Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಸುಮಲತಾ ಅವರನ್ನೆ ಮದುವೆ ಆಗ್ತೀನಿ' ಎಂದು ಹೇಳಿದ್ರಂತೆ ಪುನೀತ್ ರಾಜ್ ಕುಮಾರ್
ಸುಮಲತಾ ಅಂಬರೀಶ್ ಈಗ ಮಂಡ್ಯ ಸಂಸದೆಯಾಗಿ ಸಂಸತ್ ಪ್ರವೇಶಸಿದ್ದಾರೆ. ನಟಿಯಾಗಿ ಸುಮಲತಾ ಸಾಧನೆ ಅಪಾರ. ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸುಮಲತಾ ಕನ್ನಡ, ತಮಿಳು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಚಿತ್ರಾಭಿಮಾನಿಗಳನ್ನು ರಂಜಿಸಿದ್ದಾರೆ.
ಸುಮಾರು 35 ವರ್ಷಕ್ಕು ಹೆಚ್ಚುಕಾಲ ಚಿತ್ರರಂಗದಲ್ಲಿ ಮಿಂಚುತ್ತಿರುವ ಸುಮಲತಾ ಅವರು ಕಳೆದ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಕುರ್ಚಿಯಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಸುಮಲತಾ ಅವರ ಬಗ್ಗೆ ಗೊತ್ತಿರದ ಒಂದಿಷ್ಟು ಇಂಟ್ರಸ್ಟಿಂಗ್ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಆಗಿನ ಕಾಲಕ್ಕೆ ದೊಡ್ಡ 'ಸ್ಟಾರ್' ಆಗಿದ್ದರು ಸುಮಲತಾ ಅಂಬರೀಶ್ ತಂದೆ
ಸುಮಲತಾ ಅವರಿಗೆ ಮೊದಲು ಪ್ರಪೋಸ್ ಮಾಡಿದ್ದು ಯಾರು ಅಂತ ಕೇಳಿದ್ರೆ ನಿಜಕ್ಕು ಅಚ್ಚರಿ ಪಡುತ್ತೀರಾ. ಇಂದು ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟನಾಗಿ ಮೆರೆಯುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್ ಅವರು ಸುಮಲತಾ ಅವರಿಗೆ ಫಿದಾ ಆಗಿ, ಪ್ರಪೋಸ್ ಮಾಡಿದ ಇಂಟ್ರಸ್ಟಿಂಗ್ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

ಸುಮಲತಾ ಅವರನ್ನು ಮದುವೆ ಆಗ್ತೀನಿ
ಸುಮಲತಾ ಅವರನ್ನು ನೋಡಿ ಪುನೀತ್ ಅವರನ್ನೇ ಮದುವೆ ಮಾಡ್ಕೋತ್ತೀನಿ ಅಂತ ಹೇಳ್ತಿದ್ರಂತೆ. ಪುನೀತ್ ಇನ್ನು ಚಿಕ್ಕವರಾಗಿದ್ರು. ಆಗಲೆ ಸುಮಲತಾ ಅವರ ಮೇಲೆ ಕ್ರಶ್ ಆಗಿದ್ದಂತೆ. ಅಷ್ಟೆಯಲ್ಲ ಮನಗೆ ಹೋಗಿ ಅವರನ್ನೆ ಮದುವೆ ಆಗ್ತೀನಿ ಅಂತ ಹೇಳ್ತಿದ್ರಂತೆ. ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಪುನೀತ್ ಮತ್ತು ಸುಮಲತಾ.
ಸಂಸತ್ತಿನ ಮುಂದೆ ಹೆಮ್ಮೆಯಿಂದ ನಿಂತ ಮಂಡ್ಯ ಸಂಸದೆ ಸುಮಲತಾ

ನಿನ್ನ ನುಡಿಯ ಕೇಳಿ ಬೆರಗಾಗಿ ಮೂಕನಾದೆ
ಈ ಹಾಡಿನ ಕೇಳಿದಾಗ ಪುನೀತ್ ಅವರಿಗೆ ಸುಮಲತಾಗೆ ಪ್ರಪೋಸ್ ಮಾಡಿದ ಸನ್ನಿವೇಶ ನೆನಪಾಗುತ್ತಂತೆ. ಅಲ್ಲದೆ ಪುನೀತ್ ನೋಡಿದಾಗಲೆಲ್ಲ ಅಂಬರೀಶ್ "ನನ್ನ ಮಗನೆ ನೀನು ಅವಾಗಲೆ ನನ್ನ ಹೆಂಡತಿನಾ ಮದುವೆ ಆಗ್ತೀನಿ ಅಂತ ಹೇಳಿದ ನನ್ ಮಗ ನೀನು" ಅಂತ ಯಾವಾಗಲು ರೇಗಿಸುತ್ತಿದ್ದರಂತೆ.

ರವಿಚಂದ್ರ ಸಿನಿಮಾ ಸಮಯದಲ್ಲಿ ಪುನೀತ್ ಚಿಕ್ಕ ಹುಡುಗ
ಸುಮಲತಾ ಕನ್ನಡದ ಮೊದಲ ಸಿನಿಮಾಮ ರವಿಚಂದ್ರ. ಈ ಸಿನಿಮಾ ಸಮಯದಲ್ಲಿ ಪುನೀತ್ ಗೆ ಇನ್ನು ಆರು ವರ್ಷ ಅಂತೆ. ಆ ಸಮಯದಲ್ಲಿ ಸುಮಲತಾ ಅವರಿಗೆ 16 ವರ್ಷ. ಆಗ ಇಬ್ಬರು ಆಟ ಆಡುತ್ತಿದ್ದರಂತೆ. "ಮನೆಗೆ ಹೋಗಿ ನಾನು ಸುಮಲತಾ ಅವರನ್ನೆ ಮದುವೆ ಆಗುವುದೆಂದು ನಿರ್ಧರಿಸಿದ್ದೇನೆ" ಎಂದು ಹೇಳ್ತಿದ್ರಂತೆ
ಅಂಬಿ ನಿಧನದ ವಿಷಯ ಹೇಳುತ್ತಾ 'ವೀಕೆಂಡ್' ಶೋನಲ್ಲಿ ಸುಮಲತಾ ಕಣ್ಣೀರು

ಯಾಕೋ ನನ್ನ ಹೆಂಡತಿಗೆ ಲೈನ್ ಹಾಕ್ತಿದ್ಯ ನೀನು
ಪವರ್ ಸ್ಟಾರ್ ಪ್ರಪೋಸ್ ಮಾಡಿದ್ದ ವಿಚಾರವನ್ನು ಸುಮಲತಾ ಅಂಬರೀಶ್ ಅವರಿಗೆ ಹೇಳಿದ್ದಾಗ ಅಂಬರೀಶ್ ಅವರದ್ದೆ ಶೈಲಿಯಲ್ಲಿ "ಯಾಕೋ ನನ್ನ ಹೆಂಡತಿಗೆ ಲೈನ್ ಹಾಕ್ತಿದ್ದಯಾ" ಎಂದು ಕಾಲೆಳೆಯುತ್ತಿದ್ದರಂತೆ. ಮೊದಲು ಪ್ರಪೊಸ ಮಾಡಿದ್ದು ಪುನೀತ್ ಎಂದು ಹೇಳಿದ್ದಾರೆ. ಇನ್ನು ಇದೊಂದು ತುಂಬಾ ತಮಾಷೆಯ ಸನ್ನಿವೇಶ ಎಂದು ಹೇಳಿ ಅಂದಿನ ದಿನವನ್ನು ನೆನಪಿಸಿಕೊಂಡು ಜೋರಾಗಿ ನಕ್ಕಿದ್ದಾರೆ.