ಸಿನಿಮಾ ಸುದ್ದಿಗಳ ಈ ಟಿವಿ ಕನ್ನಡ ಕಾರ್ಯಕ್ರಮ

ಹೊಸ ಕನ್ನಡ ಚಿತ್ರಗಳ ಕುರಿತು ಬೆಳಕು ಚೆಲ್ಲುವ 'ಟೇಕ್ -2' ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9.05ರಿಂದ 10ರವರೆಗೆ ಪ್ರಸಾರವಾಗಲಿದೆ. ಕಾರ್ಯಕ್ರಮ ಒಟ್ಟು ಐದು ವಿಭಾಗಗಳನ್ನು ಒಳಗೊಂಡಿದೆ. ಪ್ರತಿನಿತ್ಯ ಗಾಂಧಿನಗರದ ಚಟುವಟಿಕೆಗಳ ಬಗ್ಗೆ 'ಗಾಂಧಿನಗರದ ಸುದ್ದಿ', ಬಿಡುಗಡೆಗೆ ಸಿದ್ಧವಿರುವ ಹಾಗೂ ಬಿಡುಗಡೆ ಹೊಂದಿರುವ ಹೊಸ ಚಿತ್ರಗಳ ಮಾಹಿತಿಯ 'ಸಿನಿಮಾ ಥಿಯೇಟರ್', ಕನ್ನಡ ಚಿತ್ರರಂಗದ ಹೊಸ ಪ್ರತಿಭೆಗಳನ್ನು ಪರಿಚಯಿಸುವ 'ನ್ಯೂ ಫೇಸ್', ಹೊಸ ಹಾಡುಗಳ 'ಬೊಂಬಾಟ್ ಐದು ಹಾಡುಗಳು' ಹಾಗೂ ಹೊಸ ಚಿತ್ರಗಳ 'ಫಿಲ್ಮ್ ಸ್ಕೋಪ್' ಕಾರ್ಯಕ್ರಮಗಳನ್ನು ಒಳಗೊಂಡಿದೆ.
ಈಗಾಗಲೇ ನವ ನಟ ನಟಿಯರಾದ ಮೇಘನಾ, ಅನೂಷ, ಮೌನಿಷ, ಅಜಿತ್, ಶ್ರವಂತ್ ಮೊದಲಾದವರ ಪರಿಚಯ ಮಾಡಲಾಗಿದೆ. ಇತ್ತೀಚೆಗೆ ತೆರೆಕಂಡ ಹಿಟ್ ಫ್ಲಾಪ್ ಚಿತ್ರಗಳ ಬಗ್ಗೆ ಸಹ ಮಾಹಿತಿ ನೀಡಲಾಗುತ್ತಿದೆ . ಹಿರಿಯ ನಿರ್ಮಾಪಕ, ನಿರ್ದೇಶಕರ, ನಟ, ನಟಿಯರ ಚಿತ್ರರಂಗದ ಅನುಭವಗಳನ್ನು ಪ್ರಸಾರ ಮಾಡಲಾಗುತ್ತಿದೆ.
(ದಟ್ಸ್ ಕನ್ನಡಚಿತ್ರವಾರ್ತೆ)
ಕನ್ನಡ ಸಿನಿಮಾ kannada movies ಈ ಟಿವಿ ಕನ್ನಡ ee tv kannada gandhinagar ಟೇಕ್ 2 ಕನ್ನಡ ಸಿನಿಮಾ ಸುದ್ದಿ ಸಿನಿ ಸುದ್ದಿ ಗಾಂಧಿ ನಗರ take 2 kannada film news studio roundup new face


Click it and Unblock the Notifications