For Quick Alerts
  ALLOW NOTIFICATIONS  
  For Daily Alerts

  ಶಭಾಷ್! ಹೊರನಾಡಿನಿಂದ ಬಂದು ಕನ್ನಡ ಪ್ರೇಮ ಮೆರೆದ ಅಕುಲ್ ಬಾಲಾಜಿ

  |

  Recommended Video

  ಅಕುಲ್ ಬಾಲಾಜಿ ನರನಾಡಿಯಲ್ಲೂ ಕನ್ನಡ | FILMIBEAT KANNADA

  ಬೆಂಗಳೂರಿನಲ್ಲಿ ಕನ್ನಡ ಮಾತಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುವ ನೋವು ಎಲ್ಲರಿಗೂ ಇದೆ. ಕರ್ನಾಟಕದಲ್ಲಿ ಹುಟ್ಟಿದರೂ, ಕನ್ನಡ ಬಂದರು, ಕೆಲವರು ಕನ್ನಡ ಮಾತನಾಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ, ಇಂತಹವರ ನಡುವೆಯೇ ಕೆಲವರು ಬೇರೆ ಕಡೆಯಿಂದ ಬಂದು, ಕನ್ನಡ ಕಲಿತು ನಮ್ಮವರಲ್ಲಿ ಒಬ್ಬರಾಗುತ್ತಾರೆ.

  ಒಂದು ಊರಿಗೆ ಹೋಗಿ ಅಲ್ಲಿನ ಭಾಷೆ ಕಲಿತು, ಅಲ್ಲಿನ ಜನರ ಜೊತೆಗೆ ಅವರ ಭಾಷೆಯಲ್ಲಿಯೇ ಮಾತನಾಡುವುದು, ನಾವು ಅವರಿಗೆ ನೀಡುವ ದೊಡ್ಡ ಗೌರವ. ಈ ರೀತಿ ಆಂಧ್ರ ಪ್ರದೇಶದಿಂದ ಬಂದ ಒಂದು ಹುಡುಗ ಕನ್ನಡ ಕಲಿತು, ಈಗ ಕನ್ನಡದ ಜನಪ್ರಿಯ ನಿರೂಪಕರ ಪೈಕಿ ಒಬ್ಬರಾಗಿದ್ದಾರೆ. ಅವರೇ ಅಕುಲ್ ಬಾಲಾಜಿ.

  'ತಕಧಿಮಿತ' ವೇದಿಕೆ ಮೇಲೆ ಆದಂಗೆ ಕ್ಷಮೆ ಕೇಳಿದ ಅಕುಲ್ ಬಾಲಾಜಿ.! 'ತಕಧಿಮಿತ' ವೇದಿಕೆ ಮೇಲೆ ಆದಂಗೆ ಕ್ಷಮೆ ಕೇಳಿದ ಅಕುಲ್ ಬಾಲಾಜಿ.!

  ಇಷ್ಟು ದಿನ ಟಿವಿ ಪರದೆ ಮೇಲೆ ಕನ್ನಡ ಮಾತನಾಡುತ್ತಾ ಕನ್ನಡಿಗರ ಮನೆ ಮನದಲ್ಲಿ ಅಕುಲ್ ಜಾಗ ಪಡೆದಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಅವರು ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ. ಮುಂದೆ ಓದಿ..

  ಅಕುಲ್ ಕೈ ಮೇಲೆ 'ಕನ್ನಡ' ಹಚ್ಚೆ

  ಅಕುಲ್ ಕೈ ಮೇಲೆ 'ಕನ್ನಡ' ಹಚ್ಚೆ

  ನಿರೂಪಕ ಅಕುಲ್ ಬಾಲಾಜಿ ಈಗ ತಮ್ಮ ಕೈ ಮೇಲೆ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. 'ಕನ್ನಡ' ಎಂದು ಹಚ್ಚೆ ಹಾಕಿಸಿಕೊಳ್ಳುವ ಮೂಲಕ ತಮ್ಮ ಕನ್ನಡ ಪ್ರೇಮವನ್ನು ತೋರಿಸಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಕುಲ್ ಹಂಚಿಕೊಂಡಿದ್ದಾರೆ. ಕನ್ನಡ ಮತ್ತು ಕರ್ನಾಟಕದ ಮೇಲಿನ ಪ್ರೀತಿಗೆ ಈ ಟ್ಯಾಟೂ ಎಂದು ಬರೆದುಕೊಂಡಿದ್ದಾರೆ.

  ಅನ್ನ ಕೊಟ್ಟ ಭಾಷೆ ಕನ್ನಡ

  ಅನ್ನ ಕೊಟ್ಟ ಭಾಷೆ ಕನ್ನಡ

  ಅಕುಲ್ ಬಾಲಾಜಿ ಅವರ ಕನ್ನಡ ಪ್ರೇಮ ನೋಡಿ ಅನೇಕರು ಸಂತಸಗೊಂಡಿದ್ದಾರೆ. ಆಂಧ್ರ ದಿಂದ ಬಂದರೂ, ಅನ್ನ ಕೊಟ್ಟ ಭಾಷೆಯನ್ನು ನೆನೆದ ಅಕುಲ್ ರನ್ನು ಮೆಚ್ಚಿಕೊಂಡಿದ್ದಾರೆ. ಅಕುಲ್ ಹಚ್ಚೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಕುಲ್ ಮೇಲಿನ ಅಭಿಮಾನ ಮತ್ತಷ್ಟು ಜಾಸ್ತಿಯಾಯ್ತು ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.

  ಅನುಶ್ರೀಯ ಫೇವರೇಟ್ ಅಂಕರ್ ಯಾರು ಗೊತ್ತೆ? ಅನುಶ್ರೀಯ ಫೇವರೇಟ್ ಅಂಕರ್ ಯಾರು ಗೊತ್ತೆ?

  ಅಕುಲ್ ನಿರೂಪಣೆಯ ಪ್ರಮುಖ ಶೋ ಗಳು

  ಅಕುಲ್ ನಿರೂಪಣೆಯ ಪ್ರಮುಖ ಶೋ ಗಳು

  ಕನ್ನಡ ಕಿರುತೆರೆಯ ಅನೇಕ ಜನಪ್ರಿಯ ರಿಯಾಲಿಟಿ ಶೋ ಗಳಲ್ಲಿ ಅಕುಲ್ ನಿರೂಪಣೆ ಮಾಡಿದ್ದಾರೆ. 'ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫ್', 'ಹಳ್ಳಿ ಹೈದ ಪ್ಯಾಟೆಗ್ ಬಂದ', 'ಪ್ಯಾಟೆ ಮಂದಿ ಕಾಡಿಗೆ ಬಂದ್ರು', 'ನೋಡಿ ಸ್ವಾಮಿ ನಾವ್ ಇರೋದೆ ಹೀಗೆ', 'ಡ್ಯಾನ್ಸಿಂಗ್ ಸ್ಟಾರ್', 'ತಕಧಿಮಿತ' ಹೀಗೆ ಅನೇಕ ಶೋ ಗಳ ಸಾರಥ್ಯ ಅವರು ವಹಿಸಿದ್ದರು. ಜೊತೆಗೆ ಅಕುಲ್ 'ಬಿಗ್ ಬಾಸ್ ಕನ್ನಡ ಸೀಸನ್ 2' ವಿನ್ನರ್ ಸಹ ಆಗಿದ್ದಾರೆ.

  ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟನೆ

  ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟನೆ

  ತಮ್ಮ 16 ವಯಸ್ಸಿಗೆ ಕರ್ನಾಟಕಕ್ಕೆ ಬಂದ ಅಕುಲ್, ಮೊದಲು ಧಾರಾವಾಹಿಗಳಲ್ಲಿ ನಟಿಸಿದರು. 'ಆಘಾತ', 'ಗುಪ್ತಗಾಮಿನಿ', 'ಯಾವ ಜನ್ಮದ ಮೈತ್ರಿ' ಹೀಗೆ ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಳಿಕ 'ಮಿಲನ', 'ಆತ್ಮೀಯ', 'ಮೈನಾ', 'ಕ್ರೇಜಿಸ್ಟಾರ್' ಹೀಗೆ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ, ಧಾರಾವಾಹಿಗಿಂತ ಹೆಚ್ಚು ನಿರೂಪಣೆಗೆ ಅವರಿಗೆ ದೊಡ್ಡ ಹೆಸರು ನೀಡಿದೆ.

  English summary
  Popular anchor Akul Balaji gets 'Kannada' tattooed. Akul is basically from Andhra Pradesh but now he is one of the popular tv anchor in kannada.
  Friday, June 21, 2019, 12:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X