Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲವ್ಲಿ ಸ್ಟಾರ್ ಪ್ರೇಮ್ ಗೆ ಪ್ರಪೋಸ್ ಮಾಡಿದ ಕನ್ನಡ 'ಹೀರೋಯಿನ್' ಯಾರು.?

ಲವ್ಲಿ ಸ್ಟಾರ್ ಪ್ರೇಮ್... ಹೆಸರಿಗೆ ತಕ್ಕ ಹಾಗೆ ಪ್ರೇಮ್ ಸಿಕ್ಕಾಪಟ್ಟೆ ಲವ್ಲಿ. ವಯಸ್ಸು ನಲವತ್ತು ದಾಟಿದ್ರೂ, ಪ್ರೇಮ್ ಇನ್ನೂ ಚಾಕಲೇಟ್ ಬಾಯ್ ಅಂತೆ ಕಂಗೊಳಿಸುತ್ತಾರೆ. ಇದೇ ಕಾರಣಕ್ಕೆ ಪ್ರೇಮ್ ಅಂದ್ರೆ ಲೆಕ್ಕವಿಲ್ಲದಷ್ಟು ಹುಡುಗಿಯರಿಗೆ ಅಚ್ಚುಮೆಚ್ಚು.
ಹರೆಯದ ಹುಡುಗಿಯರ ಡ್ರೀಮ್ ಬಾಯ್ ಆಗಿರುವ ಪ್ರೇಮ್ ಗೆ ಮದುವೆ ಆಗಿ ಅದಾಗಲೇ 17 ವರ್ಷಗಳು ತುಂಬಿದೆ ಅಂದ್ರೆ ನಂಬುವುದಕ್ಕೆ ಅಸಾಧ್ಯ. ಆದ್ರೆ ಅದೇ ಸತ್ಯ.
ಈ ಸತ್ಯವನ್ನ ತಿಳಿದುಕೊಳ್ಳದ ಕೆಲ ಹೀರೋಯಿನ್ ಗಳು ಪ್ರೇಮ್ ಗೆ ಪ್ರಪೋಸ್ ಮಾಡಿದ್ರಂತೆ. ಆಗ ಪ್ರೇಮ್ ಏನ್ಮಾಡಿದ್ರು.? ಈ ಸತ್ಯವನ್ನ ಸ್ವತಃ 'ನೆನಪಿರಲಿ' ಪ್ರೇಮ್ ಈಗ ಬಾಯ್ಬಿಟ್ಟಿದ್ದಾರೆ. ಮುಂದೆ ಓದಿರಿ...

'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಪ್ರೇಮ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಪ್ರೇಮ್ ಹಾಗೂ ರವಿಶಂಕರ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಮೊದಲ ಸೆಗ್ಮೆಂಟ್ (ಸತ್ಯನಾ.. ಧೈರ್ಯನಾ..) ನಲ್ಲಿ 'ಸತ್ಯ'ವನ್ನ ಹೇಳಲು ಪ್ರೇಮ್ ಆಯ್ಕೆ ಮಾಡಿಕೊಂಡರು.
ಎರಡನೇ ಸಲ ಮದುವೆಯಾದ ಲವ್ಲಿ ಸ್ಟಾರ್ ಪ್ರೇಮ್

ಶಿವಣ್ಣ ಕೇಳಿದ ಪ್ರಶ್ನೆ ಏನು.?
''ನೀವು ಕೆಲಸ ಮಾಡಿರುವ ಹೀರೋಯಿನ್ ಗಳ ಪೈಕಿ ನಿಮಗೆ ಯಾರಾದರೂ ಪ್ರಪೋಸ್ ಮಾಡಿದ್ದಾರಾ.?'' ಎಂದು ಪ್ರೇಮ್ ಗೆ ಶಿವಣ್ಣ ಕೇಳಿದರು.
ಲವ್ಲಿಸ್ಟಾರ್ ಪ್ರೇಮ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ

ಪ್ರೇಮ್ ಕೊಟ್ಟ ಉತ್ತರ ಏನು.?
''ತುಂಬಾ ಜನ ಪ್ರಪೋಸ್ ಮಾಡಿದ್ದಾರೆ. ಹೆಸರು ಹೇಳುವುದಕ್ಕೆ ಆಗಲ್ಲ. ಇಬ್ಬರು ಕನ್ನಡ ಹೀರೋಯಿನ್ ಗಳು ಹಾಗೂ ನಾಲ್ಕು ಜನ ಬಾಂಬೆ ಹೀರೋಯಿನ್ ಗಳು ಪ್ರಪೋಸ್ ಮಾಡಿದ್ದರು'' ಎಂದು ಇದೇ ಶೋನಲ್ಲಿ ಪ್ರೇಮ್ ಬಾಯ್ಬಿಟ್ಟರು.

ಆಗ ಪ್ರೇಮ್ ತಪ್ಪಿಸಿಕೊಂಡಿದ್ದು ಹೇಗೆ.?
''ಪ್ರಪೋಸ್ ಮಾಡಿದ್ಮೇಲೆ ಹೇಗೆ ತಪ್ಪಿಸಿಕೊಂಡ್ರಿ.?'' ಎಂದು ಶಿವಣ್ಣ ಕೇಳಿದಾಗ, ''ನನಗೆ ಮದುವೆ ಆಗಿ ಹೆಂಡತಿ ಇದ್ದಾಳೆ. ಅವಳನ್ನೇ ನಾನು ತುಂಬಾ ಪ್ರೀತಿಸೋದು. ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ನನಗೆ ಮದುವೆ ಆಗಿ ಮಗು ಇತ್ತು ಅಂತ ನಾನು ನಿಜ ಹೇಳ್ದೆ'' ಎಂದರು ಪ್ರೇಮ್.

'ಆ' ಹೀರೋಯಿನ್ ಗಳು ಯಾರಿರಬಹುದು.?
ಪ್ರೇಮ್ ಜೊತೆಗೆ ವಿದ್ಯಾ ವೆಂಕಟೇಶ್, ವರ್ಷ, ರಮ್ಯಾ, ರಮಣಿತು ಚೌಧರಿ, ರೇಖಾ ವೇದವ್ಯಾಸ್, ಅಂಜಲಿ, ಅನುರಾಧಾ ಮೆಹ್ತ, ಮಲ್ಲಿಕಾ ಕಪೂರ್, ಮೇಘನಾ ಗಾಂವ್ಕರ್ ಸೇರಿದಂತೆ ಹಲವು ನಟಿಯರು ತೆರೆ ಹಂಚಿಕೊಂಡಿದ್ದಾರೆ. ಇವರುಗಳ ಪೈಕಿ ಪ್ರೇಮ್ ಗೆ ಪ್ರಪೋಸ್ ಮಾಡಿದ್ದು ಯಾರಿರಬಹುದು.? ನಮಗಂತೂ ಗೊತ್ತಿಲ್ಲ. ಹೆಸರು ಹೇಳಲು ಪ್ರೇಮ್ ಕೂಡ ಇಚ್ಛಿಸಲಿಲ್ಲ.