Just In
Don't Miss!
- Lifestyle
ದಿನ ಭವಿಷ್ಯ: ನಿಮ್ಮ ರಾಶಿಗೆ ಶನಿವಾರ ದಿನ ಹೇಗಿರಲಿದೆ ನೋಡಿ
- News
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಜವಾಗ್ಲೂ, ಸತ್ಯವಾಗ್ಲೂ, ತಾಯಾಣೆ ಕೇಳ್ತೀವಿ... ದಿವಾಕರ್ ಗೆಲ್ತಾರಾ.?

ಮಾತ್ತೆತ್ತಿದ್ರೆ ಸಾಕು... ''ನಿಜವಾಗ್ಲೂ ಹೇಳ್ತೀನಿ, ಸತ್ಯವಾಗ್ಲೂ ಹೇಳ್ತೀನಿ, ನಮ್ಮ ತಾಯಾಣಿ ಹೇಳ್ತೀನಿ...'' ಅಂತ ಮಾತು ಶುರು ಮಾಡುವ 'ಬಿಗ್ ಬಾಸ್' ಸ್ಪರ್ಧಿ ದಿವಾಕರ್.
ಕಾಮನ್ ಮ್ಯಾನ್ ಕಂಟೆಸ್ಟೆಂಟ್ ಆಗಿ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ದಿವಾಕರ್ ಅನೇಕ ರಾದ್ಧಾಂತಗಳಿಗೆ ನಾಂದಿ ಹಾಡಿದ್ದಾರೆ, ಸಾಕ್ಷಿ ಆಗಿದ್ದಾರೆ. ''ಪದೇ ಪದೇ ನಾಮಿನೇಟ್ ಆಗಬೇಕು, ಆಗಲೇ ಜನರಿಗೆ ನಮ್ಮ ಪರಿಚಯ ಆಗುವುದು'' ಎಂಬ ಸಿದ್ಧಾಂತವನ್ನ ತಲೆಯಲ್ಲಿ ಇಟ್ಟುಕೊಂಡು ಆಟ ಆಡಿರುವ ದಿವಾಕರ್ ಸದ್ಯ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಫೈನಲಿಸ್ಟ್.
ಫೈನಲ್ ತಲುಪಿರುವ ಟಾಪ್ 5 ಸ್ಪರ್ಧಿಗಳ ಪೈಕಿ ದಿವಾಕರ್ ಕೂಡ ಒಬ್ಬರು. ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಆಗಿರುವ ದಿವಾಕರ್ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿ ಆಗಿದ್ದಾರಾ.? 'ಬಿಗ್ ಬಾಸ್' ಕಾರ್ಯಕ್ರಮದ ಮೂಲಕ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ದಿವಾಕರ್ ಈ ಬಾರಿ ವಿಜೇತರಾಗುವುದು, ಬಿಡುವುದು ನಿಮ್ಮ ಕೈಯಲ್ಲಿದೆ. ಆದ್ರೆ, ಅದಕ್ಕೂ ಮುನ್ನ 'ಬಿಗ್ ಬಾಸ್' ಮನೆಯೊಳಗಿನ ದಿವಾಕರ್ ಜರ್ನಿ ಕುರಿತು ಸಣ್ಣ ರೌಂಡಪ್ ಇಲ್ಲಿದೆ. ಓದಿರಿ...

ಕಾಮನ್ ಮ್ಯಾನ್ ಕಂಟೆಸ್ಟೆಂಟ್
ವೃತ್ತಿಯಲ್ಲಿ ಸೇಲ್ಸ್ ಮ್ಯಾನ್ ಅಗಿರುವ ದಿವಾಕರ್, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಾಮನ್ ಮ್ಯಾನ್ ಕಂಟೆಸ್ಟೆಂಟ್ ಆಗಿ ಎಂಟ್ರಿಕೊಟ್ಟರು.

ಹೊಂದಾಣಿಕೆ ಸಮಸ್ಯೆ
ಇದೇ ಮೊದಲ ಬಾರಿಗೆ 'ಬಿಗ್ ಬಾಸ್' ಮನೆಯೊಳಗೆ ಸೆಲೆಬ್ರಿಟಿಗಳ ಜೊತೆಗೆ ಕಾಮನ್ ಮ್ಯಾನ್ ಗಳಿಗೆ ಅವಕಾಶ ನೀಡಿದ್ರಿಂದ, ಹೊಸ ತಿಕ್ಕಾಟ ಶುರು ಆಯ್ತು. ದಿವಾಕರ್ ಅವರಿಗೆ ಮೊದಮೊದಲು ಹೊಂದಾಣಿಕೆ ಸಮಸ್ಯೆ ಕೂಡ ಕಾಡ್ತು.

ಹೊಸ ಮಾತಿನ ಚಕಮಕಿಗೆ ನಾಂದಿ ಹಾಡಿದ್ದೇ ದಿವಾಕರ್.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಮೊದಲ ಮಾತಿನ ಚಕಮಕಿಗೆ ನಾಂದಿ ಹಾಡಿದವರು ದಿವಾಕರ್. ಮೇಘ ಪರ ಬ್ಯಾಟಿಂಗ್ ಮಾಡಲು ಆರಂಭಿಸಿದ ದಿವಾಕರ್ ಹಾಗೂ ತೇಜಸ್ವಿನಿ ಮಧ್ಯೆ 'ಏಕವಚನ'ದಲ್ಲಿ ಜಗಳ ನಡೆಯಿತು.

ಇಡೀ ಮನೆ ದಿವಾಕರ್ ವಿರುದ್ಧ
ಮೊದಲೆರಡು ವಾರಗಳಂತೂ ಇಡೀ ಮನೆ 'ಮಾತಿನ ಮಲ್ಲ' ದಿವಾಕರ್ ವಿರುದ್ಧ ತಿರುಗಿ ಬಿದ್ದಿತ್ತು. ತೇಜಸ್ವಿನಿ, ಸಿಹಿ ಕಹಿ ಚಂದ್ರು ಹಾಗೂ ದಯಾಳ್ ಜೊತೆಗೆ ದಿವಾಕರ್ ವಾಗ್ವಾದ ನಡೆಸಿದ್ದರು.

ದಿವಾಕರ್ ಮನಸ್ಸಿನಲ್ಲಿ ಇದ್ದದ್ದೇನು.?
ಜನಸಾಮಾನ್ಯರನ್ನು ಕಂಡ್ರೆ ಸೆಲೆಬ್ರಿಟಿಗಳಿಗೆ ಅಸಡ್ಡೆ, ನಿರ್ಲಕ್ಷ್ಯ ಎಂಬ ಭಾವ ದಿವಾಕರ್ ಮನಸ್ಸಲ್ಲಿ ಮೂಡಿತ್ತು. ಹೀಗಾಗಿ, ಜನಸಾಮಾನ್ಯ ಸ್ಪರ್ಧಿಗಳ ಪರ ದನಿ ಎತ್ತಿ ಎಲ್ಲರ ಕೆಂಗಣ್ಣಿಗೆ ದಿವಾಕರ್ ಗುರಿಯಾಗಿದ್ದರು.
ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

'ಕಳಪೆ' ಕಿತ್ತಾಟ
ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ದಿವಾಕರ್ ಗೆ ಕ್ಯಾಪ್ಟನ್ ಆಗಿದ್ದ ಶ್ರುತಿ ಪ್ರಕಾಶ್ ಕಳಪೆ ಬೋರ್ಡ್ ನೀಡಿದರು. ಆದ್ರೆ, ಅದನ್ನ ಧರಿಸಲು ದಿವಾಕರ್ ನಿರಾಕರಿಸಿದರು. ಇದರಿಂದ 'ಬಿಗ್' ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದು ಹೋಯ್ತು. ಕೊನೆಗೂ ಕಳಪೆ ಬೋರ್ಡ್ ನ ದಿವಾಕರ್ ಧರಿಸಲೇ ಇಲ್ಲ. ಆದ ಕಾರಣ ಶ್ರುತಿ ಹಾಗೂ ದಿವಾಕರ್ ನೇರವಾಗಿ ನಾಮಿನೇಟ್ ಆದರು.
'ಕಳಪೆ' ಎಂದ ಕ್ಯಾಪ್ಟನ್ ಶ್ರುತಿ ಪ್ರಕಾಶ್ ವಿರುದ್ಧ ತಿರುಗಿ ಬಿದ್ದ ದಿವಾಕರ್.!

ದಿವಾಕರ್ ಪರ ದನಿ ಎತ್ತಿದ ರಿಯಾಝ್
ಇಡೀ ಮನೆ ದಿವಾಕರ್ ವಿರುದ್ಧ ನಿಂತಿದ್ದಾಗ, ದಿವಾಕರ್ ಪರ ದನಿ ಎತ್ತಿದವರು ರಿಯಾಝ್.

ದಿವಾಕರ್-ರಿಯಾಝ್ ನಡುವೆ ಕಂದಕ
ದಿವಾಕರ್ ಪರ ರಿಯಾಝ್ ನಿಂತ ಮೇಲೆ.. ದಿವಾಕರ್ ಗೆ ಸುದೀಪ್ ಕೆಲ ಟಿಪ್ಸ್ ನೀಡಿದ್ಮೇಲೆ.. ದಿವಾಕರ್ ಬದಲಾದರು. ಸೆಲೆಬ್ರಿಟಿ ಸ್ಪರ್ಧಿಗಳ ಜೊತೆಗೆ ಬೆರೆತು, ದಿವಾಕರ್ ಒಳ್ಳೆಯವರಾಗಿ ಕಾಣಲು ಆರಂಭಿಸಿದರು. ಆದ್ರೆ, ದಿವಾಕರ್ ಪರ ದನಿ ಎತ್ತಿದ ರಿಯಾಝ್ ಮಾತ್ರ ಸೆಲೆಬ್ರಿಟಿ ಸ್ಪರ್ಧಿಗಳ ಕಣ್ಣಿಗೆ ಅಷ್ಟಕಷ್ಟೆ ಎಂಬಂತಾದರು. ಇದರಿಂದ ದಿವಾಕರ್ ಹಾಗೂ ರಿಯಾಝ್ ಮಧ್ಯೆ ಕಂದಕ ಮೂಡಲು ಶುರುವಾಯ್ತು.
ದಿವಾಕರ್ ಬದಲಾಗಿದ್ದಾರಾ.? ರಿಯಾಝ್ ಗೆ ಅಷ್ಟು ಬೇಸರ ಯಾಕೆ.?

ರಿಯಾಝ್ ಜೊತೆ ಪದೇ ಪದೇ ಜಗಳ
ಕೆಲವೊಮ್ಮೆ ಸಣ್ಣ ಪುಟ್ಟ ಕಾರಣಕ್ಕೆ, ಇನ್ನೂ ಕೆಲವೊಮ್ಮೆ ಕಾರಣ ಇಲ್ಲದೆ ರಿಯಾಝ್ ಜೊತೆಗೆ ದಿವಾಕರ್ ಜಗಳ ಮಾಡಿಕೊಂಡರು. 'ಏಕವಚನ'ದಲ್ಲಿ, ಛೀ ಥೂ ಅಂತೆಲ್ಲ ರಿಯಾಝ್ ಗೆ ದಿವಾಕರ್ ಬೈಯ್ದ ಉದಾಹರಣೆ ಇದೆ.
'ನಾಟಕ' ಮಾಡುವ ರಿಯಾಝ್ ಗೆ 'ಥೂ' ಎಂದ ದಿವಾಕರ್.!

ಜಯಶ್ರೀನಿವಾಸನ್ 420
ಬರೀ ರಿಯಾಝ್ ಗೆ ಮಾತ್ರ ಅಲ್ಲ, ಸುದೀಪ್ ಮುಂದೆಯೇ ''ಜಯಶ್ರೀನಿವಾಸನ್ 420'' ಎಂದು ದಿವಾಕರ್ ಹೇಳಿದ್ದರು. ಇದೇ ಕಾರಣಕ್ಕೆ ದಿವಾಕರ್ ಮೇಲೆ ಸುದೀಪ್ ಗದಾಪ್ರಹಾರ ನಡೆಸಿದರು.
'ಜಯಶ್ರೀನಿವಾಸನ್ 420' ಎಂದ ದಿವಾಕರ್ ಗೆ ಸುದೀಪ್ ಗದಾ ಪ್ರಹಾರ.!

'ಬಿಗ್ ಬಾಸ್' ಜೀವನ ಅಲ್ಲ ಎಂದಿದ್ದ ದಿವಾಕರ್
''ನಾನು ಯಾರಿಗೋಸ್ಕರವೂ ಚೇಂಜ್ ಆಗಲ್ಲ. ಜನರು ವೋಟ್ ಮಾಡದೆ ಹೊರಗೆ ಕಳುಹಿಸಿದರೂ ಪರ್ವಾಗಿಲ್ಲ. ನನ್ನದು ತಪ್ಪು ಅಂತ ಗೊತ್ತಾದರೆ, ನಾವು ಯಾವತ್ತೂ ಹೊರಗೆ ಹೋಗಲು ರೆಡಿ. ಇದು ನನ್ನ ಜೀವನ ಅಲ್ಲ'' ಎಂದು ದಿವಾಕರ್ ಹೇಳಿದ್ದರು. ದಿವಾಕರ್ ಅವರ ಈ ಮಾತಿಗೆ ಸುದೀಪ್ ಕೂಡ ಬೇಸರ ವ್ಯಕ್ತಪಡಿಸಿದ್ದರು.

ಚಂದನ್ ಶೆಟ್ಟಿ ಕ್ಲೋಸ್ ಫ್ರೆಂಡ್
ರಿಯಾಝ್ ರಿಂದ ದೂರ ಸರಿಯಲು ಆರಂಭಿಸಿದ ದಿವಾಕರ್, ಹೆಚ್ಚು ಹತ್ತಿರವಾಗಿದ್ದು ಚಂದನ್ ಶೆಟ್ಟಿ ಜೊತೆಗೆ. ಈಗಲೂ ಚಂದನ್ ಶೆಟ್ಟಿಗೆ ಆತ್ಮೀಯವಾಗಿದ್ದಾರೆ ದಿವಾಕರ್.

ಚಂದನ್ ಶೆಟ್ಟಿ ಶರ್ಟ್ ಹರಿದ ದಿವಾಕರ್
ಚಂದನ್ ಶೆಟ್ಟಿ ಕ್ಲೋಸ್ ಫ್ರೆಂಡ್ ಆಗಿದ್ದರೂ, ಆಟದ ಬಿಸಿಯಲ್ಲಿ ಚಂದನ್ ಶೆಟ್ಟಿ ಟಿ-ಶರ್ಟ್ ನ ಹರಿದು ಹಾಕಿದ್ದರು ದಿವಾಕರ್. ಅಂದು ಚಂದನ್ ಶೆಟ್ಟಿ ತಾಳ್ಮೆ ತೆಗೆದುಕೊಂಡಿರಲಿಲ್ಲ ಅಂದಿದ್ರೆ, ದಿವಾಕರ್ ಕಿಕ್ ಔಟ್ ಆಗುತ್ತಿದ್ದರು.
ಆಟದಲ್ಲಿ ಕಿತ್ತಾಡಿಕೊಂಡು ಟೀ-ಶರ್ಟ್ ಹರಿದುಕೊಂಡ ಆತ್ಮೀಯ ಗೆಳೆಯರು.!

ಸೀಕ್ರೆಟ್ ರೂಮ್ ನಲ್ಲಿ ದಿವಾಕರ್
'ಬಿಗ್ ಬಾಸ್' ನೀಡಿದ ಟ್ವಿಸ್ಟ್ ಅನುಸಾರ ಒಂದು ವಾರ ಸೀಕ್ರೆಟ್ ರೂಮ್ ನಲ್ಲಿದ್ದು ಎಲ್ಲರ ನಡವಳಿಕೆಯನ್ನ ದಿವಾಕರ್ ಗಮನಿಸಿದರು.

ರಾಜಕಾರಣಿ ದಿವಾಕರ್.!
ಹೊರಗೆ ಎಲ್ಲರ ಮುಂದೆ ಒಂದು ನಿರ್ಧಾರ ತೆಗೆದುಕೊಂಡು, ಒಳಗೆ ಯಾರೂ ಇಲ್ಲದಿರುವಾಗ ತೆಗೆದುಕೊಂಡ ನಿರ್ಧಾರಗಳು ದಿವಾಕರ್ 'ಎಂಥಾ ರಾಜಕಾರಣಿ' ಅಂತ 'ಬಿಗ್ ಬಾಸ್' ತೋರಿಸಿಕೊಟ್ಟರು.

ಕಲಾವಿದ ದಿವಾಕರ್
'ರಾಜಕಾರಣಿ' ಪಾತ್ರದಲ್ಲಿ, 'ಕುಡುಕ'ನಾಗಿ, ಚಂದನ್ ಶೆಟ್ಟಿಯನ್ನ ಅನುಕರಣೆ ಮಾಡುವಲ್ಲಿ ದಿವಾಕರ್ ನೀಡಿದ ಮನೋರಂಜನೆ 'ಅದ್ಭುತ'.

ವರ್ಕೌಟ್ ಆದ ಸಿದ್ಧಾಂತ
''ನಾಮಿನೇಟ್ ಆದಾಗಲೇ, ಜನರಿಗೆ ನಮ್ಮ ಪರಿಚಯ ಆಗುವುದು'' ಎಂಬ ಸಿದ್ಧಾಂತ ಇಟ್ಟುಕೊಂಡು ಆಟ ಆಡುತ್ತಿದ್ದ ದಿವಾಕರ್ ಹೆಚ್ಚು ಬಾರಿ ನಾಮಿನೇಟ್ ಆಗಿ ಸೇಫ್ ಆಗಿದ್ದಾರೆ. ಈಗ ಗೆಲ್ಲುವುದೊಂದೇ ಬಾಕಿ.
ಆಗಾಗ ನಾಮಿನೇಟ್ ಆಗಬೇಕು, ಆಗಲೇ ಜನರಿಗೆ ಗೊತ್ತಾಗೋದು: ಇದು ದಿವಾಕರ್ ಸಿದ್ಧಾಂತ.!

ದಿವಾಕರ್ ರನ್ನ ಗೆಲ್ಲಿಸ್ತೀರಾ.?
ಜಗಳ, ರಾದ್ಧಾಂತಗಳ ಜೊತೆಗೆ ಕಾಮಿಡಿ ಮಾಡುತ್ತ ಸತತವಾಗಿ ಮನರಂಜನೆ ನೀಡುತ್ತಾ ಬಂದಿರುವ ದಿವಾಕರ್ ಇದೀಗ ಟಾಪ್ 5 ಹಂತಕ್ಕೆ ಬಂದಿದ್ದಾರೆ. ಈ ಬಾರಿ ಕಾಮನ್ ಮ್ಯಾನ್ ಗೆಲ್ಲಬೇಕು ಎಂಬ ಆಸೆ ಹಲವರಿಗೆ ಇದೆ. ಆ ಆಸೆ ನಿಮಗೂ ಇದ್ದರೆ, ದಿವಾಕರ್ ಗೆ ವೋಟ್ ಮಾಡಿ...