twitter
    X
    Home ಚಲನಚಿತ್ರಗಳ ಒಳನೋಟ

    ಚಂದನವನದಲ್ಲಿ ಹೆಸರು ಗಳಿಸಿದ ಮಲಯಾಳಂ ನಟಿಯರು

    Author Administrator | Updated: Friday, May 6, 2022, 10:00 AM [IST]

    ಪ್ರತಿವರ್ಷ ಎಲ್ಲಾ ಚಿತ್ರರಂಗಗಳಿಗೂ ಬೇರೆ ಭಾಷೆಯಿಂದ ನವ ಪ್ರತಿಭೆಗಳ ಆಗಮನ ಇದ್ದಿದ್ದೆ. ಬಹುತೇಕ ಇವರಲ್ಲಿ ನಾಯಕಿಯರೇ ಹೆಚ್ಚು. ಚಿತ್ರರಂಗದಲ್ಲಿ ನಾಯಕರು ಬಹುತೇಕ ಬಾರಿ ಒಂದೇ ಭಾಷೆಯ ಸಿನಿರಂಗಕ್ಕೆ ಸೀಮಿತವಾದರೆ, ನಾಯಕಿಯರು ಮಾತ್ರ ಸುಮಾರು ಮೂರು ನಾಲ್ಕು ಚಿತ್ರರಂಗಗಳಲ್ಲಿ ಏಕಕಾಲದಲ್ಲಿ ನಟಿಸುತ್ತಿರುತ್ತಾರೆ. ಚಂದನವನದಲ್ಲಿಯೂ ಹಿಂದಿ, ತಮಿಳು, ತೆಲಗು, ಮಲಯಾಳಂ ಮುಂತಾದ ಭಾಷೆಗಳಿಂದ ಬಂದು ಬದುಕು ಕಟ್ಟಿಕೊಂಡವರಿದ್ದಾರೆ. ಕೆಲವರು ಸುಮ್ಮನೆ ಒಂದು ಚಿತ್ರದಲ್ಲಿ ನಟಿಸಿ ಮಾಯವಾದರೆ, ಇನ್ನೂ ಕೆಲವರು ಇಲ್ಲಿಯೇ ಬೆರೆತು ಕನ್ನಡದವರೇ ಆಗಿದ್ದಾರೆ. ಹೀಗೆ ಕನ್ನಡ ಸಿನಿಮಾಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ ಮಲಯಾಳಂ ಮೂಲದ ನಟಿಯರು ಇಲ್ಲಿದ್ದಾರೆ ನೋಡಿ..

    cover image
    ಭಾವನಾ ಮೆನನ್

    ಭಾವನಾ ಮೆನನ್

    1

    ಪುನೀತ್ ರಾಜಕುಮಾರ್ ರ ಜಾಕಿ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಮಲಯಾಳಿ ಚೆಲುವೆ ಭಾವನಾ ನಂತರ ಯಾರೇ ಕೂಗಾಡಲಿ, ರೋಡ್ ರೋಮಿಯೋ, ಬಚ್ಚನ್ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದರು. ಕನ್ನಡದ ನಿರ್ಮಾಪಕರಾದ ನವೀನ್ ರನ್ನು ವಿವಾಹವಾಗಿರುವ ಇವರು ಪ್ರಸ್ತತ ಕರ್ನಾಟಕದಲ್ಲಿ ನೆಲೆಸಿದ್ದಾರೆ.

    ಭಾಮ

    ಭಾಮ

    2

    ಯಶ್ ಅಭಿನಯದ ಮೊದಲಾ ಸಲ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು. ನಂತರ ಶೈಲೂ, ಅಟೋ ರಾಜಾ, ಬರ್ಫಿ ಮುಂತಾದ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು.

    ಪಾರ್ವತಿ ಮೆನನ್

    ಪಾರ್ವತಿ ಮೆನನ್

    3

    ಪುನೀತ್ ರಾಜಕುಮಾರ್ ಅಭಿನಯದ ಮಿಲನ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರವೇಶಿಸಿದರು. ನಂತರ ಮಳೆ ಬರಲಿ ಮಂಜು ಇರಲಿ, ಪೃಥ್ವಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

    ಮೀರಾ ಜಾಸ್ಮಿನ್

    ಮೀರಾ ಜಾಸ್ಮಿನ್

    4

    2004 ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಅಭಿನಯದ ಮೌರ್ಯ ಚಿತ್ರದ ಮೂಲಕ ಮೀರಾ ಜಾಸ್ಮಿನ್ ಚಂದನವನ ಪ್ರವೇಶಿಸಿದರು. ನಂತರ ಅರಸು, ದೇವರು ಕೊಟ್ಟ ತಂಗಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

    ನಯನತಾರ

    ನಯನತಾರ

    6

    ಬೆಂಗಳೂರಿನಲ್ಲಿ, ಕೇರಳದ ಮೂಲದ ಕುಟುಂಬದಲ್ಲಿ ಜನಿಸಿದ ಪ್ರಸ್ತುತ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಯನತಾರಾ ಕನ್ನಡದಲ್ಲಿ ಉಪೇಂದ್ರ ಅಭಿನಯದ `ಸೂಪರ್' ಚಿತ್ರದಲ್ಲಿ ನಟಿಸಿದ್ದಾರೆ.

    ಪ್ರಿಯಾಮಣಿ

    ಪ್ರಿಯಾಮಣಿ

    7

    ಬೆಂಗಳೂರಿನಲ್ಲಿ ಜನಿಸಿದ ಪ್ರಿಯಾಮಣಿಯವರ ತಂದೆ ಕೇರಳದ ಪಾಲಕ್ಕಾಡ್ ನವರಾದರೆ, ತಾಯಿ ತಿರುವನಂತಪುರಂದವರು. ತಂದೆ ಪಾಲಕ್ಕಾಡ್ ನಲ್ಲಿ ಪ್ಲಾಂಟೇಷನ್ ವ್ಯವಹಾರದಲ್ಲಿ ತೊಡಗಿದ್ದಾರೆ. ತಮಿಳು, ತೆಲುಗು, ಮಲಯಾಳಂ ನಲ್ಲಿ ನಟಿಸುತ್ತಿದ್ದ ಪ್ರಿಯಾಮಣಿ 2009 ರಲ್ಲಿ ತೆರೆಕಂಡ ರಾಮ್ ಚಿತ್ರದಿಂದ ಕನ್ನಡದಲ್ಲಿ ಅಭಿನಯಿಸಲು ಆರಂಭಿಸಿದರು.

    ಶಿಲ್ಪಾ

    ಶಿಲ್ಪಾ

    8

    ಮಲಯಾಳಂ ಚಿತ್ರರಂಗದಲ್ಲಿ ಚಿಪ್ಪಿ ಎಂದೇ ಖ್ಯಾತಿ ಪಡೆದಿರುವ ಇವರು ಜನುಮದ ಜೋಡಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಶಿಲ್ಪಾ ಎಂದೇ ಖ್ಯಾತಿ ಪಡೆದಿದ್ದಾರೆ.

    ಅಂಬಿಕಾ

    ಅಂಬಿಕಾ

    9

    ಕೇರಳದ ತಿರುವನಂತಪುರಂದಲ್ಲಿ ಜನಿಸಿದ ಇವರು 90 ರ ದಶಕದಲ್ಲಿ ದಕ್ಷಿಣ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಉತ್ತುಂಗದಲ್ಲಿದ್ದರು. ಮಲಯಾಳಂ ಚಿತ್ರರಂಗದಲ್ಲಿ ಸಿನಿ ಜರ್ನಿ ಆರಂಭಿಸಿದ ಅಂಬಿಕಾ 1981 ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದರು.

    ಕಾರ್ತಿಕ ನಾಯರ್

    ಕಾರ್ತಿಕ ನಾಯರ್

    10

    ಪ್ರಸಿದ್ಧ ಮಲಯಾಳಂ ನಟಿ ರಾಧಾ ರವರ ಪುತ್ರಿಯಾಗಿ ಮುಂಬೈನಲ್ಲಿ ಜನಿಸಿದ ಕಾರ್ತಿಕಾ ನಾಯರ್ ಕನ್ನಡದಲ್ಲಿ ದರ್ಶನ್ ರ ಬೃಂದಾವನ ಚಿತ್ರದಲ್ಲಿ ನಟಿಸಿದರು.

    ಊರ್ವಶಿ

    ಊರ್ವಶಿ

    11

    ಕೇರಳದ ತಿರುವನಂತಪುರಂದಲ್ಲಿ ಜನಿಸಿ ಬೆಳೆದ ಕವಿತಾ ರಂಜನಿ , ಚಿತ್ರರಂಗದಲ್ಲಿ ಊರ್ವಶಿ ಎಂದೇ ಪರಿಚಿತರು. 1980 ರಿಂದ ಕನ್ನಡ ಚಿತ್ರಗಳಲ್ಲಿ ಅಭಿನಯಿಸತೊಡಗಿದ ಊರ್ವಶಿ 90ರ ದಶಕದ ಬಹುತೇಕ ಕನ್ನಡದ ಮೇರುನಟರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ.

    ಅಮಲಾ ಪೌಲ್

    ಅಮಲಾ ಪೌಲ್

    12

    ಕೇರಳದ ಕೊಚ್ಚಿಯಲ್ಲಿ ಜನಿಸಿ ಬೆಳೆದ ಅಮಲಾ ಪಾಲ್ 2009 ರಿಂದ ಚಿತ್ರರಂಗದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾದರು. ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

    ಅನುಪಮಾ ಪರಮೇಶ್ವರನ್

    ಅನುಪಮಾ ಪರಮೇಶ್ವರನ್

    13

    ಪ್ರೇಮಂ ಮೂಲಕ ಖ್ಯಾತಿ ಪಡೆದಿದ್ದ ಅನುಪಮಾ ಪರಮೇಶ್ವರನ್ ಪುನೀತ್ ರ ನಟಸಾರ್ವಭೌಮ ಚಿತ್ರದಲ್ಲಿ ನಾಯುಕಿಯಾಗಿ ನಟಿಸಿದರು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X