twitter
    For Quick Alerts
    ALLOW NOTIFICATIONS  
    For Daily Alerts

    ಜನಶ್ರೀಯಿಂದ 'ಬೆಂಗಳೂರು-ಇದು ನಮ್ಮ ಊರು'

    By Prasad
    |

    ಬೆಂಗಳೂರು, ಮಹಾನಗರ ಪರಂಪರೆಯ ಬೇರಿನಲ್ಲಿ ಮಾಹಿತಿ ತಂತ್ರಜ್ಞಾನ ಎಂಬ ಹೊಸ ಚಿಗುರನ್ನು ಬೆಳೆಸಿಕೊಂಡ ಊರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಮಗೆ ಗೊತ್ತಿಲ್ಲದ ಅದೆಷ್ಟೋ ವೈಶಿಷ್ಟ್ಯಗಳಿವೆ. ಅವುಗಳನ್ನು ಜನರಿಗೆ ಪರಿಚಯಿಸುವ "ಬೆಂಗಳೂರು-ಇದು ನಮ್ಮ ಊರು" ಎಂಬ ವಿಶಿಷ್ಟ ಕಾರ್ಯಕ್ರಮವನ್ನು "ಜನಶ್ರೀ" ಕನ್ನಡ ಸುದ್ದಿ ವಾಹಿನಿ ಆರಂಭಿಸಲಿದೆ. ಇದು ಹೊಸ ವರ್ಷಕ್ಕೆ ವೀಕ್ಷಕರಿಗೆ ಹೊಚ್ಚ ಹೊಸ ಕಾರ್ಯಕ್ರಮ.

    ಬೆಂಗಳೂರಿನ ಇತಿಹಾಸ, ಜನಜೀವನ, ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಇತಿಹಾಸಕಾರ, ಚಿಂತಕ ಸುರೇಶ್ ಮೂನ ಪ್ರಸ್ತುತ ಪಡಿಸುವ ಈ ಕಾರ್ಯಕ್ರಮದಲ್ಲಿ ಆಯಾ ಸ್ಥಳದ ಇತಿಹಾಸ, ಅಲ್ಲಿನ ಸ್ಮಾರಕಗಳು, ತಿಂಡಿ, ತಿನಿಸಿನ ವೈವಿಧ್ಯ, ಅಲ್ಲಿ ನೆಲೆಸಿರುವ ಪ್ರಸಿದ್ಧ ವ್ಯಕ್ತಿಗಳ ಪರಿಚಯ ಸಹಿತ ಹಲವಾರು ಮಾಹಿತಿಗಳು ಇರುತ್ತವೆ. ಜತೆಗೆ ಜನರನ್ನು ತೊಡಗಿಸಿಕೊಳ್ಳುವಂತಹ ರೀತಿಯಲ್ಲಿ ಪ್ರಶ್ನೋತ್ತರಗಳು ಇರಲಿವೆ.

    ನಗರದ ಬಗೆಗೆ ಅಭಿಮಾನ ಇರುವವರು ನಗರದ ಪರಂಪರೆ, ಸಂಸ್ಕೃತಿ ರಕ್ಷಣೆಗೆ ಮುಂದಾಗುತ್ತಾರೆ. ಬೆಂಗಳೂರಿನಲ್ಲಿ ಇಂದು ಮೂಲ ನಿವಾಸಿಗಳಿಗಿಂತ ಹೊರಗಿನಿಂದ ಬಂದು ನೆಲೆಸಿದವರೇ ಅಧಿಕ ಮಂದಿ ಇದ್ದಾರೆ. ಬೆಂಗಳೂರಿನ ಬಗ್ಗೆ ತಿಳಿಯದ ಅದೆಷ್ಟೋ ಸಂಗತಿಗಳು ಇದ್ದು ಅದನ್ನು ಕಾರ್ಯಕ್ರಮ ಸರಣಿಯ ಮೂಲಕ ಪರಿಚಯಿಸುವ ಪ್ರಯತ್ನವೇ ಬೆಂಗಳೂರು ಇದು ನಮ್ಮ ಊರು ಕಾರ್ಯಕ್ರಮ ಎನ್ನುತ್ತಾರೆ ಜನಶ್ರೀ ಸುದ್ದಿವಾಹಿನಿ ಮುಖ್ಯಸ್ಥ ಅನಂತ್ ಚಿನಿವಾರ್.

    ಹಿಂದಿನ ಮತ್ತು ಇಂದಿನ ಬೆಂಗಳೂರನ್ನು ಜನರಿಗೆ ಪರಿಚಯಿಸುತ್ತಲೇ, ನಾಳಿನ ಬೆಂಗಳೂರು ಹೇಗಿರುತ್ತದೆ ಮತ್ತು ಹೇಗಿರಬೇಕು ಎಂಬುದನ್ನು ಜನರಿಗೆ ಅದರಲ್ಲೂ ಯುವಜನತೆಗೆ ಮನವರಿಕೆ ಮಾಡಿಕೊಡುವುದು ಕಾರ್ಯಕ್ರಮದ ಉದ್ದೇಶ ಮತ್ತು ಮೂಲ ಬೆಂಗಳೂರಿಗರು ಮತ್ತು ಇಲ್ಲಿಗೆ ವಲಸೆ ಬಂದು ಬೆಂಗಳೂರಿಗರಾಗಿರುವವರು ಎಲ್ಲರೂ ಈ ಊರನ್ನು ಪ್ರೀತಿಸುವ ಹಾಗಾಗಬೇಕು. ಈ ಊರಿನ ಬಗ್ಗೆ ಕಾಳಜಿ ತೋರಿಸುವ ಹಾಗಾಗಬೇಕು ಎನ್ನುವುದೂ ಕೂಡ ಕಾರ್ಯಕ್ರಮಗಳ ಆಶಯಗಳಲ್ಲೊಂದು.

    English summary
    Janashree Kannada channel is presenting a new program 'Bangalore - It's our city' from January 1, 2012. This program will showcase the Bangalore culture, history, people, places, eateries.
    Tuesday, December 27, 2011, 19:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X