Don't Miss!
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- News
ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ: ಸರ್ಕಾರದ ವಿರುದ್ದ ಜೆಡಿಎಸ್ ಕಿಡಿ
- Technology
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Ram Charan: RRR ಚಿತ್ರತಂಡದ ಸದಸ್ಯರಿಗೆ ದುಬಾರಿ ಉಡುಗೊರೆ ನೀಡಿದ ರಾಮ್ ಚರಣ್
ಯಾವುದೇ ಒಂದು ಸಿನಿಮಾ ಹಿಟ್ ಆದರೆ ಅದರ ಆಧಾರದ ಮೇಲೆ ನಾಯಕ-ನಾಯಕಿಗೆ ಇನ್ನೂ ಕೆಲವು ಸಿನಿಮಾಗಳು ಧಕ್ಕುತ್ತವೆ, ನಿರ್ದೇಶಕನಿಗೂ ಇತರೆ ಸ್ಟಾರ್ ನಟರ ಕಾಲ್ ಶೀಟ್‌ಗಳು ಸುಲಭವಾಗಿ ಕೈಗೆಟುಕುತ್ತವೆ. ಇನ್ನು ನಿರ್ಮಾಪಕರಿಗಂತೂ ವರ್ಷಗಳ ಕಾಲ ಕೂತುಣ್ಣುವಷ್ಟೆ ಹಣದ ರಾಶಿ ಬಂದು ಬೀಳುತ್ತದೆ.
ಆದರೆ ಆ ಹಿಟ್ ಸಿನಿಮಾಕ್ಕೆ ಕೆಲಸ ಮಾಡಿದ ಕೆಳ ಹಂತದ ನೌಕರ, ಕ್ಯಾರೆಕ್ಟರ್ ಆರ್ಟಿಸ್ಟ್, ಲೈಟ್ ಬಾಯ್, ಸ್ಪಾಟ್ ಬಾಯ್, ಮೇಕಪ್ ಆರ್ಟಿಸ್ಟ್‌ಗಳು ಇವರಿಗೆಲ್ಲ ಏನೂ ಧಕ್ಕುವುದಿಲ್ಲ. ಸಿನಿಮಾ ಹಿಟ್ ಆಗುವುದರಲ್ಲಿ ಇವರ ಪಾಲು ದೊಡ್ಡದಿರುತ್ತದೆ ಆದರೆ ಸಿನಿಮಾದ ಯಶಸ್ಸಿನ ನಂತರ ಬರುವ ಲಾಭ ಪಾಲು ಇವರಿಗಿಲ್ಲ.
Recommended Video

ಇತ್ತೀಚೆಗಷ್ಟೆ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ 'RRR' ಬಿಡುಗಡೆ ಆಗಿ ಬಹುದೊಡ್ಡ ಹಿಟ್ ಆಗಿದೆ. 1000 ಕೋಟಿ ರುಪಾಯಿ ಗಳಿಕೆಯೆಡೆಗೆ ದಾಪುಗಾಲಿಟ್ಟಿದೆ. ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಜೂ ಎನ್‌ಟಿಆರ್-ರಾಮ್ ಚರಣ್ ತೇಜ ಹೊಸ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿದ್ದಾರೆ. ನಿರ್ಮಾಪಕ ಡಿವಿವಿ ದಯಾನಂದ್ ಜೀವನದಲ್ಲೇ ಕಾಣದಷ್ಟು ಹಣ ಕಾಣುತ್ತಿದ್ದಾರೆ. ಆದರೆ ಸಿನಿಮಾಕ್ಕೆ ಕೆಲಸ ಮಾಡಿದ ಕೆಳವರ್ಗದ ಕಾರ್ಮಿಕರು? ಎಲ್ಲ ಸಿನಿಮಾಗಳಂತೆ ಇವರಿಗೂ ಯಶಸ್ಸಿನ ಪಾಲು ಸಿಕ್ಕಿಲ್ಲ ಎಂದುಕೊಳ್ಳುವಂತಿಲ್ಲ. ಏಕೆಂದರೆ ಸಿನಿಮಾದಲ್ಲಿ ನಟಿಸಿದ ರಾಮ್ ಚರಣ್ ತೇಜ ಇಡೀ ಚಿತ್ರತಂಡಕ್ಕೆ ದುಬಾರಿ ಉಡುಗೊರೆ ನೀಡಿದ್ದಾರೆ.
Dil
Raju:
'ರಾಧೆಶ್ಯಾಮ್'
ಸಿನಿಮಾದಿಂದ
ಭಾರೀ
ನಷ್ಟ..
ಒಂದೇ
ಏಟಿಗೆ
ಚೇತರಿಸಿಕೊಂಡ
ದಿಲ್
ರಾಜು!

ಚಿನ್ನದ ನಾಣ್ಯ ನೀಡಿರುವ ರಾಮ್ ಚರಣ್
'RRR' ಸಿನಿಮಾ ರಾಮ್ ಚರಣ್ ವೃತ್ತಿ ಜೀವನದಲ್ಲಿಯೇ ಅತಿ ಹೆಚ್ಚು ಹಣ ಗಳಿಸಿದ ಹಿಟ್ ಸಿನಿಮಾ ಎನಿಸಿಕೊಂಡಿದೆ. ಜೊತೆಗೆ ಅವರ ನಟನೆಗೆ ಹಿಂದೆಂದಿಗಿಂತಲೂ ಹೆಚ್ಚು ಪ್ರಶಂಸೆ ಕೇಳಿ ಬಂದಿದೆ. ಹಾಗಾಗಿ ಈ ಸಿನಿಮಾಕ್ಕೆ ಸಹಕರಿಸಿದ ಎಲ್ಲರಿಗೂ ದೊಡ್ಡ ಉಡುಗೊರೆಯನ್ನೇ ರಾಮ್ ಚರಣ್ ನೀಡಿದ್ದಾರೆ. ಇಡೀ ಚಿತ್ರ ತಂಡಕ್ಕೆ ಚಿನ್ನದ ನಾಣ್ಯವನ್ನು ರಾಮ್ ಚರಣ್ ನೀಡಿದ್ದಾರೆ. ರಾಮ್ ನೀಡಿರುವ ಚಿನ್ನದ ನಾಣ್ಯದ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ತಮ್ಮ ಹೆಸರು ಬರೆದಿರುವ ನಾಣ್ಯ ಉಡುಗೊರೆ
ಚಿನ್ನದ ನಾಣ್ಯದ ಒಂದು ಬದಿ ರಾಮ್ ಚರಣ್ ಎಂದು ಇಂಗ್ಲೀಷಿನಲ್ಲಿ ಬರೆಸಿರುವ ರಾಮ್ ಚರಣ್ ಮತ್ತೊಂದೆಡೆ 'RRR' ಎಂದು ಬರೆಸಿದ್ದಾರೆ. ಈ ಒಂದು ಚಿನ್ನದ ನಾಣ್ಯ 10 ಗ್ರಾಂ ಇದೆ ಎನ್ನಲಾಗುತ್ತಿದೆ. ಈ ಚಿನ್ನದ ನಾಣ್ಯ ಸಿನಿಮಾಕ್ಕೆ ಕೆಲಸ ಮಾಡಿದ ಕೆಳ ಹಂತದ ಸಿಬ್ಬಂದಿಗೆ ಮಾತ್ರವೇ ನೀಡಲಾಗುತ್ತಿದೆ. ಅಸಿಸ್ಟೆಂಟ್ ನಿರ್ದೇಶಕರಿಗೆ, ಲೈಟ್ ಬಾಯ್, ಸ್ಪಾಟ್ ಬಾಯ್, ಸೆಕ್ಯುರಿಟಿಗಳು, ಸೆಟ್ ಸ್ವಚ್ಛ ಮಾಡುವವರು ಇತ್ಯಾದಿ ಕೆಲಸ ಮಾಡುತ್ತಿದ್ದವರಿಗೆ ಮಾತ್ರವೇ ನೀಡಲಾಗುತ್ತಿದೆ. ಸಿನಿಮಾದ ನಟರು, ಮೇಲ್ ಹಂತದ ತಂತ್ರಜ್ಞರಿಗೆ ಈ ನಾಣ್ಯಗಳನ್ನು ನೀಡಲಾಗುತ್ತಿಲ್ಲ.

ಭೋಜನ ಕೂಟ ಆಯೋಜನೆ
'RRR' ಸಿನಿಮಾ ಹಿಟ್ ಆಗಿದ್ದಕ್ಕಾಗಿ ಚಿತ್ರಕ್ಕಾಗಿ ಕೆಲಸ ಮಾಡಿದವರಿಗೆ ವಿಶೇಷ ಭೋಜನ ಕೂಟ ಆಯೋಜಿಸಲಾಗಿತ್ತು. ಸಿನಿಮಾದಲ್ಲಿ ಪಾಲ್ಗೊಂಡಿದ್ದ ಪ್ರೊಡಕ್ಷನ್ ಮ್ಯಾನೇಜರ್‌ಗಳು, ನಿರ್ದೇಶನ ತಂಡದ ಸಹಾಯಕರು, ಇತರೆ ಕೆಳ ಹಂತದ ಸಿಬ್ಬಂದಿ ಭೋಜನ ಕೂಟಕ್ಕೆ ಬಂದಿದ್ದರು. ಭೋಜನ ಕೂಟದ ಬಳಿಕ ಎಲ್ಲರಿಗೂ ಸಿಹಿ ತಿಂಡಿಯ ಡಬ್ಬ, ತಾಂಬೂಲದ ಜೊತೆಗೆ ರಾಮ್ ಚರಣ್ ಈ ಹತ್ತು ಗ್ರಾಂನ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ರಾಮ್ ಚರಣ್ ನೀಡಿರುವ ಉಡುಗೊರೆ ನೀಡಿ ಚಿತ್ರತಂಡದ ಎಲ್ಲರೂ ಬಹಳ ಖುಷಿಯಾಗಿದ್ದಾರೆ.

ರಾಮ್ ಚರಣ್ ನಟನೆಗೆ ಪ್ರಶಂಸೆ
'RRR' ಸಿನಿಮಾದಲ್ಲಿ ರಾಮ್ ಚರಣ್ ತೇಜ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ನಟಿಸಿದ್ದಾರೆ. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ರಾಮ್ ಚರಣ್ ತೇಜ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಮತ್ತೊಬ್ಬ ಸ್ಟಾರ್ ನಟ ಜೂ ಎನ್‌ಟಿಆರ್ ಸಹ ಇದ್ದು, ಅವರು ಕೋಮರಂ ಭೀಮ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಆಲಿಯಾ ಭಟ್, ಅಜಯ್ ದೇವಗನ್, ಶ್ರೆಯಾ ಶಿರಿನ್, ವಿದೇಶಿ ನಟ-ನಟಿಯರಾದ ಒಲಿವಿಯಾ ಮೋರಿಸ್, ರೇ ಸ್ಟಿವನ್‌ಸನ್ ಇನ್ನೂ ಹಲವರು ನಟಿಸಿದ್ದಾರೆ. ಡಿವಿವಿ ದಯಾನಂದ್ ಬಂಡವಾಳ ಹೂಡಿರುವ ಈ ಸಿನಿಮಾ ಕೆಲವೇ ದಿನಗಳಲ್ಲಿ 800 ಕೋಟಿಗೂ ಹೆಚ್ಚು ಹಣ ಗಳಿಸಿ ದಾಖಲೆ ನಿರ್ಮಿಸಿದೆ.