»   » ಗುಲಬರ್ಗಾ ದೂರದರ್ಶನದಿಂದ 'ನಗೆ ಸಿಂಚನ'

ಗುಲಬರ್ಗಾ ದೂರದರ್ಶನದಿಂದ 'ನಗೆ ಸಿಂಚನ'

Posted By:
Subscribe to Filmibeat Kannada
Doordarshan
ಗುಲಬರ್ಗಾ ದೂರದರ್ಶನ ಕೇಂದ್ರವು ಯುಗಾದಿ ಹಬ್ಬದ ಪ್ರಯುಕ್ತ ಗುಲಬರ್ಗಾ ನಗರದ ನೂತನ ವಿದ್ಯಾಲಯ ಆವರಣದಲ್ಲಿರುವ ಸತ್ಯಪ್ರಮೋದ ಸಭಾಂಗಣದಲ್ಲಿ 2010ರ ಮಾರ್ಚ್ 10ರಂದು ಸಂಜೆ 6 ಗಂಟೆಗೆ 'ನಗೆ ಸಿಂಚನ' ವಿಶೇಷ ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಾದ ಗಂಗಾವತಿಯ ಬಿ.ಪ್ರಾಣೇಶ,ಗುಲಬರ್ಗಾದ ಇಂದುಮತಿ ಸಾಲಿಮಠ, ಹೇಮಂತ ಕೊಲ್ಹಾಪೂರ,ಗುಂಡಣ್ಣ ಡಿಗ್ಗಿ, ಡಿ.ಆರ್.ಕಲಬುರ್ಗಿ ,ನಾರಾಯಣ ಕುಲಕರ್ಣಿ ಹಾಗೂ ಯಾದಗಿರಿಯ ಬಸವರಾಜ ಮಹಾಮನಿ ಅವರು ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ದೂರದರ್ಶನ ಭಂಡಾರದಿಂದ ಆಯ್ದ ಅತ್ಯಮೂಲ್ಯ ಸಂಗೀತ ಹಾಗೂ ನೃತ್ಯಗಳ ವಿಸಿಡಿ, ಡಿವಿಡಿ ಹಾಗೂ ಎಸಿಡಿಗಳ ಮಾರಾಟ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಗುಲಬರ್ಗಾ ದೂರದರ್ಶನ ಕೇಂದ್ರದ ಅಸಿಸ್ಟೆಂಟ್ ಸ್ಟೇಶನ್ ಡೈರೆಕ್ಟರ್ ಎಂ.ಬಿ.ಪಾಟೀಲ್ ಅವರು ತಿಳಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada