For Quick Alerts
  ALLOW NOTIFICATIONS  
  For Daily Alerts

  ಕಿರುತೆರೆ ಪ್ರೇಕ್ಷಕರಿಗೆ ಮಾನ್ವಿತಾ ಸರ್ಪ್ರೈಸ್: 'ಕನ್ನಡತಿ' ಪಾರ್ಟಿಯಲ್ಲಿ ಟಗರು ಪುಟ್ಟಿಯ ರಂಗು

  |

  ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಕಾಮತ್ ಈಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾದರೆ ಸಿನಿಮಾ ಕಥೆ ಏನು ಅಂತೀರಾ, ಸಿನಿಮಾ ಜೊತೆಗೆ ಮಾನ್ವಿತಾ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ನಟಿ ಮಾನ್ವಿತಾ ಸದ್ಯ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ 'ಕನ್ನಡತಿ' ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ.

  'ಕನ್ನಡತಿ' ಧಾರಾವಾಹಿ ಈಗಾಗಲೇ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ. ಸಂಭಾಷಣೆ, ಅಭಿನಯ, ಕಥೆ ಎಲ್ಲವೂ ಪ್ರೇಕ್ಷಕ ವರ್ಗದ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಮಾನ್ವಿತಾ ಎಂಟ್ರಿಯಿಂದ ಮತ್ತಷ್ಟು ರೋಚಕವಾಗಿರಲಿದೆ. ಅಂದ್ಹಾಗೆ ಮಾನ್ವಿತಾ ಧಾರಾವಾಹಿಯ ಪಾರ್ಟಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಪೊಲೀಸರ ವರ್ತನೆ ಬಗ್ಗೆ ಸಿಟ್ಟಾದ ಟಗರು ಮಾನ್ವಿತಾ ಪುಟ್ಟಿ

  ಪಾರ್ಟಿಯಲ್ಲಿ ಕಾಣಿಸಿಕೊಳ್ಳುವ ಮಾನ್ವಿತಾ ಡ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎಪಿಸೋಡ್ ಇಂದು ಪ್ರಸಾರವಾಗುವ ಸಾಧ್ಯತೆ. ಕೇವಲ ಡ್ಯಾನ್ಸ್ ಮಾಡಿ ಧಾರಾವಾಹಿಯಿಂದ ಎಕ್ಸಿಟ್ ಆಗುತ್ತಾರಾ ಅಥವಾ ಧಾರಾವಾಹಿಯ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕು.

  ಈ ಬಗ್ಗೆ ಕನ್ನಡ ಧಾರಾವಾಹಿ ನಟಿ ರಂಜನಿ ರಾಘವನ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ. ಮಾನ್ವಿತಾ ಜೊತೆ ಫೋಟೋ ಕ್ಲಿಕಿಸಿಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ, "Catch us together at the party. ಈ ಟೈಮಲ್ಲಿ ಯಾವ್ ಪಾರ್ಟಿ ಅಂತ ಕನ್ಫ್ಯೂಸ್ ಆಗ್ತಿದ್ರೆ, ಕನ್ನಡತಿ ಎಪಿಸೋಡ್ ಗಳನ್ನು ಮಿಸ್ ಮಾಡ್ದೆ ನೋಡಿ" ಎಂದು ಬರೆದುಕೊಂಡಿದ್ದಾರೆ.ಈ ಮೂಲಕ ನಟಿ ಮಾನ್ವಿತಾ ಎಂಟ್ರಿಯ ಬಗ್ಗೆ ಸುಳಿವು ನೀಡಿದ್ದಾರೆ.

  ಅಂದ್ಹಾಗೆ ನಟಿ ಮಾನ್ವಿತಾ ಕೊನೆಯದಾಗಿ ಇಂಡಿಯಾ ವರ್ಸಸ್ ಇಂಗ್ಲೆಡ್ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಮಾನ್ವಿತಾ ಬಳಿ ನಾಲ್ಕೈದು ಸಿನಿಮಾಗಳಿವೆ. ಕನ್ನಡ ಸಿನಿಮಾ ಜೊತೆಗೆ ಮರಾಠಿ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಸಿನಿಮಾ ಜೊತೆಗೆ ಈಗ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿದ್ದಾರೆ.

  English summary
  Actress Manvitha kamath enters to Kannada Serial. TV Artist Ranjani Raghavan shares a photo with Manvitha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X