For Quick Alerts
  ALLOW NOTIFICATIONS  
  For Daily Alerts

  ಕಿರುತೆರೆ ಖ್ಯಾತ ನಟಿ ರಂಜನಿ ರಾಘವನ್ ಫೇಸ್ ಬುಕ್ ಖಾತೆ ಹ್ಯಾಕ್

  |

  ಕಿರುತೆರೆಯ ಖ್ಯಾತ ನಟಿ ರಂಜನಿ ರಾಘವನ್ ಅವರ ಫೇಸ್ ಬುಕ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ರಂಜನಿ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  ಕನ್ನಡತಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿರುವ ರಂಜನಿ ಸಾಮಾಜಿಕ ಜಾಲತಾಣದಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಕೊರೊನಾ ಭೀಕರ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ರಂಜನಿ ಜಾಗೃತಿ ಮೂಡಿಸವ ಕೆಲಸ ಮಾಡುತ್ತಿದ್ದಾರೆ. ಇದೀಗ ಕಿಡುಗೇಡಿಗಳು ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ.

  ಹ್ಯಾಕ್ ಮಾಡಿ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅಮೇಂಜ್ ಎಂದು ಕ್ಯಾಪ್ಷನ್ ಹಾಕಿರುವ ಹ್ಯಾಕರ್ಸ್ 2 ಗಂಟೆಯ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ತನ್ನ ಖಾತೆಯಲ್ಲಿ ಯಾರೋ ವಿಡಿಯೋ ಪೋಸ್ಟ್ ಮಾಡಿದ ಬಳಿಕ ಎಚ್ಚೆತ್ತುಕೊಂಡ ರಂಜನಿಗೆ ಹ್ಯಾಕ್ ಆಗಿರುವ ಬಗ್ಗೆ ತಿಳಿದುಬಂದಿದೆ.

  ನಂತರ ಇನ್ಟ್ಸಾಗ್ರಾಮ್ ನಲ್ಲಿ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ತಾನಿಯಾ ಪೌಲಿನಾ ಎನ್ನುವ ವ್ಯಕ್ತಿ ಹ್ಯಾಕ್ ಮಾಡಿದ್ದಾರೆ ದಯವಿಟ್ಟು ಎಲ್ಲರೂ ರಿಪೋರ್ಟ್ ಮಾಡಿ ಕೇಳಿಕೊಂಡಿದ್ದಾರೆ.

  ಅಂದಹಾಗೆ ರಂಜನಿ ಇತ್ತೀಚಿಗಷ್ಟೆ, ನಿಂಬೆಸರ ಮೂಗಿಗೆ ಹಾಕಿದರೆ ಕೊರೊನಾ ಬರಲ್ಲ ಎನ್ನುವುದು ತಪ್ಪು ಮಾಹಿತಿ ಎನ್ನುವ ಪೋಸ್ಟ್ ಹಾಕಿದ್ದರು. 'ಮೂಗಿನ ಹೊಳ್ಳೆಗಳಿಗೆ ನಿಂಬೆರಸ ಹಾಕಿದರೆ ಉಸಿರಾಟದ ತೊಂದರೆ ಆಗಲ್, ಕಫ ಕರಗುತ್ತೆ ಅನ್ನೋದು ಸಹ ಸರಿಯಾದ ಮಾಹಿತಿಯಲ್ಲ. There is risk involved. ಯಾರು ಹೇಳಿದ್ರು, ಏಕೆ ಹೇಳಿದ್ರು ಅನ್ನೋಕ್ಕಿಂತ ಪರಿಣಾಮದ ಬಗ್ಗೆ ಮಾತಾಡೋದು ಉತ್ತಮ' ಎಂದಿದ್ದರು.

  Actress Ranjani Raghavan facebook page hacked

  Recommended Video

  ಪಶ್ಚಿಮ‌ ಬಂಗಾಳ ಮತ್ತು ದೀದಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆಗೆ ಸಸ್ಪೆಂಡ್ ಮಾಡಿದ ಟ್ವಿಟ್ಟರ್ | Filmibeat Kannada

  'ಮೂಗಿಗೆ ನಿಂಬೆ ರಸ ಹಾಕಿ ನನ್ನ ಸ್ನೇಹಿತರೊಬ್ಬರಿಗೆ infection ಆಗಿ ಮೂಗು ಬ್ಲಾಕ್ ಆಗಿದೆ. ಸಿಟ್ರಿಕ್ ಆಸಿಡ್ ನ ಮೂಗಿಗೆ ಯಾಕೆ ಹಾಕಿದ್ರಿ ಅಂತ ಡಾಕ್ಟರ್ ಬೈದ್ರು. ನನ್ನ ಮಾಹಿತಿಯಿಂದ ಇನ್ನೊಬ್ಬರಿಗೆ ತೊಂದರೆ ಆಗೋದನ್ನ ತಡೀಬಹುದು ಅನ್ನೋ ಕಾಳಜಿಯಿಂದ ಹಂಚಿಕೊಂಡಿದ್ದೇನೆ' ಎನ್ನುವ ಮಾಹಿತಿ ಹಂಚಿಕೊಂಡಿದ್ದರು.

  English summary
  Kannada serial Actress Ranjani Raghavan facebook page hacked.
  Tuesday, May 4, 2021, 13:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X