»   » ಕೋಟ್ಯಾಧಿಪತಿಯಲ್ಲಿ ರಮ್ಯಾಗೆ ಕೈಕೊಟ್ಟ ರವಾ ಇಡ್ಲಿ

ಕೋಟ್ಯಾಧಿಪತಿಯಲ್ಲಿ ರಮ್ಯಾಗೆ ಕೈಕೊಟ್ಟ ರವಾ ಇಡ್ಲಿ

Posted By:
Subscribe to Filmibeat Kannada
Actress Ramya Wins Rs.3,20,000
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ 'ಕನ್ನಡದ ಕೋಟ್ಯಾಧಿಪತಿ' ಗೇಮ್ ಶೋನಲ್ಲಿ ಗೋಲ್ಡನ್ ಗರ್ಲ್ ರಮ್ಯಾ ರು.3,20,000 (ಮೂರು ಲಕ್ಷ ಇಪ್ಪತ್ತು ಸಾವಿರ ರುಪಾಯಿ) ಗೆದ್ದಿದ್ದಾರೆ. ಅವರು ರು.6,40,000 ಗೆಲ್ಲುವ ಅವಕಾಶವನ್ನು ಜಸ್ಟ್ ಮಿಸ್ ಮಾಡಿಕೊಂಡರು.

ರಮ್ಯಾ ಸುಲಭವಾಗಿ ಗೆಲ್ಲಬಹುದಾಗಿದ್ದ ಆರು ಲಕ್ಷ ನಲವತ್ತು ಸಾವಿರ ರುಪಾಯಿಗಳನ್ನು ಅಷ್ಟೇ ಸುಲಭವಾಗಿ ಕಳೆದುಕೊಂಡರು. ರಮ್ಯಾಗೆ ಕೈಕೊಟ್ಟಿದ್ದು ರವಾ ಇಡ್ಲಿ ಎಂದರೆ ಅಚ್ಚರಿಯಾಗುತ್ತದೆ. ಅವರಿಗೆ ಕೇಳಿದ 11ನೇ ಪ್ರಶ್ನೆ ಹೀಗಿತ್ತು. "ಮಾವಳ್ಳಿ ಟಿಫನ್ ರೂಮ್ (ಎಂಟಿಆರ್) ಪ್ರಕಾರ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಇವರು ಕಂಡುಹಿಡಿದ ತಿಂಡಿ ಯಾವುದು?". [ರವಾ ಇಡ್ಲಿ ತಯಾರಿಸುವ ವಿಧಾನ]

ಆಯ್ಕೆಗಳು ಹೀಗಿದ್ದವು A.ಮಸಾಲೆ ದೋಸೆ, B.ಬಿಸಿಬೇಳೆ ಬಾತ್, C.ಚಕ್ಕುಲಿ, D.ರವಾ ಇಡ್ಲಿ. ತುಂಬಾ ಹೊತ್ತು ತಲೆಕೆಡಿಸಿಕೊಂಡ ರಮ್ಯಾ ಒಮ್ಮೆ 'ಚಕ್ಕುಲಿ' ಎಂದು ಹೇಳಿದರು. ಯೋಚಿಸಿ ಉತ್ತರ ಕೊಡಿ, ಇಲ್ಲಾ ಲೈಫ್ ಲೈನ್ ಬಳಸಿಕೊಳ್ಳಿ ಎಂದು ಪುನೀತ್ ಸಲಹೆ ಕೊಟ್ಟರು.

ಕಡೆಗೆ ರಮ್ಯಾ ಉತ್ತರಕ್ಕಾಗಿ ಅವರ ತಂದೆಗೆ ಕರೆ ಮಾಡಿದರು. ಅವರ ತಂದೆ ಕೊಟ್ಟ ಉತ್ತರ ಆಪ್ಷನ್ B, ಬಿಸಿಬೇಳೆ ಬಾತ್. ಆದರೆ ರಮ್ಯಾ ಲಾಕ್ ಮಾಡಿದ್ದು ಆಪ್ಷನ್ A. ಮಸಾಲೆ ದೋಸೆ. ಜೈ ಬಜರಂಗಬಲಿ ಗುರುಗಳೆ ಎಂದು ಪುನೀತ್ ಲಾಕ್ ಮಾಡಿದರು. ರಮ್ಯಾ ಕೊಟ್ಟ ಉತ್ತರ ತಪ್ಪಾಗಿತ್ತು. ಕಂಪ್ಯೂಟರ್ ಗುರುಗಳು ಕೊಟ್ಟ ಉತ್ತರ ಆಪ್ಷನ್ D.ರವಾ ಇಡ್ಲಿ.

ಒಂದು ವೇಳೆ ರಮ್ಯಾ ಉತ್ತರ ರವಾ ಇಡ್ಲಿಯಾಗಿದ್ದರೆ ಅವರು ರು.6,40,000ಗಳನ್ನು ಗೆಲ್ಲಬಹುದಾಗಿತ್ತು. ಒಟ್ಟಿನಲ್ಲಿ ರಮ್ಯಾಗೆ ಬರೆದಿದ್ದದ್ದು ರು.3,20,000 ಅಷ್ಟೇ ಅನ್ನಿಸುತ್ತದೆ. ಅಷ್ಟೊತ್ತಿಗೆ ಅಂದಿನ ವೇಳೆಯೂ ಮುಗಿದಿತ್ತು, ರಮ್ಯಾ ಜೊತೆ ಆಡಿತ ಆಟವೂ ಮುಗಿದಿತ್ತು. ಈ ಗೇಮ್ ಶೋನಲ್ಲಿ ಒಟ್ಟು 15 ಪ್ರಶ್ನೆಗಳಿಗೆ ಉತ್ತರಿಸಿ ಒಂದು ಕೋಟಿ ಗೆಲ್ಲಬಹುದಾಗಿತ್ತು. ರಮ್ಯಾ ಸರಿಯಾಗಿ ಉತ್ತರಿಸಿದ್ದು ಕೇವಲ 10 ಪ್ರಶ್ನೆಗಳಿಗೆ. (ಒನ್‌ಇಂಡಿಯಾ ಕನ್ನಡ)

English summary
Kannada actress Golden Girl Ramya wins Rs. 3,20,000 on Asianet Suvarna channels game show Kannadada Kotyadhipati. She is the first celebrity guest on Puneet Rajkumar’s quiz show aired on March 29 at 8:00 PM.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X