»   » ಮುರ್ಡೋಕ್ ತೆಕ್ಕೆಗೆ ಎನ್ ಡಿಟಿವಿ ಇಮ್ಯಾಜಿನ್

ಮುರ್ಡೋಕ್ ತೆಕ್ಕೆಗೆ ಎನ್ ಡಿಟಿವಿ ಇಮ್ಯಾಜಿನ್

Posted By:
Subscribe to Filmibeat Kannada
Time Warner board approves acquisition of NDTV Imagine
ಮುಂಬೈ ಡಿ 18 : ಮಾಧ್ಯಮ ದೊರೆ ರುಪರ್ಟ್ ಮುರ್ಡೋಕ್ ನೇತೃತ್ವದ ಟೈಮ್ ವಾರ್ನರ್ ಕಂಪೆನಿ, ಪ್ರಣವ್ ರಾಯ್ ನೇತೃತ್ವದ ಎನ್ ಡಿ ಟಿ ವಿ ಮನರಂಜನಾ ಚಾನಲ್ ಎನ್ ಡಿಟಿವಿ ಇಮ್ಯಾಜಿನ್ ನನ್ನು ಖರೀದಿಸಲಿದೆ. ಈ ಚಾನಲ್ ಅನ್ನು 592 ಕೋಟಿ ರೂಪಾಯಿಗಳಿಗೆ ಖರೀದಿಸಲು ಟೈಮ್ ವಾರ್ನರ್ ಕಂಪೆನಿ ಆಡಳಿತ ಮಂಡಳಿ ಸಮ್ಮತಿಸಿದೆ.

ಇಮ್ಯಾಜಿನ್ ಚಾನಲ್ ಏಷಿಯಾ ಫೆಸಿಫಿಕ್ ವಲಯದ ಚಟುವಟಿಕೆಗಳ ಪ್ರಮುಖ ಭಾಗವಾಗಿ ಪರಿವರ್ತನೆಯಾಗಲಿದೆ. ಭಾರತ ನಮ್ಮ ಹೂಡಿಕೆಯ ಆದ್ಯತೆಯ ತಾಣವಾಗಿದ್ದು, ದೀರ್ಘಾವಧಿಯಲ್ಲಿ ಕಂಪೆನಿ ಇಲ್ಲಿ ಹೂಡಿಕೆ ನಡೆಸಲಿದೆ ಎಂದು ಟರ್ನರ್ ಬ್ರಾಡ್ಕಾಸ್ಟಿಂಗ್ ಸಿಸ್ಟಮ್ ಏಷಿಯಾ ಫೆಸಿಫಿಕ್ ಅಧ್ಯಕ್ಷ ಸ್ಟೀವ್ ಮಾರ್ಕೋಪೋಟೋ ಹೇಳಿಕೆ ನೀಡಿದ್ದಾರೆ.

ಟರ್ನರ್ ಸಂಸ್ಥೆ ಇಮ್ಯಾಜಿನ್ ನಲ್ಲಿ ಶೇ. 92 ರಷ್ಟು ಷೇರುಗಳನ್ನು ಹೊಂದಲಿದೆ. ಸದ್ಯಕ್ಕೆ ಶೇ. 8 ಭಾಗ ಹಾಲಿ ಆಡಳಿತ ಮಂಡಳಿಯಲ್ಲಿರಲಿದೆ. ಇಮ್ಯಾಜಿನ್ ಚಾನಲ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಸಮೀರ್ ನಾಯರ್ ಮುಂದುವರಿಯಲಿದ್ದಾರೆ. ಈ ಡೀಲಿನಿಂದ ಎನ್ ಡಿಟಿವಿ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗುವ ನಿರೀಕ್ಷೆಯಿದೆ. ಕಳೆದ ಸೆಪ್ಟೆಂಬರ್ ಗೆ ಮುಕ್ತಾಯವಾದ ತ್ರೈಮಾಸಿಕದಲ್ಲಿ ಕಂಪೆನಿಗೆ 86 ಕೋಟಿ ನಷ್ಟವಾಗಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada