twitter
    For Quick Alerts
    ALLOW NOTIFICATIONS  
    For Daily Alerts

    ಸುವರ್ಣ ಪ್ಯಾಟೆ ಹುಡ್ಗೀರ್ ಗೆ ನೋಟಿಸ್

    By Mahesh
    |

    Child rights commision notice to PHHL 2
    ಟಿವಿ ಕಾರ್ಯಕ್ರಮಗಳಲ್ಲಿ ಮಿತಿ ಮೀರುತ್ತಿರುವ ಹಿಂಸೆ, ಕ್ರೌರ್ಯ, ಅಪರಾಧ ಸುದ್ದಿಗಳ ವೈಭವೀಕರಣ, ಇದಕ್ಕೆ ಕಡಿವಾಣ ಹಾಕಲು ತಜ್ಞರ ಸಮಿತಿಯನ್ನು ಸ್ಥಾಪನೆಗೆ ಮಾಹಿತಿ ಮತ್ತು ಪ್ರಸಾರ ಖಾತೆ ಮುಂದಾಗಿರುವುದು ಸಂತೋಷದ ವಿಷಯ ಪ್ರಾದೇಶಿಕ ಖಾಸಗಿ ವಾಹಿನಿಗಳೂ ಈ ಸಮಿತಿಯ ವ್ಯಾಪ್ತಿಗೆ ಒಳ ಪಡಲಿ ಎಂಬ ಆಶಯ. ಅದರಲ್ಲೂ ಸುವರ್ಣ ವಾಹಿನಿ ನಡೆಸಿಕೊಂಡು ಬಂದಿರುವ ಅರ್ಥವಿಲ್ಲದ ರಿಯಾಲಿಟಿ ಶೋಗಳಿಗೆ ಮೊದಲು ಕತ್ತರಿ ಬೀಳಬೇಕು.

    ಪ್ಯಾಟೆ ಮಂದಿ ಯಾತಕ್ಕಾದರೂ ಕಾಡಿಗೆ ಬಂದ್ರು? ಎಂದು ಯಲ್ಲಾಪುರದ ಜನತೆ ಕೂಗು ಸಂಬಂಧಪಟ್ಟವರ ಕಿವಿಗೆ ಬೀಳುವ ಮುನ್ನವೇ ಪ್ಯಾಟೆ ಹುಡ್ಗೀರ ಹಳ್ಳಿ ಲೈಫು ತನ್ನ ಎರಡನೇ ಆವೃತ್ತಿಯನ್ನು ಆರಂಭಿಸಿಯಾಗಿತ್ತು. ಮೊದಲ ಭಾಗಕ್ಕಿಂತ ಇನ್ನಷ್ಟು ರೋಚಕವಾಗಿಸಲು ಸುವರ್ಣ ವಾಹಿನಿ, ಬಾಗಲಕೋಟೆಯ ಕೆರಕಲಮಟ್ಟಿ ಗ್ರಾಮವನ್ನು ಆರಿಸಿಕೊಂಡು ಉತ್ತರ ಕರ್ನಾಟಕ ಸಂಸ್ಕೃತಿ ಅನಾವರಣ ಮಾಡುವ ಭ್ರಮೆ ಇಟ್ಟುಕೊಂಡಿತ್ತು. ಆದರೆ, ಆರಂಭ ಹಂತದಲ್ಲೇ ಪ್ಯಾಟೆ ಹುಡುಗೀರ ವೇಷ ಭೂಷಣ, ಸೋಮಾರಿತನಕ್ಕೆ ಹಳ್ಳಿ ಮಂದಿಯಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

    ಒಂದಿಬ್ಬರು ಸ್ಪರ್ಧಿಗಳಿಗೆ ಮನೆ ಮಂದಿಯಿಂದ(ಪ್ರಮುಖವಾಗಿ ಮನೆ ಅಜ್ಜಿಯರು) ಆಗಾಗ ಜೋರಾಗಿ ಪೆಟ್ಟು ಕೂಡಾ ಬೀಳುತ್ತಿತ್ತು. ಒಂದು ಕಂತಿನಲ್ಲಿ ಸೋತ ಕುಮುದಾ ಎಂಬ ಸ್ಪರ್ಧಿಗೆ ಬ್ಯಾಡಗಿ ಮೆಣಸಿನ ಕಾಯಿ ಅರೆಯುವ ಶಿಕ್ಷೆ ನೀಡಿದ್ದು, ಆಕೆ ಆಸ್ಪತ್ರೆಯಲ್ಲಿ ಮೂರ್ನಾಲ್ಕು ದಿನ ಚೇತರಿಸಿಕೊಳ್ಳುವಂತೆ ಮಾಡಿತ್ತು. ನಿರೂಪಕ ಅಕುಲ್ ಹೇಗೋ ಇದನ್ನು ಸಂಭಾಳಿಸಿ ಬಚಾವ್ ಆಗಿ ಬಿಟ್ಟ.

    ಆದರೆ, ಇತ್ತೀಚೆಗೆ ಶೋನ ಕಂತಿನಲ್ಲಿ ಅಪೂರ್ವ ಶೆಟ್ಟಿ ಹಾಗೂ ನಿಶಾ ಎಂಬ ಸ್ಪರ್ಧಿಗಳು ಪುಟ್ಟ ಬಾಲಕನಿಗೆ ಹಿಂಸೆ ನೀಡಿದ್ದು, ಬಾಲಕ ರೌದ್ರಾವತಾರ ತಾಳಿ ಮಚ್ಚು ಹಿಡಿದು ಅವರನ್ನು ಹೊಡೆಯಲು ಹೊರಟ್ಟಿದ್ದು, ಅದಕ್ಕೆ ಹೊಡಿಮಗ, ಹೊಡಿಮಗ ಹಾಡಿನ ಹಿನ್ನೆಲೆ ಧ್ವನಿ ನೀದಿದ್ದು, ಬಾಲಕನನ್ನು ಹಿಡಿದುಕೊಂಡ ಹುಡುಗಿಯರು ಕೆಳಗಿನದ್ದು ಕಟ್ ಮಾಡಿಬಿಡ್ತಿವಿ ಹುಷಾರ್ ಎಂದಿದ್ದು, ಪುಂಖಾನು ಪುಂಖವಾಗಿ ಬಾಲಕನ ಬೈಗುಳ ತಿಂದಿದ್ದು ಎಲ್ಲವೂ ಅಮಾನವೀಯವಾಗಿತ್ತು. ಈ ಪ್ರಕರಣವನ್ನು ಪತ್ರಕರ್ತ ಮೌನೇಶ್ ವಿಶ್ವಕರ್ಮ ಹೊರಗೆಳೆದು ತಂದಿದ್ದರು. ಈಗ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇದಕ್ಕೆ ಸಂಬಂಧಿಸಿ ಸುವರ್ಣವಾಹಿನಿಗೆ ನೋಟಿಸ್ ಜಾರಿ ಮಾಡಿದೆ.

    ಸ್ಥಳೀಯ ಪತ್ರಿಕೆ, ಬ್ಲಾಗ್, ಫೇಸ್ ಬುಕ್ ನಲ್ಲಿ 'ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್" ರಿಯಾಲಿಟಿ ಶೋದಲ್ಲಿ ಪುಟ್ಟ ಬಾಲಕನಿಗೆ ಹಿಂಸೆ ಕುರಿತ ವರದಿ ಪ್ರಕಟವಾಗಿ ಕೆಲ ದಿನಗಳಲ್ಲೇ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪ್ರತಿಕ್ರಿಯೆ ನೀಡಿರುವುದು ಉತ್ತಮ ಬೆಳವಣಿಗೆ. ತಮಾಷೆಗಾಗಿ ಕೂಡಾ ಮಕ್ಕಳನ್ನು ಮಾನಸಿಕವಾಗಿ ಅಥವಾ ದೈಹಿಕವಾಗಿ ಹಿಂಸಿಸುವಂತಿಲ್ಲ. ಅದರಲ್ಲೂ ಲಕ್ಷಾಂತರ ಮಂದಿ ನೋಡುವ ರಿಯಾಲಿಟಿ ಶೋನಲ್ಲಿ ಈ ರೀತಿ ತೋರಿಸಿ ಯಾವ ಸಂಸ್ಕೃತಿ ಬೆಳೆಸುತ್ತಾರೆ ಎಂದು ಆಯೋಗದ ಸದಸ್ಯ ವಾಸುದೇವ ಶರ್ಮಾ ಪ್ರಶ್ನಿಸಿದ್ದಾರೆ.

    ರಿಯಾಲಿಟಿ ಶೋ ಚಿತ್ರೀಕರಣವಾಗುತ್ತಿರುವ ಬಾಗಲ ಕೋಟೆ ಜಿಲ್ಲೆಯ ಕೆರಕಲ್ ಮಟ್ಟಿ ಗ್ರಾಮ ಪಂಚಾಯತಿ, ಮಕ್ಕಳ ಕಲ್ಯಾಣ ಸಮಿತಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಬಾಲಕನಿಗೆ ಚಿತ್ರಹಿಂಸೆ ನೀಡಿರುವ ಬಗ್ಗೆ ಸ್ಪಷ್ಟನೆಯನ್ನು ಕೋರಲಾಗಿದೆ. ಬಾಲಕನ ಬಗ್ಗೆ ಮಾಹಿತಿ ಸಂಗ್ರಹಿಸಿದ ನಂತರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಈ ಬಗ್ಗೆ ತುರ್ತು ಚರ್ಚೆ ನಡೆಸಿ, ಮುಂದಿನ ಕ್ರಮ ಜರಗಿಸುವುದಾಗಿ ವಾಸುದೇವ ಶರ್ಮಾ ಹೇಳಿದ್ದಾರೆ.

    English summary
    Karnataka Children Rights Commission has issued a notice to Kannada Reality Show Pyate Hudgeer Halli Lifu Season 2 crew. The reality show has in human and dirty scenes which can harm children mind said commission. Suvarna channel is yet to reply to the notice.
    Thursday, March 17, 2011, 14:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X