Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಂಗನಾಥ್ ಇಲ್ಲದೆ ಪಿಚ್ ಅನಿಸುತ್ತಿದೆ ಸುವರ್ಣ!
ರಂಗನಾಥ್ ಕೊರತೆಯನ್ನು ಹಮೀದ್ ಪಾಳ್ಯ ಹಾಗೂ ಗೌರೀಶ್ ಅಕ್ಕಿ ಅಚ್ಚುಕಟ್ಟಾಗಿ ತುಂಬುತ್ತಿರುವುದು ಎದ್ದು ಕಾಣುತ್ತದೆ. ಆದರೂ ಎಲ್ಲೋ ಒಂದು ಕಡೆ ರಂಗನಾಥ್ ಗೈರುಹಾಜರಿ ಎದ್ದು ಕಾಣುತ್ತಿದೆ. ಅವರಿದ್ದರೆ ಚೆನ್ನಾಗಿತ್ತು ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ಉಳಿದ ವಾಹಿನಿಗಳ ಪರಿಸ್ಥಿತಿಯೂ ಸುವರ್ಣ ವಾಹಿನಿಗಿಂತಲೂ ಭಿನ್ನವಾಗಿಲ್ಲ. ಅಲ್ಲೂ ಸಂಪಾದಕರು ಹಾಗೂ ಪತ್ರಕರ್ತರ ನಡುವೆ ಸೂಕ್ತ ಸಮನ್ವಯದ ಕೊರತೆ ಕಾಡುತ್ತಿದೆ.
ಘಟಾನುಘಟಿ ರಾಜಕಾರಣಿಗಳೊಂದಿಗೆ ರಂಗನಾಥ್ ಆತ್ಮವಿಶ್ವಾಸದಿಂದ ಚರ್ಚೆ ನಡೆಸುತ್ತಿದ್ದರು. ರಾಜಕಾರಣಿಗಳಿಂದ ಅಗತ್ಯ ಉತ್ತರಗಳನ್ನು ತೆಗೆಸುವಲ್ಲಿ ಅವರ ವೃತಿಪರತೆ, ಜಾಣ್ಮೆ , ಚಾಕಚಕ್ಯತೆ ಎದ್ದು ಕಾಣುತ್ತಿತ್ತು. ಅದರಲ್ಲೂ ಸಾಂವಿಧಾನಿಕ ಬಿಕ್ಕಟ್ಟು, ರಾಜಕೀಯ ಬಿಕ್ಕಟ್ಟಿನಂತಹ ಪರಿಸ್ಥಿತಿಯಲ್ಲಿ ರಂಗನಾಥ್ ಇಲ್ಲದೆ ಇದ್ದದ್ದು ಸುವರ್ಣ ವಾಹಿನಿಗೆ ದೊಡ್ಡ ನಷ್ಟ ಎಂದೇ ಹೇಳಬೇಕು.
ಸುದ್ದಿಯ ವಿಶ್ಲೇಷಣೆ, ಖಚಿತ ಮಾಹಿತಿ ನಿರೀಕ್ಷಿಸುತ್ತಿರುವ ಕನ್ನಡ ವೀಕ್ಷಕರೂ ಸಿಎನ್‌ಎನ್ ಐಬಿಎನ್, ಎನ್‌ಡಿಟಿವಿ, ಟೈಮ್ಸ್ ನೌ ಗಳನ್ನು ನೋಡಿ ತಮ್ಮ ಸುದ್ದಿ ದಾಹವನ್ನು ನೀಗಿಸಿಕೊಳ್ಳುವ ಪರಿಸ್ಥಿತಿ ತಲೆದೋರಿದೆ. ರಂಗನಾಥ್ ತರಹದ ನುರಿತ ಕನ್ನಡ ಪತ್ರಕರ್ತರು ಯಾವುದಾದರೂ ಚಾನಲ್‌ಗೆ ಶೀಘ್ರ ಬರಲಿ ಎಂದು ಆಶಿಸುತ್ತೇನೆ. ಅಂದಹಾಗೆ ರಂಗನಾಥ್ ಅವರು ಈಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬ ವಿಷಯವಾಗಿ ತಿಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.