For Quick Alerts
  ALLOW NOTIFICATIONS  
  For Daily Alerts

  ಬೇವು ಬೆಲ್ಲದ ಜೊತೆಗೆ ಕಿರುತೆರೆಯಲಿ ಹಿಟ್ ಚಿತ್ರಗಳ ಸಂಭ್ರಮ

  By Rajendra
  |

  ಈ ಬಾರಿಯ ಯುಗಾದಿ ಹಬ್ಬಕ್ಕೆ ಬೇವು ಬೆಲ್ಲದ ಜೊತೆಗೆ ಕನ್ನಡದ ಹಿಟ್ ಚಿತ್ರಗಳನ್ನು ಕಿರುತೆರೆಯಲ್ಲಿ ಸವಿಯಬಹುದು. ಏಪ್ರಿಲ್ 4ರಂದು ಯಾವಾವ ಚಾನಲ್‌ನಲ್ಲಿ ಯಾವ ಸಿನಿಮಾ ಪ್ರಸಾರವಾಗಲಿದೆ ಎಂಬ ಕಿರು ಮಾಹಿತಿ ಇಲ್ಲಿದೆ. ಮೂರು ಹಿಟ್ ಚಿತ್ರಗಳು ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಭಾಗ್ಯ ಕಾಣುತ್ತಿವೆ. ಗಜ, ಕಿಚ್ಚಹುಚ್ಚ ಮತ್ತು ಮಳೆಯಲಿ ಜೊತೆಯಲಿ ಚಿತ್ರಗಳು ಹಬ್ಬದ ಸಂಭ್ರಮವನ್ನು ಇಮ್ಮಡಿಸಲಿವೆ.

  1. ಗಜ: ದರ್ಶನ್ ತೂಗುದೀಪ್, ನವ್ಯಾ ನಾಯರ್ ಮತ್ತು ದೇವರಾಜ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಕಸ್ತೂರಿ ವಾಹಿನಿಯಲ್ಲಿ ಮಧ್ಯಾಹ್ನ 2.30 ಕ್ಕೆ ಪ್ರಸಾರವಾಗಲಿದೆ. ಜನವರಿ 2008 ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು. ಚಿತ್ರವನ್ನು ಕೆ ಮಾದೇಶ್ ನಿರ್ದೇಶಿಸಿದ್ದರು. ಹರಿಕೃಷ್ಣ ಸಂಗೀತ ನೀಡಿದ್ದ ಚಿತ್ರ ಹಾಡುಗಳು ಕೂಡ ಜನಪ್ರಿಯಗೊಂಡಿತ್ತು. ಶಂಕರ್ ಮಹಾದೇವನ್ ಹಾಡಿದ್ದ 'ಐತಲಕಡಿ' ಹಾಡು ಈ ಚಿತ್ರದ್ದೆ.

  2 . ಕಿಚ್ಚಹುಚ್ಚ : ಅಕ್ಟೋಬರ್ 2010 ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರದಲ್ಲಿ ಸುದೀಪ್, ರಮ್ಯಾ ಮತ್ತು ಶ್ರೀನಾಥ್ ಮುಖ್ಯ ಭೂಮಿಕೆಯಲ್ಲಿದ್ದರು. ಗುರುದತ್ ನಿರ್ದೇಶನದ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದರು. ಮೂಲ ತಮಿಳು ಚಿತ್ರದ ರಿಮೇಕ್ ಆಗಿದ್ದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣ ಯಶಸ್ಸು ಕಂಡಿತ್ತು. ಸುವರ್ಣ ವಾಹಿನಿಯಲ್ಲಿ ಚಿತ್ರ ಮಧ್ಯಾಹ್ನ 2.30ಕ್ಕೆ ಪ್ರಸಾರವಾಗಲಿದೆ.

  3. ಮಳೆಯಲಿ ಜೊತೆಯಲಿ : ಡಿಸೆಂಬರ್ 2009ರಲ್ಲಿ ಗಣೇಶ್ ಸ್ವಂತ ಬ್ಯಾನರ್ ನಲ್ಲಿ ಮೂಡಿ ಬಂದ ಚಿತ್ರ. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್, ಅಂಜನಾ ಸುಖಾನಿ, ಯುವಿಕಾ ಚೌಧರಿ, ದತ್ತಣ್ಣ, ರಂಗಾಯಣ ರಘು, ಶರಣ್ ಪ್ರಮುಖ ಕಲಾವಿದರು. ಹರಿಕೃಷ್ಣ ಸಂಗೀತ ನೀಡಿದ್ದ ಚಿತ್ರದ ಎರಡು ಹಾಡುಗಳು ಜನಪ್ರಿಯವಾಗಿದ್ದವು. 2009ರ ಹಿಟ್ ಚಿತ್ರದ ಪಟ್ಟಿಗೆ ಸೇರಿದ್ದ ಚಿತ್ರಗಳಲ್ಲಿ ಇದೂ ಒಂದು. ಉದಯ ವಾಹಿನಿಯಲ್ಲಿ ಸಂಜೆ 6ಗಂಟೆ ಚಿತ್ರ ಪ್ರಸಾರ ವಾಗಲಿದೆ.

  English summary
  Kannada tv channels ready to air Kannada hit movies on Ugadi festival. Darshan lead movie Gaja to be air on Kasthuri channel at 2.30 pm. Sudeep film Kichcha Huchcha on Suvarna TV to be telecast at 2.30 pm. Golden Star Ganesh lead movie Maleyali Jotheyali to be hit the small screen on Ugadi at 6pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X