For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಮನೆಯಲ್ಲಿ ಸಲ್ಮಾನ್ ಖಾನ್: ತೆಲುಗು ನಟರೊಟ್ಟಿಗೆ ಪಾರ್ಟಿ

  |

  ನಟ ಸಲ್ಮಾನ್ ಖಾನ್ ಇತ್ತೀಚಿಗೆ ಹೈದರಾಬಾದ್ ಗೆ ಪದೇ-ಪದೇ ಭೇಟಿ ನೀಡುತ್ತಿದ್ದಾರೆ. ಇದಕ್ಕೆ ಕಾರಣ ಸತತ ಎರಡು ಸಿನಿಮಾಗಳ ಚಿತ್ರೀಕರಣವನ್ನು ಅವರು ಹೈದಾರಾಬಾದ್‌ನಲ್ಲಿ ಮಾಡಿರುವುದು.

  ಮೊದಲಿಗೆ ಸಲ್ಮಾನ್ ಖಾನ್‌ರ ಆಪ್ತ ಗೆಳೆಯರಲ್ಲಿ ಒಬ್ಬರಾದ ಚಿರಂಜೀವಿ ನಟನೆಯ 'ಗಾಡ್ ಫಾದರ್' ಸಿನಿಮಾದ ಅತಿಥಿ ಪಾತ್ರವೊಂದರಲ್ಲಿ ನಟಿಸಲು ಸಲ್ಮಾನ್ ಖಾನ್ ಹೈದರಾಬಾದ್‌ಗೆ ಆಗಮಿಸಿದ್ದರು.

  ಇದೀಗ ತಮ್ಮ ಹೊಸ ಸಿನಿಮಾ 'ಕಭಿ ಈದ್ ಕಭಿ ದಿವಾಲಿ' ಸಿನಿಮಾದ ಚಿತ್ರೀಕರಣವನ್ನು ಸಲ್ಮಾನ್, ಹೈದರಾಬಾದ್‌ನಲ್ಲಿ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಹೈದರಾಬಾದ್‌ನಲ್ಲಿಯೇ ನೆಲೆಸಿದ್ದು, ಚಿರಂಜೀವಿ ನಿವಾಸಕ್ಕಂತೂ ಸತತವಾಗಿ ಭೇಟಿ ನೀಡುತ್ತಲೇ ಇದ್ದಾರೆ.

  ಕಳೆದ ವಾರವಷ್ಟೆ ಚಿರಂಜೀವಿ ನಿವಾಸಕ್ಕೆ ಸಲ್ಮಾನ್ ಖಾನ್ ಭೇಟಿ ನೀಡಿದ್ದರು. ಇದೇ ಸಮಯದಲ್ಲಿ ಕಮಲ್ ಹಾಸನ್ ಸಹ ಚಿರಂಜೀವಿ ನಿವಾಸಕ್ಕೆ ಭೇಟಿ ನೀಡಿದ್ದರು. ಇಬ್ಬರನ್ನು ಆತ್ಮೀಯವಾಗಿ ಸನ್ಮಾನಿಸಿದ್ದ ಚಿರಂಜೀವಿ, ಕಮಲ್ ಹಾಸನ್‌ರ 'ವಿಕ್ರಂ' ಸಿನಿಮಾದ ಗೆಲುವನ್ನು ಸಭ್ರಮಿಸಿದ್ದರು. ಸಲ್ಮಾನ್ ಖಾನ್ ಸಹ ಅದೇ ಸಮಯದಲ್ಲಿ 'ವಿಕ್ರಂ' ಸಿನಿಮಾ ವೀಕ್ಷಿಸಿ ಬಹುವಾಗಿ ಮೆಚ್ಚಿಕೊಂಡರು ಎನ್ನಲಾಗುತ್ತಿದೆ.

  ರಾಮ್ ಚರಣ್ ನಿವಾಸಕ್ಕೆ ಸಲ್ಮಾನ್ ಭೇಟಿ

  ರಾಮ್ ಚರಣ್ ನಿವಾಸಕ್ಕೆ ಸಲ್ಮಾನ್ ಭೇಟಿ

  ಇದೀಗ ಸಲ್ಮಾನ್ ಖಾನ್ ಮತ್ತೆ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ನಿವಾಸಕ್ಕೆ ಭೇಟಿ ನೀಡಿದ್ದಾರೆ. ರಾಮ್ ಚರಣ್ ನಿವಾಸದಲ್ಲಿ ತೆಲುಗಿನ ಇತರೆ ಕೆಲವು ಸ್ಟಾರ್ ನಟರ ಜೊತೆಗೆ ಸಲ್ಮಾನ್ ಖಾನ್ ಸಮಯ ಕಳೆದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಕೆಲವು ಚಿತ್ರಗಳು ಸಹ ಹರಿದಾಡುತ್ತಿವೆ.

  ವೆಂಕಟೇಶ್ ಹಾಗೂ ಇತರರೊಟ್ಟಿಗೆ ಪಾರ್ಟಿ

  ವೆಂಕಟೇಶ್ ಹಾಗೂ ಇತರರೊಟ್ಟಿಗೆ ಪಾರ್ಟಿ

  ಇದೀಗ ವೈರಲ್ ಆಗಿರುವ ಚಿತ್ರವೊಂದರಲ್ಲಿ ನಟ ಸಲ್ಮಾನ್ ಖಾನ್, ಪೂಜಾ ಹೆಗ್ಡೆ, ರಾಮ್ ಚರಣ್ ತೇಜ, ಅವರ ಪತ್ನಿ ಉಪಾಸನಾ ಹಾಗೂ ನಟ ವೆಂಕಟೇಶ್ ಜೊತೆ ಸಲ್ಮಾನ್ ಖಾನ್ ಇದ್ದಾರೆ. ಈ ಚಿತ್ರದಲ್ಲಿ ನಟ ವೆಂಕಟೇಶ್, ಸಲ್ಮಾನ್ ಖಾನ್ ಹೆಗಲ ಮೇಲೆ ಕೈಹಾಕಿಕೊಂಡು ನಿಂತಿದ್ದಾರೆ. ರಾಮ್ ಚರಣ್ ಮನೆಯಲ್ಲಿ ಸಲ್ಮಾನ್ ಖಾನ್ ಪಾರ್ಟಿ ಮಾಡಿದ್ದು, ವೆಂಕಟೇಶ್ ಮಾತ್ರವೇ ಅಲ್ಲದೆ ಇನ್ನೂ ಕೆಲವು ತೆಲುಗಿನ ಸ್ಟಾರ್ ನಟರು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗುತ್ತಿದೆ.

  ಜೂ ಎನ್‌ಟಿಆರ್ ಸಹ ಸಲ್ಮಾನ್ ಖಾನ್‌ ಆಪ್ತ

  ಜೂ ಎನ್‌ಟಿಆರ್ ಸಹ ಸಲ್ಮಾನ್ ಖಾನ್‌ ಆಪ್ತ

  ಸಲ್ಮಾನ್ ಖಾನ್‌ಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹಲವು ಒಳ್ಳೆಯ ಗೆಳೆಯರಿದ್ದಾರೆ. ನಟ ವೆಂಕಟೇಶ್, ಸಲ್ಮಾನ್ ಖಾನ್‌ಗೆ ಹಳೆಯ ಮಿತ್ರ. ಇನ್ನು ಚಿರಂಜೀವಿ ಕುಟುಂಬವಂತೂ ಸಲ್ಮಾನ್‌ ಖಾನ್‌ರ ಹಳೆಯ ಮಿತ್ರರು. ಜೂ ಎನ್‌ಟಿಆರ್ ಸಹ ಸಲ್ಮಾನ್ ಖಾನ್‌ರ ಗೆಳೆಯರೇ ಆಗಿದ್ದಾರೆ. ಜನಪ್ರದಾ ನಡೆಸಿಕೊಟ್ಟಿದ್ದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಖಾನ್, ಜೂ ಎನ್‌ಟಿಆರ್ ಬಗ್ಗೆ ಬಹಳ ಮೆಚ್ಚುಗೆಯ ಮಾತನ್ನಾಡಿದ್ದರು.

  'ಆಚಾರ್ಯ' ಸೆಟ್‌ನಲ್ಲಿ ಸಲ್ಮಾನ್ ಖಾನ್ ಸಿನಿಮಾ ಚಿತ್ರೀಕರಣ

  'ಆಚಾರ್ಯ' ಸೆಟ್‌ನಲ್ಲಿ ಸಲ್ಮಾನ್ ಖಾನ್ ಸಿನಿಮಾ ಚಿತ್ರೀಕರಣ

  ಸಲ್ಮಾನ್ ಖಾನ್ ಪ್ರಸ್ತುತ ತನ್ನ 'ಕಭಿ ಈದ್ ಕಭಿ ದಿವಾಲಿ' ಸಿನಿಮಾದ ಶೂಟಿಂಗ್ ಅನ್ನು ಹೈದರಾಬಾದ್‌ನಲ್ಲಿಯೇ ಮಾಡುತ್ತಿದ್ದಾರೆ. ಅದೂ, ನಟ ಚಿರಂಜೀವಿ ಅವರ ಸಿನಿಮಾ 'ಆಚಾರ್ಯ'ಕ್ಕಾಗಿ ಹಾಕಲಾಗಿದ್ದ ದೊಡ್ಡ ಸೆಟ್‌ನಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಸಲ್ಮಾನ್‌ರ ಗೆಳೆಯ ಸಾಜಿದ್ ನಾಡಿಯಾವಾಲ ಬಂಡವಾಳ ಹೂಡಿದ್ದಾರೆ. ಸಿನಿಮಾವನ್ನು ಫರ್ಹಾನ್ ಸಮ್ಜಿ ನಿರ್ದೇಶನ ಮಾಡುತ್ತಿದ್ದಾರೆ.

  English summary
  Salman Khan visits Ram Charan Teja house. Get together with Telugu stars along with Venkatesh and others.
  Monday, June 27, 2022, 15:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X