»   » ಸದ್ಯದಲ್ಲೇ ಸಮಯ ಟಿವಿ ಕಾರ್ಯಾರಂಭ!

ಸದ್ಯದಲ್ಲೇ ಸಮಯ ಟಿವಿ ಕಾರ್ಯಾರಂಭ!

Posted By:
Subscribe to Filmibeat Kannada

ಬಹುನೀರೀಕ್ಷಿತ ಸಮಯ ಟಿವಿ ಕನ್ನಡ ವಾಹಿನಿಯು ಅನತಿ ಕಾಲದಲ್ಲೇ ತನ್ನ ಪ್ರಸಾರ ಕಾರ್ಯವನ್ನು ಆರಂಭಿಸಲಿದೆ ಎಂದು ವಿಶ್ವಸನೀಯವಾಗಿ ತಿಳಿದುಬಂದಿದೆ. ಬೆಂಗಳೂರಿನಿಂದ ಹೊರಗೆ ನೆಲೆಯಾಗಿದ್ದುಕೊಂಡು 24 ಗಂಟೆಗಳ ಕಾಲ ಸುದ್ದಿ ಮತ್ತು ಸಾಮಾಜಿಕ ಆಗುಹೋಗುಗಳನ್ನು ಬಿಂಬಿಸುವ ಈ ವಾಹಿನಿ ಕನ್ನಡ ಟಿವಿ ಚಾನಲ್ ಗಳ ಸಾಲಿಗೆ ಹೊಸ ಸೇರ್ಪಡೆಯಾಗಲಿದೆ ಎಂದು ಗೊತ್ತಾಗಿದೆ.

ಸುದ್ದಿ ಪ್ರಸಾರ ಮತ್ತು ಸಾಮಾಜಿಕ ವಿಷಯ ವಿವೇಚನೆಗಳನ್ನು ನಿರಂತರವಾಗಿ ಹರಿದುಬಿಡುವ ಮೂರು ಚಾನೆಲುಗಳು ಕನ್ನಡದಲ್ಲಿ ಈಗಾಗಲೇ ಇವೆ. ಟಿವಿ9, ಸುವರ್ಣ ಮತ್ತು ಉದಯ ವಾರ್ತೆ ವಾಹಿನಿಗಳ ಸಾಲಿನಲ್ಲಿ ಸಮಯ ಟಿವಿ ಕೂಡ ಒಂದಾಗಿ ಮೂಡಿಬರಲಿದೆ ಎಂದು ಹೇಳಲಾಗಿದೆ. ಸಮಯ ಟಿವಿ ಕಾರ್ಯಾರಂಭ ಮಾಡಲಿದೆ ಎಂಬ ಸುದ್ದಿಗಳು ಈಗಾಗಲೇ ಅನೇಕ ಬಾರಿ ಮಾಧ್ಯಮಗಳಲ್ಲಿ ಸುದ್ದಿ ಆಗಿತ್ತಾದರೂ ವಾಸ್ತವದಲ್ಲಿ ಅದು ಕ್ರಿಯೆಯಾಗಲಿಲ್ಲ ಎಂಬ ಅಂಶವನ್ನು ದಟ್ಸ್ ಕನ್ನಡ ನೆನಪಿಸುತ್ತದೆ.

[ಪತ್ರಕರ್ತರನ್ನು ಅವರ ಚಾನಲ್ ವತಿಯಿಂದ ನೇಮಕ ಮಾಡಿಕೊಳ್ಳಲಾಗುತ್ತಿದೆ ಕೂಡ. ಕೊನೆಗೂ ಜಾರಕಿಹೊಳಿ ಟಿವಿಯನ್ನು ತೇಲಿಬಿಡುತ್ತಾರಾ ಅಥವಾ ಮತ್ತೊಮ್ಮೆ ಅದು ನೇಪಥ್ಯಕ್ಕೆ ಸರಿದುಹೊಗುತ್ತದಾ ಎಂಬುದನ್ನು ಸಮಯವೇ ನಿರ್ಧರಿಸಬೇಕಾಗಿದೆ.]

ವಾಹಿನಿಯ ಕೆಲವು ಆಯಕಟ್ಟಿನ ಸ್ಥಾನಗಳನ್ನು ಹೊರತುಪಡಿಸಿದರೆ ಇತರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಬಹುತೇಕ ಪೂರ್ಣವಾಗಿದೆ ಎಂದು ಹೇಳಲಾಗಿದೆ. ಸತೀಶ್ ಶುಗರ್ಸ್ ಲಿಮಿಟೆಡ್ ಸಂಸ್ಥೆಯ ವಿದ್ಯುನ್ಮಾನ ಮಾಧ್ಯಮ ಮುಖವಾಗಿರುವ ಸಯಮ ಟಿವಿಯ ಫೇಸ್ ಬುಕ್ ಪುಟದಲ್ಲಿ ಈ ಸಂಗತಿಗಳನ್ನು ನಮೂದಿಸಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada