»   » ಕರೋಡ್‌ಪತಿ ವಿನ್ನರ್‌ ಸುಶೀಲ್ ಕುಮಾರ್‌ಗೆ ಜೀವ ಬೆದರಿಕೆ

ಕರೋಡ್‌ಪತಿ ವಿನ್ನರ್‌ ಸುಶೀಲ್ ಕುಮಾರ್‌ಗೆ ಜೀವ ಬೆದರಿಕೆ

Posted By:
Subscribe to Filmibeat Kannada
 Sushil Kumar
ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಶೋ ಕೌನ್ ಬನೇಗಾ ಕರೋಡ್‌ಪತಿ. ಈ ಕಾರ್ಯಕ್ರಮದಲ್ಲಿ ಐದನೇ ಆವೃತ್ತಿಯಲ್ಲಿ ಸುಶೀಲ್ ಕುಮಾರ್ ರಾತ್ರೋರಾತ್ರಿ ಕೋಟ್ಯಾಧೀಶನಾಗಿದ್ದ. ಐದು ಕೋಟಿ ರುಪಾಯಿ ಗೆದ್ದಿರುವ ಈತನಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ.

ಮುಂಬೈನಿಂದ ಈಗ ತನ್ನ ಹುಟ್ಟೂರು ಬಿಹಾರದ ಮೋತಿಹಾರಿಗೆ ಬರುತ್ತಿದ್ದಂತೆ ಬೆದರಿಕೆ ಕರೆಗಳ ಕಿರಿಕಿರಿ ಶುರುವಾಗಿದೆ. ನಿನ್ನನ್ನು ಕಿಡ್ನಾಪ್ ಮಾಡುತ್ತೇವೆ. ನಿಮ್ಮ ಕುಟುಂಬಿಕರನ್ನು ಅಪಹರಣ ಮಾಡುತ್ತೇವೆ ಎಂಬ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಈ ಕರೆಗಳಿಂದ ಸುಶೀಲ್ ಕುಟುಂಬ ಭಯದಲ್ಲಿ ನರಳುವಂತಾಗಿದೆ.

ಈ ರೀತಿಯ ಕರೆಗಳಿಂದ ನನ್ನ ಮನಸ್ಸಿಗೆ ಬೇಜಾರಾಗಿದೆ. ಆದರೆ ಕಿಡ್ನಾಪರ್ಸ್‌ಗೆ ನಾನು ಹೇಳುವುದೇನೆಂದರೆ. ನನ್ನ ಬಳಿ ಬಹುಮಾನದ ಹಣ ಇಲ್ಲ. ಅದು ಬರಲು ಇನ್ನೂ ಕೆಲವು ತಿಂಗಳುಗಳ ಕಾಲ ಹಿಡಿಸುತ್ತದೆ. ನನ್ನ ಜಿಲ್ಲೆಯ ಬಹಳಷ್ಟು ಮಂದಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನಿಮ್ಮ ಆಟ ನಡೆಯಲ್ಲ ಎಂದು ಪರೋಕ್ಷವಾಗಿ ಅಪಹರಣಕಾರರಿಗೆ ಸುಶೀಲ್ ಎಚ್ಚರಿಸಿದ್ದಾರೆ. (ಏಜೆನ್ಸೀಸ್)

English summary
Overnight famed Sushil Kumar is now reportedly facing death threats after hitting the jackpot in Kaun Banega Crorepati 5. Sushil, who belongs to Bihar's crime-infested town Motihari has been getting such threatening calls after he returned back from Mumbai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada