»   »  ಕಿರುತೆರೆಯ ಬಾದ್ ಷಾ ರವಿಕಿರಣ್ ಗೆ ಪ್ರಶಸ್ತಿ

ಕಿರುತೆರೆಯ ಬಾದ್ ಷಾ ರವಿಕಿರಣ್ ಗೆ ಪ್ರಶಸ್ತಿ

Posted By: Staff
Subscribe to Filmibeat Kannada
ACT Television Cable Varthe Television Award
ಇದೇ ಮೊದಲ ಬಾರಿಗೆ 'ಆಕ್ಟ್ (ACT) ಟೆಲಿವಿಷನ್ ಕೇಬಲ್ ವಾರ್ತೆ ಟಿವಿ ಪ್ರಶಸ್ತಿ 2009'ನ್ನು ಪ್ರಕಟಿಸಲಾಗಿದೆ. ಆಕ್ಟ್ ಕೇಬಲ್ ವಾರ್ತಾ ಪ್ರಶಸ್ತಿಯ ಗೌರವಕ್ಕೆ ಕಿರುತೆರೆಯ 'ಬಾದ್ ಷಾ' ರವಿಕಿರಣ್ ಭಾಜನರಾಗಿದ್ದಾರೆ. ಕಿರುತೆರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರು, ತಂತ್ರಜ್ಞರಿಗೆ 30 ಕ್ಕೂ ಹೆಚ್ಚು ವಿಭಾಗಗಳಲ್ಲಿ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಕೇಬಲ್ ಟೀವಿ ಅಧ್ಯಕ್ಷ ಜಗದೀಶ್ ತಿಳಿಸಿದ್ದಾರೆ.

ಈಟಿವಿಯ ಸುರೇಂದ್ರನಾಥ್, ಉದಯ ವಾಹಿನಿಯ ವಿಜಯಕುಮಾರ್, ಆಳ್ವ ಬ್ರದರ್ಸ್ ಮತ್ತು ಮೆಡಿಟೆಕ್ ನ ನಿವೇದಿತಾ ಆಳ್ವ ಮತ್ತು ಲಂಡನ್ ಎನ್ ಟೀವಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಶೆಟ್ಟಿ ಅವರಿಗೆ ಕೇಬಲ್ ಮತ್ತು ಪ್ರಸರಣ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಎಚ್ ಎಂ ಕೆ ಮೂರ್ತಿ, ಸಿಹಿಕಹಿ ಚಂದ್ರು, ಎಂ.ಎಸ್. ನರಸಿಂಹಮೂರ್ತಿ ಮತ್ತು ಅಪರ್ಣಾ ಅವರಿಗೆ ಜೀವ ಮಾನ ಸಾಧನೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಬೆಂಗಳೂರು ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಏಪ್ರಿಲ್ 12ರ ಸಂಜೆ 6 ಗಂಟೆಗೆ ಆಕ್ಟ್ ಕೇಬಲ್ ವಾರ್ತಾ ಪ್ರಶಸ್ತಿ 2009ನ್ನು ಪ್ರದಾನ ಮಾಡಲಾಗುತ್ತದೆ.ಪ್ರಶಸ್ತಿ ಆಯ್ಕೆ ಸಮಿತಿಯು ಡಾ.ದೊಡ್ಡರಂಗೇಗೌಡ, ಅನಂತ ಚಿನಿಮಾರ್, ಬಿ.ಆರ್.ಛಾಯಾ ಮತ್ತು ಸಬ್ಬಕೆರೆ ವೆಂಕಟೇಶ್ ಅವರನ್ನು ಒಳಗೊಂಡಿತ್ತು.

ವಿಶೇಷ ಪ್ರತಿಭಾ ಪ್ರಶಸ್ತಿ ಸೇರಿದಂತೆ ಹಲವಾರು ವಿಭಾಗಗಳನ್ನು ಆಕ್ಟ್ ಕೇಬಲ್ ವಾರ್ತಾ ಪ್ರಶಸ್ತಿ ಒಳಗೊಂಡಿದೆ. ಬಿಳಿಗಿರಿ ರಂಗನಾಥ್, ಜಗದೀಶ್, ರವಿಕಿರಣ್, ಅನಂತಕುಮಾರ್, ವಿನೋದ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ರಘು ದೀಕ್ಷಿತ ಸಂಗೀತ ಸಂಜೆ
ಆಕ್ಟ್ ಕೇಬಲ್ ವಾರ್ತಾ ಪ್ರಶಸ್ತಿಯ ಭಾಗವಾಗಿ 'ಸಾಧನ ಸಂಭ್ರಮ' ಸಂತೋಷ ಕೂಟವನ್ನು ಹಮ್ಮಿಕೊಳ್ಳಲಾಗಿದೆ. ಸೈಕೋ ಖ್ಯಾತಿಯ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕನ್ನಮಂಗಲದ ಛಾಬ್ರಿಯಾ ಗಾರ್ಡನ್ ನಲ್ಲಿ ಏಪ್ರಿಲ್ 14ರಂದು ರಘು ದೀಕ್ಷಿತ್ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada