿ ಬಹು ಸಿನಿಮೀಯ. ರಾಜಕೀಯ ಹಾಗೂ ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಅಂತರವೇನೂ ತೆಲುಗು ರಾಜ್ಯಗಳಲ್ಲಿ ಇಲ್ಲ.

  ಇದೀಗ ತೆಲುಗು ಸಿನಿಮಾ ರಂಗದ ಪ್ರತಿಷ್ಠಿತ ಒಕ್ಕೂಟವಾದ 'ಮಾ' (MAA)ಗೆ ಚುನಾವಣೆಗಳು ಸಮೀಪಿಸುತ್ತಿದ್ದು, ಅಧ್ಯಕ್ಷ ಸ್ಥಾನಕ್ಕೇರಲು ಹಲವರು ಹಲವು ವಿಧದ ಪ್ರಯತ್ನಗಳನ್ನು ಆರಂಭಿಸಿದ್ದಾರೆ.

  ನಟ ಪ್ರಕಾಶ್ ರೈ 'ಮಾ' (Movie Artist Associations) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಪ್ರಕಾಶ್ ರೈಗೆ ಮೆಗಾಸ್ಟಾರ್ ಚಿರಂಜೀವಿ ಬೆಂಬಲವೂ ಇದೆ ಆ ಮೂಲಕ ಇಡೀಯ ಮೆಗಾಸ್ಟಾರ್ ಕುಟುಂಬದ ಬೆಂಬಲವನ್ನು ಪ್ರಕಾಶ್ ರೈ ಪಡೆದಿದ್ದಾರೆ.

  ಪ್ರಕಾಶ್‌ ರೈಗೆ ಎದುರಾಗಿ ಹಿರಿಯ ನಟ ಮೋಹನ್‌ಬಾಬು ಪುತ್ರ ನಾಯಕ ನಟ ಮಂಚು ವಿಷ್ಣು ಸ್ಪರ್ಧಿಸುವುದು ಬಹುತೇಕ ಖಾಯಂ ಆಗಿದೆ. ಮಂಚು ವಿಷ್ಣು ಕೆಲ ದಿನದ ಹಿಂದಷ್ಟೆ ತಾವು 'ಮಾ'ನ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದಾರೆ.

  ಮಂಚು ವಿಷ್ಣುಗೆ 'ಮಾ'ನ ಪ್ರಸ್ತುತ ಅಧ್ಯಕ್ಷ ವಿ.ಕೆ.ನರೇಶ್‌ ಬೆಂಬಲ ಲಭಿಸಿದ್ದು, ಸೂಪರ್ ಸ್ಟಾರ್ ಕೃಷ್ಣ ಬೆಂಬಲವೂ ದಕ್ಕಿದೆ ಎನ್ನಲಾಗುತ್ತಿದೆ. ಮಂಚು ವಿಷ್ಣು ಸನಿಹದಲ್ಲಿಯೇ ಚಿರಂಜೀವಿ ಹಾಗೂ ಎನ್‌ಟಿಆರ್ ಕುಟುಂಬವನ್ನೂ ಭೇಟಿ ಮಾಡಿ ಬೆಂಬಲ ಕೋರಲಿದ್ದಾರೆ.

  ಈ ನಡುವೆ ಕಳೆದ ಚುನಾವಣೆಯಲ್ಲಿ ಬಹಳ ಕಡಿಮೆ ಅಂತರದಲ್ಲಿ ಸೋತಿದ್ದ ಶಿವಾಜಿ ರಾಜ ಸಹ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಆಶಯದಲ್ಲಿದ್ದು ಅವರೂ ಸಹ ಚಿರಂಜೀವಿ ಅವರನ್ನು ಭೇಟಿ ಆಗಲಿದ್ದಾರೆ.

  'ಮಾ' ಚುನಾವಣೆಗಳಲ್ಲಿ, ರಾಜಕೀಯದಲ್ಲಿ ಸಕ್ರಿಯರಾಗಿದ್ದ ಡಾ.ರಾಜಶೇಖರ್ ಪತ್ನಿ ಜೀವಿತಾ ರಾಜಲಕ್ಷ್ಮಿ ಸಹ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. 'ಮಾ' ಚುನಾವಣೆಯು ಸೆಪ್ಟೆಂಬರ್‌ನಲ್ಲಿ ನಡೆಯಲಿದೆ.

  Recommended Video

  Sanchari Vijay ಬಗ್ಗೆ ಅವರ ಸಹೋದರ ಹೇಳೋದೇನು | Filmibeat Kannada

  ತೆಲುಗು ಸಿನಿಮಾರಂಗದಲ್ಲಿ 'ಮಾ' ಚುನಾವಣೆ ಅತ್ಯಂತ ಪ್ರತಿಷ್ಠೆಯದ್ದಾಗಿದೆ. 'ಮಾ'ನಲ್ಲಿ ಹಲವು ವಿವಾದಗಳು, ಮೂದಲಿಕೆಗಳು ನಡೆದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಿದೆ. 'ಮಾ'ನ ರಾಜಕೀಯದಿಂದ ಬೇಸತ್ತು ಚಿರಂಜೀವಿ ಸೇರಿದಂತೆ ಹಲವು ಪ್ರತಿಷ್ಠಿತ ನಟರು ಸಂಘದಿಂದಲೇ ಹೊರಗೆ ಹೋಗಿದ್ದಿದೆ.

  English summary
  Actor Prakash Rai contesting to MAA president election with support of Megastar Chiranjeevi.
  Wednesday, June 23, 2021, 9:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X