»   » ರಕ್ಷಿತಾ 'ಸ್ವಯಂವರ' ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧ

ರಕ್ಷಿತಾ 'ಸ್ವಯಂವರ' ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧ

Posted By:
Subscribe to Filmibeat Kannada

ಚಿತ್ರರಂಗದಿಂದ ನೇಪಥ್ಯಕ್ಕೆ ಸರಿದ ನಟಿ ರಕ್ಷಿತಾ ಇದೀಗ ಕಿರುತೆರೆ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸುವರ್ಣ ವಾಹಿನಿಗಾಗಿ ರಕ್ಷಿತಾ ನಡೆಸಿಕೊಡುವ ರಿಯಾಲಿಟಿ ಶೋ 'ಸ್ವಯಂವರ' ಇದೇ ಏಪ್ರಿಲ್ 12ರಿಂದ ಸೋಮವಾರದಿಂದ ಶುಕ್ರವಾರವರೆಗೆ ರಾತ್ರಿ 8ಕ್ಕೆ ಪ್ರಸಾರ ಆರಂಭಿಸಲಿದೆ.

ಈಗಾಗಲೆ ಈ ರೀತಿಯ ರಿಯಾಲಿಟಿ ಶೋಗಳು ವಿವಿಧ ವಾಹಿನಿಗಳಲ್ಲಿ ಸಾಕಷ್ಟು ಪ್ರಸಾರವಾಗಿವೆ.ಈ ರೀತಿಯ ಕಾರ್ಯಕ್ರಮಗಳು ರಾಖಿ ಸಾವಂತ್, ರಾಹುಲ್ ಮಹಾಜನ್ ಹಾಗೂ ರಂಭಾರನ್ನು ಮತ್ತಷ್ಟು ಜನಪ್ರಿಯವಾಗಿಸಿತ್ತು. ಇದೀಗ ಸುವರ್ಣ ವಾಹಿನಿಯ 'ಸ್ವಯಂವರ' ಕಾರ್ಯಕ್ರಮದ ನಿರೂಪಕಿಯಾಗಿ ರಕ್ಷಿತಾ ಇಪ್ಪತ್ತನಾಲ್ಕು ಕ್ಯಾರೆಟ್ ಮನರಂಜನೆ ನೀಡಲು ಸಿದ್ಧರಾಗಿದ್ದಾರೆ.

ಮದುವೆಯಾಗಲು ಇಚ್ಛಿಸುವವರಿಗೆ 'ಸ್ವಯಂವರ' ಹೊಸ ವೇದಿಕೆಯಾಗಲಿದೆ. ಈ ಕಾರ್ಯಕ್ರಮದ ಮೂಲಕ ಒಂದೇ ವಾರದಲ್ಲಿ ತಮ್ಮ ನೆಚ್ಚಿನ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸೂಕ್ತ ವಧುವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ರಕ್ಷಿತಾ ಸಹಾಯ ಮಾಡಲಿದ್ದಾರೆ.

ವಿಧವೆಯರು, ಅನಾಥರು ಸಹ ಸ್ವಯಂವರದಲ್ಲಿ ಭಾಗವಹಿಸಬಹುದು ಎನ್ನು ತ್ತಾರೆ ಸುವರ್ಣ ವಾಹಿನಿಯ ಅನೂಪ್ ಚಂದ್ರಶೇಖರನ್. ಕನ್ನಡದ ಮಟ್ಟಿಗೆ ವಿಭಿನ್ನವಾಗಿರು ಈ 'ಸ್ವಯಂವರ' ಪ್ರೇಕ್ಷಕರನ್ನು ಖಂಡಿತ ರಂಜಿಸಲಿದೆ ಎಂಬ ವಿಶ್ವಾಸವನ್ನು ಸುವರ್ಣ ವಾಹಿನಿಯ ದಕ್ಷಿಣ ಭಾರತದ ಮುಖ್ಯಸ್ಥ ಜಗದೀಶ್ ಕುಮಾರ್ ವ್ಯಕ್ತಪಡಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada