For Quick Alerts
  ALLOW NOTIFICATIONS  
  For Daily Alerts

  ಸುಮಧುರ ಕಂಠದ ಖ್ಯಾತ ಗಾಯಕನಿಗೆ ತೀವ್ರ ಅವಮಾನ

  |

  ಭಾರತ ಸಿನಿಮಾದ ಅದರಲ್ಲಿಯೂ ದಕ್ಷಿಣ ಭಾರತ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಸಿದ್ ಶ್ರೀರಾಮ್ ಹೆಸರು ಬಹುವಾಗಿ ಹರಿದಾಡುತ್ತಿದೆ. ಅವರ ಅದ್ಭುತವಾದ ಕಂಠ, ಹಾಡುವ ರೀತಿಗೆ ಸಂಗೀತಪ್ರಿಯರು ಮಾರು ಹೋಗಿದ್ದಾರೆ.

  ತಮ್ಮ ಗಾಯನದಿಂದ ಕೋಟ್ಯಂತರ ಸಂಗೀತಪ್ರಿಯ ಮನಸ್ಸುಗಳನ್ನು ತಣಿಸುತ್ತಿರುವ ಯುವಗಾಯಕ ಸಿದ್ ಶ್ರೀರಾಮ್ ಗೆ ಹೈದರಾಬಾದ್‌ನಲ್ಲಿ ಕೆಲವು ಪುಂಡರು ತೀವ್ರ ಅವಮಾನ ಮಾಡಿದ್ದಾರೆ.

  ಹೈದರಾಬಾದ್‌ನ ಜೂಬ್ಲಿ ಹಿಲ್ಸ್ ರಸ್ತೆಯಲ್ಲಿರುವ ಪಬ್ ಒಂದರಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿ ಸಿದ್ ಶ್ರೀರಾಮ್ ಅನ್ನು ಹಾಡಲು ಆಹ್ವಾನಿಸಲಾಯಿತು. 1500 ರು ನಂತೆ ಟಿಕೆಟ್ ಮಾಡಿ 500 ಮಂದಿ ಪ್ರೇಕ್ಷಕರನ್ನು ಆಹ್ವಾನಿಸುವುದಾಗಿ ಆಯೋಜಕರು ಹೇಳಿದ್ದರು. ಆದರೆ ಕಾರ್ಯಕ್ರಮಕ್ಕೆ ದುಪ್ಪಟ್ಟು ಮಂದಿ ವೀಕ್ಷಕರು ಆಗಮಿಸಿದರು.

  ಸಿದ್ ಶ್ರೀರಾಮ್ ವೇದಿಕೆ ಮೇಲೆ ಪ್ರದರ್ಶನ ನೀಡುವಾಗಲೇ ವೇದಿಕೆ ಮುಂದಿದ್ದ ಕೆಲವು ಪುಂಡರು ಸಿದ್ ಮೇಲೆ ಮದ್ಯದ ಬಾಟಲಿಗಳನ್ನು, ನೀರಿನ ಬಾಟಲಿಗಳನ್ನು ಎಸೆದು ದಾಂಧಲೆ ನಡೆಸಿದ್ದಾರೆ. ಆದರೂ ಸಿದ್ ಅವರು 'ನನ್ನಂಥಹಾ ಗಾಯಕನಿಗೆ ಹೀಗೆ ಅವಮಾನ ಮಾಡಬಹುದಾ' ಎಂದು ಪ್ರಶ್ನಿಸಿದ್ದಾರೆ. ಆದರೂ ಪುಂಡರ ಗಲಾಟೆ ನಿಂತಿಲ್ಲ.

  ಕೂಡಲೇ ಸಿದ್ ಶ್ರೀರಾಮ್ ಅವರು ವೇದಿಕೆ ಇಳಿದು ಹೊರಟುಹೋಗಿದ್ದಾರೆ. ಆಯೋಜಕರಾಗಲಿ ಸಿದ್ ಶ್ರೀರಾಮ್ ಆಗಲಿ ಘಟನೆ ಕುರಿತು ದೂರು ದಾಖಲಿಸಿಲ್ಲ. ಈ ರೀತಿಯ ಘಟನೆಯೊಂದು ನಡೆದಿರುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿಯೂ ಇಲ್ಲವಂತೆ.

  Recommended Video

  4ವರ್ಷಾದ ಮಗುವಾಗಿದ್ದಾಗಲೇ ಹಾರ್ಮೋನಿಯಂ‌ ನುಡಿಸಿದ ಶ್ರೆಯಾ ಘೋಶಾಲ್ | Filmibeat Kannada

  ಸಿದ್ ಶ್ರೀರಾಮ್ ಅವರು 'ಕಡಲ್' ಸಿನಿಮಾದ 'ಅಡಿಯೇ', ಗೀತಾ ಗೋವಿಂದ ಸಿನಿಮಾದ 'ಇಂಕೇಮ್ ಇಂಕೇಮ್ ಇಂಕೇಮ್ ಕಾವಾಲೆ', 96 ಸಿನಿಮಾದ ಹಾಡು ಇನ್ನೂ ಅನೇಕ ಹಿಟ್ ಸಿನಿಮಾಗಳನ್ನು ಹಾಡಿದ್ದಾರೆ. ಹಲವಾರು ಕರ್ನಾಟಕ ಸಂಗೀತದ ಕಾರ್ಯಕ್ರಮಗಳನ್ನು ಸಿದ್ ನಡೆಸಿಕೊಟ್ಟಿದ್ದಾರೆ. ಇತ್ತೀಚೆಗೆ ಅವರು ಯೂಟ್ಯೂಬ್‌ನಲ್ಲಿ ಹಾಡಿದ 'ನಟರಂಗ' ಸಿನಿಮಾದ 'ಅಪ್ಸರಾ ಆಲಿ' ಹಾಡು ಸಹ ಸಖತ್ ವೈರಲ್ ಆಗಿತ್ತು.

  English summary
  Famous singer Sid Sriram faced huge insult in Hyderabad's pub. some drunken people thrown bottles at him.
  Tuesday, March 9, 2021, 19:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X