For Quick Alerts
  ALLOW NOTIFICATIONS  
  For Daily Alerts

  ಅರೆ! ಮೋಹಕ ತಾರೆ ಮಾಧುರಿ ದೀಕ್ಷಿತ್ ಇವರೇನಾ?

  By Rajendra
  |

  ಮೋಹಕ ತಾರೆ ಮಾಧುರಿ ದೀಕ್ಷಿತ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ತಮ್ಮದೇ ಆದಂತಹ ವಿಶಿಷ್ಟ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದ ಮಾಧುರಿ ದೀಕ್ಷಿತ್ ಮಾತೃಭೂಮಿಗೆ ಮರಳಿದ್ದಾರೆ. ಆಕೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ, ಅರೆ! ಇವರೇನಾ ಮಾಧುರು ದೀಕ್ಷಿತ್! ಎಷ್ಟೊಂದು ಬದಲಾಗಿಬಿಟ್ಟಿದ್ದಾರಪ್ಪಾ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ ಆಕೆಯ ಅಭಿಮಾನಿಗಳು.

  ಮಾಧುರಿ ದೀಕ್ಷಿತ್ ಈಗ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಆದರೆ ಆಕೆ ಬಣ್ಣ ಹಚ್ಚಿಕೊಳ್ಳುತ್ತಿರುವುದು ಬೆಳ್ಳಿಪರದೆಗಾಗಿ ಅಲ್ಲ ಕಿರುತೆರೆಗಾಗಿ! ಈ ಮೂಲಕ ಮಾಧುರಿ ತಮ್ಮ ಅಭಿಮಾನಿಗಳಿಗೆ ಇನ್ನೂ ಹತ್ತಿರವಾಗಲಿದ್ದಾರೆ. ಅವರು ನಾಲ್ಕು ತಿಂಗಳ ಕಾಲ ಭಾರತದಲ್ಲೇ ಇರುತ್ತಾರೆ.

  ತಮ್ಮ ಅದ್ಭುತ ನೃತ್ಯ ಕೌಶಲ್ಯದಿಂದ ನಾಟ್ಯರಾಣಿ ಶಾಂತಲೆಯನ್ನು ನೆನಪಿಸಿದವರು ಮಾಧುರಿ ದೀಕ್ಷಿತ್.ಈಗವರು ಡಾನ್ಸ್ ರಿಯಾಲಿಟಿ ಶೋ ನಡೆಸಿಕೊಡುವ ಸಲುವಾಗಿ ಭಾರತಕ್ಕೆ ಆಗಮಿಸಿದ್ದಾರೆ. 'ಝಲಕ್ ದಿಕ್‌ಲಾಜಾ' ಎಂಬ ಡಾನ್ಸ್ ರಿಯಾಲಿಟಿ ಶೋ ನಿರೂಪಿಸಲಿದ್ದಾರೆ ಮಾಧುರಿ.

  ಸೊನಿ ಎಂಟರ್‌ಟೈನ್‌ಮೆಂಟ್ ವಾಹಿನಿಯಲ್ಲಿ ಡಿಸೆಂಬರ್ 13ರಿಂದ'ಝಲಕ್ ದಿಕ್ ಲಾಜಾ' ರಿಯಾಲಿಟಿ ಶೋ ಪ್ರಸಾರವಾಗಲಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ 'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮ ಮುಗಿದ ಕೂಡಲೆ ಮಾಧುರಿ ಕಾರ್ಯಕ್ರಮ ಆರಂಭವಾಗಲಿದೆ.

  "ನಾನು ಮತ್ತು ನನ್ನ ಮಕ್ಕಳು ಮುಂಬೈಗೆ ಬರಲು ತುಡಿಯುತ್ತಿದ್ದೆವು. ಹಳೆಯ ಗೆಳೆಯರು ಹಾಗೂ ನನ್ನ ಕುಟುಂಬದವರೊಂದಿಗೆ ಮುಂಬೈನಲ್ಲಿ ಕಳೆಯುವ ಅವಕಾಶ ಸಿಕ್ಕಿದ್ದಕ್ಕೆ ಅತೀವ ಸಂತಸವಾಗಿದೆ " ಎಂದಿದ್ದಾರೆ ಮಾಧುರಿ ದೀಕ್ಷಿತ್. ಆಕೆಯ ಮುಖಚಹರೆ ಬದಲಾಗಿದ್ದರೂ ಮೋಹಕ ನಗೆಯಲ್ಲಿನ ತಾಜಾತನ ಮಾತ್ರ ಹಾಗೆಯೇ ಇದೆ.

  English summary
  Bollywood"s favorite dancing queen, Madhuri Dixit is back in business! She judge a dance reality show "Jhalak Dikhla Ja" on Sony TV.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X