»   » ಈ ಟಿವಿಯಲ್ಲಿ ರಾತ್ರಿವೇಳೆ ಮುಂಜಾವು

ಈ ಟಿವಿಯಲ್ಲಿ ರಾತ್ರಿವೇಳೆ ಮುಂಜಾವು

Posted By:
Subscribe to Filmibeat Kannada

ಅಚ್ಚುಮೆಚ್ಚಿನ ಧಾರಾವಾಹಿಗಳನ್ನು ನೋಡುತ್ತಾ, ಟಿವಿಗೆ ಆತು ಕೂರುವ ಗೃಹಿಣಿಯರಿಗೆ ಇನ್ಮುಂದೆ ರಾತ್ರಿ 8.30ರ ವೇಳೆಗೆ 'ಮುಂಜಾವು ' ಕಾಣಿಸಲಿದೆ. ಉತ್ತಮ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಾ ಬಂದಿರುವ ಈಟಿವಿ ವಾಹಿನಿಯಲ್ಲಿ ಟಿ ಎನ್ ಸೀತಾರಾಂ ಅವರ ಆಶೀರ್ವಾದಗಳೊಂದಿಗೆ ಚಿತ್ರಪಟ ಎಂಬ ಹೊಸ ಬ್ಯಾನರ್ ಅಡಿಯಲ್ಲಿ ವಿನೋದ್ ವಿಧುಂಡಳೆ ಅವರು ಮುಂಜಾವು ಧಾರಾವಾಹಿಯನ್ನು ಸ್ವತಂತ್ರವಾಗಿ ನಿರ್ದೇಶಿಸಲಿದ್ದಾರೆ.

ಇಂದಿನ ಸಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಕಥೆಯನ್ನು ಹೆಣೆಯಲಾಗಿದೆ. ಸಂಪ್ರದಾಯಸ್ಥರು, ಮಾರ್ಡನ್ ನಾಗರೀಕರು, ಯುವ ಜನಾಂಗ ಸೇರಿದಂತೆ ಎಲ್ಲವರ್ಗದ ಜನರ ವೀಕ್ಷಣೆಗೆ ಮುಂಜಾವು ಸಿದ್ಧವಾಗಿದೆ. ವಿಧವಾ ವಿವಾಹ, ಐಟಿ ಕ್ಷೇತ್ರದ ಯುವ ಉದ್ಯಮಿಗಳು, ಸಂಸಾರ, ಅಣ್ಣ ತಮ್ಮಂದಿರಕಲಹ, ನೋವು ನಲಿವಿನ ಕಥಾಹಂದರ ಇದರಲ್ಲಿದೆ. ಕತ್ತಲೆಯನ್ನು ದೂರಾಗಿಸಿ, ಪ್ರಭೆಯನ್ನು ಬಾಳಿಗೆ ತರುವುದು ಮುಂಜಾವಿನ ಕೆಲಸ. ಎನ್ನುತ್ತಾರೆ ನಿರ್ದೇಶಕ ವಿನೋದ್.

ಈಗಾಗಲೇ 30 ಎಪಿಸೋಡ್ ಗಳಿಗಾಗುವಷ್ಟು ಚಿತ್ರೀಕರಣ ಪೂರೈಸಲಾಗಿದ್ದು, ಏನಿಲ್ಲಾ ಅಂದರೂ ಸುಮಾರು 500 ಎಪಿಸೋಡ್ ವರೆಗೂ ಧಾರಾವಾಹಿ ವಿಸ್ತರಣೆಗೊಳ್ಳಬಹುದು ಎಂದು ಚಿತ್ರಪಟದ ಕಾರ್ಯಕಾರಿ ನಿರ್ಮಾಪಕ ಸತ್ಯ ಹೇಳಿದರು. ಟಿಎನ್ ಶ್ರೀನಿವಾಸಮೂರ್ತಿ, ಹರೀಶ್, ನಂದಿನಿ ಮೂರ್ತಿ, ಪದ್ಮಾ ಕುಮಟಾ, ಹರಿಣಿ, ನಂಜುಂಡ ಮೂರ್ತಿ, ಸುಂದರಶ್ರೀ, ಕೃಷ್ಣ ಅಡಿಗ, ವೆಂಕಟರಾವ್,ನಂದಿನಿ ವಿಟ್ಟಳ ಪ್ರಮುಖ ಭೂಮಿಕೆಯಲ್ಲಿದ್ದಾರೆ. ದಿನಕ್ಕೆ ಕನಿಷ್ಠವೆಂದರೂ 40-50 ಸಿರಿಯಲ್ ಗಳು ಈಗಾಗಲೇ ಟಿವಿಯನ್ನು ಆಕ್ರಮಿಸಿದೆ. ಇದರ ಮಧ್ಯದಲ್ಲಿ ಮುಂಜಾವು ಮೆಗಾ ಸಿರಿಯಲ್ ಈ ಟಿವಿ ವಾಹಿನಿಯಲ್ಲಿ ಪ್ರತಿರಾತ್ರಿ 8.30ರಿಂದ 9 ರವರೆಗೂ ನಿಮ್ಮ ಮನರಂಜನೆಗಾಗಿ ಪ್ರಸಾರವಾಗಲಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada