ಕನ್ನಡಕ್ಕೆ ಹೊಸದಿಕ್ಕು ನೀಡಿದ ಶಂಕರನಾಗ್ ನಿರ್ದೇಶನದ ಚಿತ್ರಗಳು

  ಶಂಕರನಾಗ್ ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ. ಕೇವಲ ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆ. ತಾವು ಮತ್ತು ಅಣ್ಣ ಅನಂತನಾಗ್ ನಟಿಸಿದ `ಮಿಂಚಿನ ಓಟ' ಚಿತ್ರದ ಮೂಲಕ ನಿರ್ದೇಶನಕ್ಕಿಳಿದರು. ಈ ಚಿತ್ರ ಹಲವು ಪ್ರಶಸ್ತಿ ಕೂಡ ಪಡೆಯಿತು. ನಂತರ ಒಂದಕ್ಕಿಂತ ಒಂದು ವಿಭಿನ್ನವಾದ 9 ಚಿತ್ರಗಳನ್ನು ನಿರ್ದೇಶಿಸಿದರು.ಇದರಲ್ಲಿ ಏಳು ಕನ್ನಡ ಚಿತ್ರಗಳಿದ್ದರೆ, ಒಂದು ಹಿಂದಿ ಮತ್ತು ಒಂದು ಇಂಗ್ಲೀಷ್ ಚಿತ್ರಗಳಿದ್ದವು. ಹಿಂದಿಯಲ್ಲಿ ಲಾಲಚ್ ಎಂಬ ಚಿತ್ರವನ್ನು , ಇಂಗ್ಲೀಷ್ ನಲ್ಲಿ ವಾಚಮನ್ (ಮಾಲ್ಗುಡಿ ಡೇಸ್ ಆಧಾರಿತ) ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಇಂಗ್ಲೀ‍ಷ್ ಚಿತ್ರ ಆರು ಅಂತರಾಷ್ಟ್ರೀಯ ಪ್ರಶಸ್ತಿ ಮತ್ತು ಭಾರತದ ಅತ್ಯುನ್ನತ ರಾಷ್ಟ್ರ ಪ್ರಶಸ್ತಿ ಪಡೆಯಿತು. ಕೆಳಗೆ ಕನ್ನಡದಲ್ಲಿ ಶಂಕರನಾಗ್ ನಿರ್ದೇಶನ ಮಾಡಿದ ಚಿತ್ರಗಳು ಮತ್ತು ಅವುಗಳ ವಿಶೇಷತೆಗಳನ್ನು ನೀಡಿದೆ.

  1. ಮಿಂಚಿನ ಓಟ 1980

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Heist film

  ಬಿಡುಗಡೆ ದಿನಾಂಕ

  1980

  ಇದು ಶಂಕರನಾಗ್ ನಿರ್ದೇಶನದ ಮೊದಲ ಚಿತ್ರ. ನಾಗ್ ಸಹೋದರರು ಮತ್ತು ರಮೇಶ ಭಟ್, ಲೋಕನಾಥ್ ನಟಿಸಿದ ಈ ಚಿತ್ರ ಕನ್ನಡ ಚಿತ್ರರಂಗದ ಮೈಲಿಗಲ್ಲು. ಈ ಚಿತ್ರ ಎಂಟು ರಾಜ್ಯ ಪ್ರಶಸ್ತಿ ಮತ್ತು ಫಿಲ್ಮಫೇರ್ ಪ್ರಶಸ್ತಿ ಪಡೆಯಿತು.

  2. ಜನ್ಮ ಜನ್ಮದ ಅನುಬಂಧ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Drama

  ಬಿಡುಗಡೆ ದಿನಾಂಕ

  1980

  1980 ರಲ್ಲಿ ತೆರೆಕಂಡ ಈ ಚಿತ್ರ ಜನ್ಮ- ಜನ್ಮಾಂತರದ ಕಥಾವಸ್ತುವನ್ನು ಹೊಂದಿತ್ತು. ಅನಂತನಾಗ್ ಮತ್ತು ಜಯಂತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದರು.ಚಿತ್ರದ `ತಂಗಾಳಿಯಲ್ಲಿ ನಾನು' ಎವರ್ ಗ್ರೀನ್ ಹಾರರ್ ಥೀಮ್ ಹಾಡಾಗಿ ದಾಖಲಾಯಿತು.

  3. ಗೀತಾ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  1981

  ಶಂಕರನಾಗ್ ನಿರ್ದೇಶಿಸಿ ನಟಿಸಿದ ಈ ಚಿತ್ರ ಕನ್ನಡದ ಒಂದು ಅಪೂರ್ವ ದುರಂತ ಅಂತ್ಯವುಳ್ಳ ಚಿತ್ರ. ಈ ಮ್ಯುಸಿಕಲ್ ಬ್ಲಾಕ್ ಬ್ಲಸ್ಟರ್ ಚಿತ್ರದ `ಸಂತೋಷಕ್ಕೆ' ಹಾಡು ಈಗಲೂ ಹಲವು ಬ್ಯಾಂಡ್ ಗಳಲ್ಲಿ ಹಾಡಲಾಗುತ್ತದೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X