»   » ಟಿವಿ ಧಾರಾವಾಹಿಗಳಿಗೂ ಸರ್ಕಾರದ ಪ್ರೋತ್ಸಾಹ

ಟಿವಿ ಧಾರಾವಾಹಿಗಳಿಗೂ ಸರ್ಕಾರದ ಪ್ರೋತ್ಸಾಹ

Posted By:
Subscribe to Filmibeat Kannada

ಕತೆ, ಕಾದಂಬರಿ ಆಧಾರಿತ ದೂರದರ್ಶನ ಧಾರಾವಾಹಿಗಳಿಗೆ ಸರಕಾರ ಪ್ರೋತ್ಸಾಹಿಸಲಿದೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕುವೆಂಪು ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ 'ಟಿವಿ ರತ್ನ ಪುರಸ್ಕಾರ' ಮತ್ತು 'ಟಿವಿ ಸಾಮ್ರಾಟ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಟಿವಿ ಧಾರಾವಾಹಿಗಳು ಸಿನಿಮಾಗಳಿಗಿಂಗಲೂ ಹೆಚ್ಚು ಜನರನ್ನು ತಲುಪುತ್ತಿವೆ. ಟಿವಿಯಲ್ಲಿ ಉತ್ತಮ ಧಾರಾವಾಹಿಗಳು ಪ್ರಸಾರಗೊಳ್ಳುತ್ತಿವೆ ಎಂದು ಅಶೋಕ್ ಮೆಚ್ಚುಗೆ ವ್ಯ್ಯಕ್ತಪಡಿಸಿದರು. ಸನ್ಮಾನಿತ ನಟಿ ಉಮಾಶ್ರೀ ಅವರು ಮಾತನಾಡುತ್ತಾ, ರಂಗಭೂಮಿ, ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿನ ಕಲಾವಿದರೆಲ್ಲಾ ಒಂದೇ ಎಂದರು.

ವಿ.ಕೆ ಮೂರ್ತಿ, ಅಶೋಕ್ ನಾಯ್ಡು, ಪಿ ಶೇಷಾದ್ರಿ, ಸುರೇಶ್ ಬೈರಸಂದ್ರ, ಎಸ್ ರಾಮಚಂದ್ರ, ಉಮಾಶ್ರೀ, ಗುರುದತ್, ಬಿ ಸುರೇಶ್, ಶೈಲಜಾ ನಾಗ್, ಎಚ್.ಎಲ್.ಎನ್.ರಾವ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಕಾಶ್ ರೈ, ಅಭಯ ಸಿಂಹ ಮತ್ತು ಅರುಂಧತಿ ನಾಗ್ ಅವರ ಪರವಾಗಿ ಇತರರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ವಾತ್ರಾ ಇಲಾಖೆ ನಿರ್ದೇಶಕ ವಿಶುಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ, ಶಾಸಕ ಸತೀಶ್ ರೆಡ್ಡಿ, ನಟ ರಘು ಮುಖರ್ಜಿ, ನಟಿಯರಾದ ಗಿರಿಜಾ ಲೋಕೇಶ್, ಗಾಯತ್ರಿ ಪ್ರಭಾಕರ್, ಧಾರಾವಾಹಿ ಕಲಾವಿದರು ಮತ್ತು ಸಂಘದ ಅಧ್ಯಕ್ಷ ರವಿಶಂಕರ್ ಉಪಸ್ಥಿತರಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada