For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್‌ಕುಮಾರ್ ವ್ಯಕ್ತಿತ್ವವನ್ನು ಕೊಂಡಾಡಿದ ತೆಲುಗು ನಟ

  |

  ಡಾ.ರಾಜ್‌ಕುಮಾರ್ ಕರ್ನಾಟಕದ ಅಭಿಮಾನಿಗಳಿಗೆ, ನಟರಿಗೆ ಮಾತ್ರವೇ ಅಲ್ಲ, ಬದಲಿಗೆ ನೆರೆ-ಹೊರೆಯ ಚಿತ್ರರಂಗದ ನಟರಿಗೂ ಆದರ್ಶಪ್ರಾಯರು. ಸಿನಿಮಾ ರಂಗದಲ್ಲಿ ಒಳ್ಳೆಯತನ, ವೃತ್ತಿಪರತೆ, ಮಾನವೀಯತೆ, ವಿನಯ ಇಂಥಹಾ ವಿಷಯಗಳ ಚರ್ಚೆ ಬಂದಾಗ ಡಾ.ರಾಜ್‌ಕುಮಾರ್ ಅವರನ್ನು ಉದಾಹರಣೆ ನೀಡುವುದು ಸರ್ವೇ ಸಾಮಾನ್ಯ. ಹಾಗೆ ಬದುಕಿದ್ದರು ಡಾ.ರಾಜ್‌ಕುಮಾರ್.

  ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಕೋಲಾಹಲವೆದ್ದಿದೆ. ಸಾಯಿ ಧರಮ್ ತೇಜ್ ನಟಿಸಿರುವ 'ರಿಪಬ್ಲಿಕ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಆಡಿದ ವೀರಾವೇಷದ ಮಾತುಗಳು ತೆಲುಗು ಚಿತ್ರರಂಗವನ್ನು ಎರಡು ಬಣಗಳಾಗಿ ವಿಂಗಡಿಸಿದೆ. ಪವನ್ ಕಲ್ಯಾಣ್ ಅನ್ನು ಬೆಂಬಲಿಸಿ ಕೆಲವರು ಮಾತನಾಡಿದರೆ ಪವನ್ ಕಲ್ಯಾಣ್ ಹೇಳಿಕೆ ವಿರೋಧಿಸಿ ಹಲವರು ಮಾತನಾಡಿದ್ದಾರೆ.

  'ಪಂಜಾಬಿ ಹುಡುಗಿಯನ್ನು ಗರ್ಭಿಣಿ ಮಾಡಿ ವಂಚಿಸಿದ್ರು': ನ್ಯಾಯ ಕೊಡಿಸೋಕೆ ಆಗುತ್ತಾ?'ಪಂಜಾಬಿ ಹುಡುಗಿಯನ್ನು ಗರ್ಭಿಣಿ ಮಾಡಿ ವಂಚಿಸಿದ್ರು': ನ್ಯಾಯ ಕೊಡಿಸೋಕೆ ಆಗುತ್ತಾ?

  ಇದೇ ವಿಷಯಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರರಂಗದ ಜನಪ್ರಿಯ ಪೋಷಕ ನಟ ಪೋಸಾನಿ ಕೃಷ್ಣ ಮುರಳಿ ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಪವನ್ ಕಲ್ಯಾಣ್‌ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಜೊತೆಗೆ ಪವನ್ ಕಲ್ಯಾಣ್ ವ್ಯಕ್ತಿತ್ವವನ್ನು ಅಣಕಿಸಿದ್ದರು. ಪೋಸಾನಿ ಕೃಷ್ಣ ಮುರಳಿ ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸುದ್ದಿಗೋಷ್ಠಿಯಲ್ಲಿ ಪೋಸಾನಿ ಕೃಷ್ಣ ಮುರಳಿ ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್ ಬಗ್ಗೆಯೂ ಮಾತನಾಡಿದ್ದಾರೆ.

  ಸಿಡಿದೆದ್ದ ಪೂನಂ ಕೌರ್: 'ಹೆಣ್ಣುಮಕ್ಕಳನ್ನು ಮುಂದಿಟ್ಟು ರಾಜಕೀಯ ಮಾಡ್ತೀರಾ'?ಸಿಡಿದೆದ್ದ ಪೂನಂ ಕೌರ್: 'ಹೆಣ್ಣುಮಕ್ಕಳನ್ನು ಮುಂದಿಟ್ಟು ರಾಜಕೀಯ ಮಾಡ್ತೀರಾ'?

  ಹಿರಿಯ ನಟರ ವ್ಯಕ್ತಿತ್ವ ಎಂಥಹದ್ದಿತ್ತು, ಈಗಿನ ನಟರ ವಿಶೇಷವಾಗಿ ಪವನ್ ಕಲ್ಯಾಣ್ ವ್ಯಕ್ತಿತ್ವ ಎಂಥಹದ್ದಾಗಿದೆ ಎಂಬುದನ್ನು ಹೇಳಲು, ಹಾಗೂ ಪವನ್ ಕಲ್ಯಾಣ್ ಪಡೆಯುತ್ತಿರುವ ಕೋಟ್ಯಂತರ ಹಣ ಸಂಭಾವನೆ ಬಗ್ಗೆ ಪ್ರಶ್ನೆ ಎತ್ತಿ, ಪೋಸಾನಿ, ಡಾ.ರಾಜ್‌ಕುಮಾರ್ ಜೀವನವನ್ನು ಉದಾಹರಣೆಯಾಗಿ ಬಳಸಿದ್ದಾರೆ.

  '50,000 ಸಂಭಾವನೆ ಏರಿಸಿಕೊಳ್ಳುತ್ತೇನೆ ಅನುಮತಿ ಕೊಡಿ ಎಂದಿದ್ದರು ರಾಜ್'

  '50,000 ಸಂಭಾವನೆ ಏರಿಸಿಕೊಳ್ಳುತ್ತೇನೆ ಅನುಮತಿ ಕೊಡಿ ಎಂದಿದ್ದರು ರಾಜ್'

  ''ಡಾ.ರಾಜ್‌ಕುಮಾರ್ ಮೇರು ನಟ, ಭಾರತದಲ್ಲಿಯೇ ಅವರು ಬಹಳ ದೊಡ್ಡ ನಟ. 'ನಿಮ್ಮ ಸಿನಿಮಾಗಳೆಲ್ಲ ಹಿಟ್ ಆಗುತ್ತವಲ್ಲ ಏಕೆ ನೀವು ಸಂಭಾವನೆ ಏರಿಸಿಕೊಳ್ಳಬಾರದು' ಎಂದು ಒಮ್ಮೆ ರಾಜ್‌ಕುಮಾರ್ ಅವರನ್ನು ಯಾರೊ ಕೇಳಿದರಂತೆ. ಆಗ ರಾಜ್‌ಕುಮಾರ್ ತಮ್ಮ ಮನೆಗೆ ನಿರ್ಮಾಪಕರನ್ನೆಲ್ಲ, ವಿತರಕರನ್ನೆಲ್ಲ ಕರೆದು ಊಟ ಹಾಕಿಸಿ, 'ಅಯ್ಯಾ, ನಾನು ನಿಮ್ಮಿಂದಾಗಿ ಇಷ್ಟೆಲ್ಲ ಹಣ ಸಂಪಾದನೆ ಮಾಡಿದ್ದೀನಿ, ನನ್ನ ಕುಟುಂಬ ದೊಡ್ಡದಾಗುತ್ತಿದೆ, ನೀವು ಅನುಮತಿ ಕೊಟ್ಟರೆ ನಾನು 50,000 ಸಂಭಾವನೆ ಏರಿಸಿಕೊಳ್ಳುತ್ತೇನೆ' ಎಂದು ಕೇಳಿದರಂತೆ'' ಎಂದಿದ್ದಾರೆ ಪೋಸಾನಿ ಕೃಷ್ಣ ಮುರಳಿ.

  ಅನುಮತಿ ಪಡೆದು ಸಂಭಾವನೆ ಹೆಚ್ಚಿಸಿಕೊಂಡಿದ್ದ ಡಾ.ರಾಜ್‌ಕುಮಾರ್

  ಅನುಮತಿ ಪಡೆದು ಸಂಭಾವನೆ ಹೆಚ್ಚಿಸಿಕೊಂಡಿದ್ದ ಡಾ.ರಾಜ್‌ಕುಮಾರ್

  ''ರಾಜ್‌ಕುಮಾರ್ ಮಾತನ್ನು ಕೇಳಿ ನಿರ್ಮಾಪಕರು, ವಿತರಕರು, ನಿಮ್ಮ ಸಿನಿಮಾಗಳಿಂದ ನಾವುಗಳು ಹಣ ಮಾಡಿಕೊಳ್ಳುತ್ತಿದ್ದೇವೆ. ನಿಮಗೆ ಇಷ್ಟ ಬಂದಷ್ಟು ಸಂಭಾವನೆ ಹೆಚ್ಚಿಸಿಕೊಳ್ಳಿ ಎಂದರಂತೆ. ಆಗ ರಾಜ್‌ಕುಮಾರ್ 50 ಸಾವಿರ ರುಪಾಯಿ ಸಂಭಾವನೆ ಹೆಚ್ಚಿಸಿಕೊಂಡರಂತೆ'' ಎಂದು ಪೊಸಾನಿ ಕೃಷ್ಣ ಮುರಳಿ ಹೇಳಿದ್ದಾರೆ. ಕತೆ ನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ಡಾ.ರಾಜ್‌ಕುಮಾರ್ ವ್ಯಕ್ತಿತ್ವ ಗೊತ್ತಿರುವ ಯಾವುದೇ ವ್ಯಕ್ತಿಗಾದರೂ ಇಂಥಹಾ ಒಂದು ಘಟನೆ ನಡೆದಿರಬಹುದು ಎಂದೇ ಎನಿಸುತ್ತದೆ.

  ನಿರ್ಮಾಪಕರನ್ನು ಅನ್ನದಾತರು ಎನ್ನುತ್ತಿದ್ದ ರಾಜ್‌ಕುಮಾರ್

  ನಿರ್ಮಾಪಕರನ್ನು ಅನ್ನದಾತರು ಎನ್ನುತ್ತಿದ್ದ ರಾಜ್‌ಕುಮಾರ್

  ಡಾ.ರಾಜ್‌ಕುಮಾರ್, ನಿರ್ಮಾಪಕರು, ವಿತರಕರ ಮೇಲೆ ಅಪಾರ ಗೌರವ ಹೊಂದಿದ್ದರು. ಅಭಿಮಾನಿಗಳನ್ನು 'ಅಭಿಮಾನಿ ದೇವರುಗಳೇ' ಎಂದು ಕರೆದಿದ್ದ ರಾಜ್‌ಕುಮಾರ್, ನಿರ್ಮಾಪಕರನ್ನು 'ಅನ್ನದಾತರು' ಎಂದು ಕರೆಯುತ್ತಿದ್ದರು. ಹಾಗಾಗಿ ತಮ್ಮ ಸಂಭಾವನೆ ಏರಿಸಿಕೊಳ್ಳುವ ವಿಷಯದಲ್ಲಿ ತಮ್ಮ ಅನ್ನದಾತರ ಅನುಮತಿ ಕೇಳಿರುವುದರಲ್ಲಿ ಯಾವ ಅತಿಶಯೋಕ್ತಿ ಇಲ್ಲವೆಂದೇ ಅನಿಸುತ್ತದೆ.

  ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದ ಪವನ್ ಕಲ್ಯಾಣ್

  ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದ ಪವನ್ ಕಲ್ಯಾಣ್

  ಪೋಸಾನಿ ಕೃಷ್ಣ ಮುರಳಿ ನಿರ್ದಿಷ್ಟವಾಗಿ ಇದೇ ಕತೆ ಹೇಳಲು ಕಾರಣವಿದೆ. ಆಂಧ್ರ ಪ್ರದೇಶದ ಚಿತ್ರಮಂದಿರಗಳು ಟಿಕೆಟ್ ದರ ಏರಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ರಾಜಕಾರಣಿಯೂ ಆಗಿರುವ ಪವನ್ ಕಲ್ಯಾಣ್, ಇದೇ ವಿಷಯವನ್ನಿಟ್ಟುಕೊಂಡು ಆಂಧ್ರ ಸಿಎಂ ಜಗನ್ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದಾರೆ. ''ಸಿನಿಮಾ ನಮ್ಮದು, ಶ್ರಮ ನಮ್ಮದು ಅದನ್ನು ಮಾರುವವರು ನೀವಾ'' ಎಂದು ಪ್ರಶ್ನೆ ಮಾಡಿದ್ದಾರೆ. ನಿರ್ಮಾಪಕರು ಬಡವಾಗುತ್ತಿದ್ದಾರೆ ಎಂದು ಸಹ ಪವನ್ ಹೇಳಿದ್ದಾರೆ.

  ಪವನ್ ಕಲ್ಯಾಣ್ ಸಂಭಾವನೆ ಬಗ್ಗೆ ಪ್ರಶ್ನೆ

  ಪವನ್ ಕಲ್ಯಾಣ್ ಸಂಭಾವನೆ ಬಗ್ಗೆ ಪ್ರಶ್ನೆ

  ಇದನ್ನೇ ಆಧಾರವಾಗಿಟ್ಟುಕೊಂಡು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪೋಸಾನಿ ಕೃಷ್ಣ ಮುರಳಿ, ಸ್ಟಾರ್ ನಟರು ಸಂಭಾವನೆ ಕಡಿಮೆ ಮಾಡಿಕೊಂಡರೆ ಎಲ್ಲವೂ ಸರಿ ಹೋಗುತ್ತದೆ. ಪವನ್ ಕಲ್ಯಾಣ್ ಸಿನಿಮಾಕ್ಕೆ 60-70 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ. ಇಲ್ಲ ನಾನು 10 ಕೋಟಿ ಅಷ್ಟೆ ಸಂಭಾವನೆ ತೆಗೆದುಕೊಳ್ಳುತ್ತೇನೆ ಎಂದು ಪವನ್ ಕಲ್ಯಾಣ್ ಹೇಳಲಿ ನಾನೇ ಅವರ ಐದು ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದಿದ್ದಾರೆ ಪೋಸಾನಿ. ತೆಲುಗು ನಾಯಕ ನಟರ ಭಾರಿ ದುಬಾರಿ ಸಂಭಾವನೆ ಬಗ್ಗೆ ಮಾತನಾಡುವಾಗ ಪೋಸಾನಿ ಕೃಷ್ಣ ಮುರಳಿ, ರಾಜ್‌ಕುಮಾರ್ ಕತೆಯನ್ನು ಉದಾಹರಣೆಯಾಗಿ ಬಳಸಿದ್ದಾರೆ.

  English summary
  Telugu famous actor Posani Krishna Murali talks about Dr Rajkumar. He said Rajkumar such a great man he asked permission of producers to rise his remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X