For Quick Alerts
  ALLOW NOTIFICATIONS  
  For Daily Alerts

  ಏ 30 ಕ್ಕೆ ಸ್ಟಾರ್ ಸುವರ್ಣದಲ್ಲಿ 'ಅಮೃತಘಳಿಗೆ' ಮಿಸ್ ಮಾಡದೇ ನೋಡಿ

  By Suneel
  |

  ಮನರಂಜನೆಗಾಗಿ ಸದಾ ಹೊಸತನ ಮತ್ತು ವಿಭಿನ್ನ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ಮನೆ ಮಾತಾಗಿರುವ 'ಸ್ಟಾರ್ ಸುವರ್ಣ ವಾಹಿನಿ'ಯಲ್ಲಿ ಇಂದು(ಏಪ್ರಿಲ್ 30) ಸಂಜೆ 6 ಕ್ಕೆ 'ಅಮೃತಘಳಿಗೆ' ಮಹಾಕಾರ್ಯಕ್ರಮ ಪ್ರಸಾರವಾಗಲಿದೆ.

  ಯಾವುದಿದು ವಿಶೇಷ ಕಾರ್ಯಕ್ರಮ 'ಅಮೃತಘಳಿಗೆ' ಎಂದು ಸ್ಟಾರ್ ಸುವರ್ಣ ವಾಹಿನಿಯ ವೀಕ್ಷಕರು ಗೊಂದಲಪಟ್ಟುಕೊಳ್ಳಬೇಡಿ. ಈ ಮಹಾಕಾರ್ಯಕ್ರಮದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ,

  'ಅಮೃತಘಳಿಗೆ'

  'ಅಮೃತಘಳಿಗೆ'

  ಸ್ಟಾರ್ ಸುವರ್ಣ ವಾಹಿನಿಯ ಹೆಮ್ಮೆಯ ಧಾರಾವಾಹಿ 'ಅಮೃತವರ್ಷಿಣಿ' 5 ವರ್ಷಗಳನ್ನು ಪೂರೈಸಿ ಕಿರುತೆರೆಯಲ್ಲಿ ಸಂಚಲನ ಸೃಷಿಸಿದೆ. ಅಲ್ಲದೇ ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಧಾರಿಗಳು ಕುರುನಾಡ ಜನತೆಯ ಮನದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ್ದಾರೆ. ಆದ್ದರಿಂದ ಧಾರಾವಾಹಿ 5 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸ್ಟಾರ್ ಸುವರ್ಣ ವಾಹಿನಿ ತುಮಕೂರಿನಲ್ಲಿ 10,000 ಕ್ಕಿಂತ ಹೆಚ್ಚು ವೀಕ್ಷಕರ ಮುಂದೆ 'ಅಮೃತಘಳಿಗೆ' ಎಂಬ ವಿಶೇಷ ಕಾರ್ಯಕ್ರಮ ನೆರವೇರಿಸಿದೆ.

  ಹೇಮಾ ಚೌಧರಿಗೆ ಜೀವಮಾನ ಸಾಧನೆ ಪ್ರಶಸ್ತಿ

  ಹೇಮಾ ಚೌಧರಿಗೆ ಜೀವಮಾನ ಸಾಧನೆ ಪ್ರಶಸ್ತಿ

  ಇದೇ ಮಹಾಕಾರ್ಯಕ್ರಮದಲ್ಲಿ ಹಿರಿಯ ನಟಿ ಹೇಮಾಚೌಧರಿ ರವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

  'ಅಮೃತಘಳಿಗೆ'ಯಲ್ಲಿ ಲೀಲಾವತಿ ಮತ್ತು ವಿನೋಜ್ ರಾಜ್

  'ಅಮೃತಘಳಿಗೆ'ಯಲ್ಲಿ ಲೀಲಾವತಿ ಮತ್ತು ವಿನೋಜ್ ರಾಜ್

  'ಅಮೃತಘಳಿಗೆ' ವಿಶೇಷ ಕಾರ್ಯಕ್ರಮಕ್ಕೆ ಹಿರಿಯ ನಟಿ ಲೀಲಾವತಿಯವರು ಆಗಮಿಸಿ ಹಾಡಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೇ ವಿನೋದ್ ರಾಜ್ ಅವರು ತಮ್ಮ ಡ್ಯಾನ್ಸ್ ಮೂಲಕ ರಂಜನೆ ನೀಡಿದ್ದಾರೆ.

  ಚಂದನವನದ ತಾರೆಯರು

  ಚಂದನವನದ ತಾರೆಯರು

  ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ತಾರೆಯರಾದ ಮಾನ್ವಿತ ಹರೀಶ್, ಹರಿಪ್ರಿಯ, ಸಂಯುಕ್ತ, ಭಾವನಾ, ವಸಿಷ್ಠ ಸಿಂಹ, ಅನೂಪ್ ಸೀಳಿನ್, ರೋಹಿತ್ ಪದಕಿ ಆಗಮಿಸಿ ಮತ್ತಷ್ಟು ಮೆರಗನ್ನು ನೀಡಿದ್ದಾರೆ. ಅಲ್ಲದೇ ಮಹಾ ವೇದಿಕೆಯಲ್ಲಿ ತುಮಕೂರು ನಗರದ ವೃದ್ಧಾಶ್ರಮದವರಿಗೆ ಆರ್ಥಿಕ ನೆರವು ನೀಡಿ ಪ್ರೊತ್ಸಾಹಿಸಲಾಗಿದೆ.

  ಕಿರುತೆರೆಯ ರಿಯಾಲಿಟಿ ಸ್ಟಾರ್ ನಿರೂಪಣೆ

  ಕಿರುತೆರೆಯ ರಿಯಾಲಿಟಿ ಸ್ಟಾರ್ ನಿರೂಪಣೆ

  'ಅಮೃತಘಳಿಗೆ' ವಿಶೇಷ ಕಾರ್ಯಕ್ರಮದ ಇನ್ನೊಂದು ವಿಶೇಷತೆ ಅಂದ್ರೆ ಕಿರುತೆರೆಯ ರಿಯಾಲಿಟಿ ಸ್ಟಾರ್ ಅಕುಲ್ ಬಾಲಾಜಿ ನಿರೂಪಣೆ ಮಾಡಿದ್ದಾರೆ. ಅವರಿಗೆ ಶಾಲಿನಿ ಮತ್ತು ಪವನ್ ಸಾಥ್ ನೀಡಿದ್ದಾರೆ. ಈ ಮಹಾಕಾರ್ಯಕ್ರಮವನ್ನು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಂದು ಸಂಜೆ 6 ಕ್ಕೆ ಮಿಸ್ ಮಾಡದೇ ನೋಡಿ.

  English summary
  Amruthaghalige Special Program in Star Suvarna Channel on this sunday evening(April 30).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X