'ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ' ಎಂದ ದಿಗಂತ್ - ಐಂದ್ರಿತಾ
Recommended Video

ಪ್ರೀತಿಯಲ್ಲಿ ಇರುವ ಸುಖ ಪ್ರೀತಿಸಿದವರಿಗೆ ಮಾತ್ರ ಗೊತ್ತು. ಈಗ ಈ ರೀತಿ ಆಗಿರುವುದು ನಟ ದಿಗಂತ್ ಹಾಗೂ ಐಂದ್ರಿತಾ ರೇ ಅವರಿಗೆ. ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಆಗಿರುವ ದಿಗಂತ್ ಮತ್ತು ಐಂದ್ರಿತಾ ಈಗ ಸಂತೋಷದಿಂದ ಹಾಡಿ ಕುಣಿದಿದ್ದಾರೆ.
ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯ 'ಸಿಕ್ಸ್ತ್ ಸೆನ್ಸ್' ಕಾರ್ಯಕ್ರಮಕ್ಕೆ ದಿಗಂತ್ ಮತ್ತು ಐಂದ್ರಿತಾ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಈ ಲವ್ಲಿ ಜೋಡಿ 'ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ' ಎಂದು ಹಾಡಿ ಕುಣಿದಿದೆ. ಜೊತೆಗೆ ದಿಗಂತ್ ಇದೇ ವೇಳೆ ಮನಸಾರೆ ಐಂದ್ರಿತಾಗೆ ಪ್ರಪೋಸ್ ಮಾಡಿದ್ದಾರೆ.

ದಿಗಂತ್ ಹಾಗೂ ಐಂದ್ರಿತಾ ರೇ ಲವ್ ನಲ್ಲಿ ಇರುವ ವಿಷಯ ಇಡೀ ಚಿತ್ರರಂಗಕ್ಕೆ ತಿಳಿದಿದೆ. ಅಲ್ಲದೆ ಈ ಇಬ್ಬರು ಸದ್ಯದಲ್ಲಿಯೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೂಡ ಇದೆ. ಈ ಹಿಂದೆ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಬಂದಿದ್ದ ದಿಗಂತ್ ತಾವು ಐಂದ್ರಿತಾ ರನ್ನು ಪ್ರೀತಿಸುತ್ತಿರುವ ಸುಳಿವು ನೀಡಿದ್ದರು.
ಅಂದಹಾಗೆ, ಈ ಶನಿವಾರ ದಿಗಂತ್ ಹಾಗೂ ಐಂದ್ರಿತಾ ರೇ ಅವರ 'ಸಿಕ್ಸ್ತ್ ಸೆನ್ಸ್' ಕಾರ್ಯಕ್ರಮ ಸಂಚಿಕೆ ಪ್ರಸಾರ ಆಗಲಿದೆ. ದಿಗಂತ್ - ಐಂದ್ರಿತಾ ಜೋಡಿ 'ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ' ಎಂದು ಕುಣಿದಿರುವುದು ಈ ಸಂಚಿಕೆಯ ಹೈಲೆಟ್ ಆಗಿದೆ.


Click it and Unblock the Notifications











