»   » ಎಂದೂ ತಾಳ್ಮೆ ಕಳೆದುಕೊಳ್ಳದ ಜೆಕೆ 'ಬಿಗ್ ಬಾಸ್' ಗೆದ್ದುಬಿಟ್ಟರೆ.?

ಎಂದೂ ತಾಳ್ಮೆ ಕಳೆದುಕೊಳ್ಳದ ಜೆಕೆ 'ಬಿಗ್ ಬಾಸ್' ಗೆದ್ದುಬಿಟ್ಟರೆ.?

Posted By:
Subscribe to Filmibeat Kannada

'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದವರು ಜಯರಾಂ ಕಾರ್ತಿಕ್. ಸೀರಿಯಲ್ ನಲ್ಲಿ ಸೂಪರ್ ಸ್ಟಾರ್ ಆಗಿ, ಅಹಂಕಾರಿಯಾಗಿ ಕಾಣಿಸಿಕೊಂಡಿದ್ದ ಜೆಕೆ, ನಿಜ ಜೀವನದಲ್ಲೂ ಹಾಗೇ ಇರಬಹುದಾ ಎಂಬ ಅನುಮಾನ ಅನೇಕರಲ್ಲಿ ಮೂಡಿತ್ತು. ಆದ್ರೆ, ಜೆಕೆ ಸಖತ್ ಸಿಂಪಲ್ ಅಂತ ಪ್ರೂವ್ ಆಗಿದ್ದು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ.

'ಬಿಗ್ ಬಾಸ್' ಮನೆಯೊಳಗೆ ಜೆಕೆ ಎಂಟ್ರಿಕೊಟ್ಟಾಗ ''ಈತ ಖಂಡಿತ ಘಟಾನುಘಟಿ ಸ್ಪರ್ಧಿ'' ಎಂಬ ಭಾವನೆ ಇತರೆ ಸ್ಪರ್ಧಿಗಳಲ್ಲಿ ಮೂಡಿತ್ತು. ಟಾಪ್ 5 ಹಂತಕ್ಕೆ ಯಾರ್ಯಾರು ಹೋಗ್ತಾರೆ ಅಂತ ಪ್ರತಿ ಬಾರಿ ಪ್ರಶ್ನೆ ಮಾಡಿದಾಗಲೂ, ಎಲ್ಲರ ಬಾಯಲ್ಲೂ ಜೆಕೆ ಹೆಸರು ಬಂದಿತ್ತು.

ಇದೀಗ ನಿರೀಕ್ಷೆಯಂತೆ ಜಯರಾಂ ಕಾರ್ತಿಕ್ 'ಬಿಗ್ ಬಾಸ್ ಕನ್ನಡ-5' ಫೈನಲಿಸ್ಟ್. 'ಬಿಗ್ ಬಾಸ್' ಮನೆಯೊಳಗೆ ಎಂದೂ ತಾಳ್ಮೆ ಕಳೆದುಕೊಳ್ಳದ ಜೆಕೆ ಈಗ ವಿನ್ನರ್ ಆಗುವುದು, ಬಿಡುವುದು ನಿಮ್ಮ ಕೈಯಲ್ಲಿದೆ. ಆದ್ರೆ, ಅದಕ್ಕೂ ಮುನ್ನ 'ಬಿಗ್ ಬಾಸ್' ಮನೆಯೊಳಗಿನ ಜೆಕೆ ಜರ್ನಿ ಕುರಿತು ಸಣ್ಣ ರೌಂಡಪ್ ಇಲ್ಲಿದೆ. ಓದಿರಿ...

ಸೆಲೆಬ್ರಿಟಿ ಸ್ಪರ್ಧಿ

'ಬಿಗ್ ಬಾಸ್' ಮನೆಯೊಳಗೆ ಸೆಲೆಬ್ರಿಟಿ ಸ್ಪರ್ಧಿಯಾಗಿ ಎಂಟ್ರಿಕೊಟ್ಟ ಜಯರಾಂ ಕಾರ್ತಿಕ್ ಮೊದಮೊದಲು ಇತರೆ ಸೆಲೆಬ್ರಿಟಿ ಸ್ಪರ್ಧಿಗಳ ಜೊತೆಗೆ ಹೆಚ್ಚು ಆಪ್ತರಾದರು.

ಎಲ್ಲರೊಂದಿಗೆ ಬೆರೆತ ಜೆಕೆ

ಕಾಮನ್ ಮ್ಯಾನ್ ಸ್ಪರ್ಧಿಗಳ ಜೊತೆಗೂ ಬೆರೆಯಲು ಆರಂಭಿಸಿದ ಜೆಕೆ, ಎಲ್ಲರೊಂದಿಗೆ ನಗುನಗುತ್ತಾ ಮಾತನಾಡಿದ್ದೇ ಜಾಸ್ತಿ.

ಬೆಟ್ಟಿಂಗ್ ನಲ್ಲಿ ಗೆದ್ದ ಸಮೀರಾಚಾರ್ಯ: ಜಯರಾಂ ಕಾರ್ತಿಕ್ ಗೆ ಐದು ಲಕ್ಷ ಲಾಸ್.!

ಗುಂಪುಗಾರಿಕೆಯಲ್ಲಿ ಪಾಲು ಇಲ್ಲ.!

'ಬಿಗ್ ಬಾಸ್' ಮನೆಯೊಳಗೆ ಸೆಲೆಬ್ರಿಟಿ ವರ್ಸಸ್ ಕಾಮನ್ ಮ್ಯಾನ್ ಎಂಬ ಗುಂಪುಗಾರಿಕೆ ನಡೆಯುತ್ತಿದ್ದರೂ ಜೆಕೆ ಅದರ ಭಾಗ ಆಗಲಿಲ್ಲ. ಸೆಲೆಬ್ರಿಟಿ ಸ್ಪರ್ಧಿಗಳ ಗುಂಪಿನಲ್ಲಿ ಜೆಕೆ ಇದ್ದರೂ, ಕಾಮನ್ ಮ್ಯಾನ್ ಸ್ಪರ್ಧಿಗಳ ವಿರೋಧ ಕಟ್ಟಿಕೊಳ್ಳಲಿಲ್ಲ.

ಈ ವಾರ ಜಯರಾಂ ಕಾರ್ತಿಕ್ ಔಟ್: ಐದು ಲಕ್ಷ ರೂಪಾಯಿ ಬೆಟ್ಟಿಂಗ್.!

ಕೂಗಾಡಿಲ್ಲ, ಜಗಳ ಮಾಡಿಲ್ಲ.!

'ಬಿಗ್ ಬಾಸ್' ಮನೆ ಹಲವು ಗದ್ದಲ, ಗಲಾಟೆ, ಜಗಳಗಳಿಗೆ ಸಾಕ್ಷಿ ಆಗಿದೆ. ಆದ್ರೆ, ಜೆಕೆ ಮಾತ್ರ ಎಂದೂ ಯಾರೊಂದಿಗೂ ಗಲಾಟೆ ಮಾಡಿಕೊಂಡಿಲ್ಲ. ಆಶಿತಾ ಜೊತೆಗೆ ಮಾತಿನ ಚಕಮಕಿ ನಡೆಸಿದ್ದು ಬಿಟ್ಟರೆ ಜೆಕೆ ದನಿ ಏರಿಸಿ ಮಾತನಾಡಿಲ್ಲ.

ಬಿಗ್ ಬಾಸ್ ಫಿನಾಲೆಯಲ್ಲಿ ಗೆಲ್ಲೋದು ಸೆಲೆಬ್ರಿಟಿನಾ ಅಥವಾ ಸಾಮಾನ್ಯನಾ?

ಅಲ್ಲಿರುತ್ತಿರಲಿಲ್ಲ.!

ಊಟ-ತಿಂಡಿ ವಿಚಾರಕ್ಕೆ ಜಗಳ ಆಗುತ್ತಿದ್ದರೆ, ಆ ಜಾಗದಲ್ಲಿ ಜೆಕೆ ಇರುತ್ತಲೇ ಇರಲಿಲ್ಲ.

ಸುದೀಪ್ ದಂಪತಿಗೆ 'ಜೆಕೆ' ಧನ್ಯವಾದ ಹೇಳಿದ್ದೇಕೆ?

ಜಗಳ ತಡೆದ ಉದಾಹರಣೆ ಇದೆ

ಜಗಳ ನಡೆಯುತ್ತಿರುವಾಗ ಸಿಟ್ಟಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಸ್ಪರ್ಧಿಗಳು ಹೋದಾಗ ಅವರನ್ನ ಜೆಕೆ ತಡೆದಿದ್ದಾರೆ.

ಶ್ರುತಿ ಪ್ರಕಾಶ್ ಜೊತೆಗೆ ಆತ್ಮೀಯತೆ

'ಬಿಗ್ ಬಾಸ್' ಮನೆಯೊಳಗೆ ಜೆಕೆ ಹೆಚ್ಚು ಸ್ನೇಹ ಬೆಳೆಸಿದ್ದು ಶ್ರುತಿ ಪ್ರಕಾಶ್ ಜೊತೆಗೆ. ಸದಾ ಒಟ್ಟೊಟ್ಟಿಗೆ ಇರುತ್ತಿದ್ದ ಜೆಕೆ ಹಾಗೂ ಶ್ರುತಿ ಪ್ರಕಾಶ್ ಕಂಡ್ರೆ ಕಿಚ್ಚ ಸುದೀಪ್ ಕೂಡ ಕಾಲೆಳೆಯುತ್ತಿದ್ದರು.

ಜಯರಾಂ ಕಾರ್ತಿಕ್ ಮನಗೆದ್ದ ಚೆಲುವೆ ಶ್ರುತಿ ಪ್ರಕಾಶ್ ಅಲ್ಲ.! ಮತ್ಯಾರು.?

ಶ್ರುತಿಗೆ ಕನ್ನಡ ಕಲಿಕೆ

ಕನ್ನಡ ಬಾರದ ಶ್ರುತಿ ಪ್ರಕಾಶ್ ಗೆ ಜೆಕೆ ಕನ್ನಡ ಕಲಿಸಿದ್ದಾರೆ. ಮಾತನಾಡುವಾಗ ಶ್ರುತಿ ತಪ್ಪು ಮಾಡಿದರೆ, ಅದನ್ನ ಜೆಕೆ ತಿದ್ದಿದ್ದಾರೆ. ಶ್ರುತಿಗೆ ಕನ್ನಡ ಅಂಕಿಗಳನ್ನು ಕಲಿಸಿದ್ದು ಇದೇ ಜೆಕೆ.

ಹೊಡೆಯಿತು ಬಂಪರ್: ಎರಡು ಲಕ್ಷ ರೂಪಾಯಿ ಬಹುಮಾನ ಪಡೆದ ಜೆಕೆ.!

'ಗಾಯಕ' ಜೆಕೆ

ಸದಾ ಸುಮಧುರ ಕನ್ನಡ ಹಾಡುಗಳನ್ನು ಹಾಡುತ್ತ, 'ಬಿಗ್ ಬಾಸ್' ಮನೆಯೊಳಗಿದ್ದವರಿಗೂ, ವೀಕ್ಷಕರಿಗೂ ಜೆಕೆ ಮನರಂಜನೆ ನೀಡಿದ್ದಾರೆ.

ನಗುನಗುತ್ತಾ ಇದ್ದ ಜೆಕೆ

ಸದಾ ನಗುನಗುತ್ತಾ, ತಮ್ಮ ಜೊತೆಗಿದ್ದವರನ್ನೂ ನಗಿಸುತ್ತಿದ್ದ ಜೆಕೆ ಇದೀಗ 'ಬಿಗ್ ಬಾಸ್' ಟಾಪ್ 5 ಹಂತಕ್ಕೆ ಬಂದಿದ್ದಾರೆ. ಜೆಕೆ ವ್ಯಕ್ತಿತ್ವ ನಿಮಗೆ ಇಷ್ಟ ಆಗಿದ್ದರೆ, ವೋಟ್ ಮಾಡಿ ಅವರನ್ನ ಗೆಲ್ಲಿಸಿ.

English summary
Karthik Jayaram is a Finalist in Bigg Boss Kannada 5 reality show. Will Karthik Jayaram manage to win #BBK5 trophy.? Lets wait and Watch

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada