For Quick Alerts
  ALLOW NOTIFICATIONS  
  For Daily Alerts

  RGV 'ಮರ್ಡರ್'ಗೆ ಶಾಕ್: ವಿವಾದಾತ್ಮಕ ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ

  |

  ವಿವಾದಾತ್ಮಕ ನಿರ್ದೇಶಕ ಅಂತಾನೆ ಖ್ಯಾತಿಗಳಿಸಿರುವ ರಾಮ್ ಗೋಪಾಲ್ ವರ್ಮಾ ಸದ್ಯ 'ಮರ್ಡರ್' ಸಿನಿಮಾ ರಿಲೀಸ್ ಮಾಡುವ ತಯಾರಿಯಲ್ಲಿದ್ದರು. ಸದ್ಯಕ್ಕೆ ಸಿನಿಮಾ ರಿಲೀಸ್ ಮಾಡದಂತೆ ತೆಲಂಗಾಣದ ನಲ್ಗೊಂಡ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

  ಮರ್ಡರ್ ಒಂದು ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು, ಪ್ರಣಯ್ ಕುಮಾರ್ ಹತ್ಯೆಯ ತನಿಖೆ ಪೂರ್ಣಗೊಳ್ಳುವವರೆಗೂ ಸಿನಿಮಾ ಬಿಡುಗಡೆ ಮಾಡುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ.

  ಅಂದ್ಹಾಗೆ, ಮರ್ಡರ್ ಸಿನಿಮಾ ಆಂಧ್ರಪ್ರದೇಶದ ಅಮೃತಾ ಮತ್ತು ಪ್ರಣಯ್ ಜೋಡಿಯ ಜೀವನಾಧರಿತ ಸಿನಿಮಾ. ಕೆಲವು ವರ್ಷಗಳ ಹಿಂದೆ ಮನೆಯವರ ವಿರೋಧದ ನಡುವೆ ಇಬ್ಬರು ಪ್ರೇಮ ವಿವಾಹವಾಗಿದ್ದರು. ಬೇರೆ ಬೇರೆ ಜಾತಿಯವರಾಗಿದ್ದರಿಂದ ಈ ಮದುವೆಗೆ ಕುಟುಂಬದ ಒಪ್ಪಿಗೆ ಇರಲಿಲ್ಲ. ಮದುವೆಯಾದ ಬಳಿಕ 2018ರಲ್ಲಿ ಅಮೃತಾ ಮನೆಯವರು ಪ್ರಣಯ್‌ನನ್ನು ನಡುಬೀದಿಯಲ್ಲಿ ಕೊಲೆ ಮಾಡಿದ್ದರು. ಮರ್ಯಾದಾ ಹತ್ಯೆ ಎಂಬ ಕಾರಣಕ್ಕೆ ಈ ಘಟನೆ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು.

  ಈ ಘಟನೆಯನ್ನು ಇಟ್ಟುಕೊಂಡು ಆರ್ ಜಿ ವಿ 'ಮರ್ಡರ್' ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಆದರೆ ತಮ್ಮ ಅನುಮತಿ ಇಲ್ಲದೆ ಚಿತ್ರ ಮಾಡಲಾಗಿದೆ, ನಮ್ಮ ಫೋಟೋಗಳನ್ನು ಬಳಸಿಕೊಂಡಿದ್ದಾರೆ ಎಂದು ಅಮೃತಾ ತೀವ್ರ ವಿರೋಧ ವ್ಯಕ್ತಪಡಿಸಿ, ನಲ್ಗೊಂಡ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕೊರ್ಟ್ ಪೂರ್ಣ ವಿಚಾರಣೆ ಆಗುವವರೆಗೂ ಸಿನಿಮಾ ಬಿಡುಗಡೆ ಮಾಡದಂತೆ ತಡೆ ನೀಡಿದೆ.

  ರಾಜಕೀಯ ವ್ಯಕ್ತಿಗಳ ಜೀವನ ಮತ್ತು ಸಾರ್ವಜನಿಕವಾಗಿ ಗಮನ ಸೆಳೆದ ಘಟನೆಗಳ ಬಗ್ಗೆ ಆರ್ ಜಿ ವಿ ಹೆಚ್ಚಾಗಿ ಸಿನಿಮಾ ಮಾಡುತ್ತಿದ್ದಾರೆ. ಕ್ಲೈಮ್ಯಾಕ್ಸ್, ನಗ್ನಂ, ಪವರ್ ಸ್ಟಾರ್ ಸಿನಿಮಾಗಳ ಯಶಸ್ಸಿನ ಬಳಿಕ 'ಮರ್ಡರ್' ಸಿನಿಮಾ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ. ತಿಂಗಳಿಗೊಂದರಂತೆ ಸಿನಿಮಾಗಳನ್ನು ನಿರ್ಮಿಸಿ ಆನ್‌ಲೈನ್ ನಲ್ಲಿ ಬಿಡುಗಡೆ ಮಾಡುತ್ತಿದ್ದ ರಾಮ್‌ ಗೋಪಾಲ್ ವರ್ಮಾ ಗೆ ಹಿನ್ನಡೆಯಾಗಿದೆ.

  English summary
  Telangana Court halts to release Ram Gopal Varma's Murder movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X