For Quick Alerts
  ALLOW NOTIFICATIONS  
  For Daily Alerts

  ಬೆಟ್ಟದ ಹೂ: ಮೂರನೇ ಬಾರಿಗೆ ಹೂವಿಗೆ ತಾಳಿ ಕಟ್ಟಿದ ರಾಹುಲ್: ಮಾಲಿನಿ ಕಣ್ಣಿಗೆ ಸಿಕ್ಕಿಬೀಳುತ್ತಾರಾ..?

  By ಎಸ್ ಸುಮಂತ್
  |

  ಹೂವಿ ಮತ್ತು ರಾಹುಲ್ ಪರಿಸ್ಥಿತಿ ಈಗ ಬಾಲ ಸುಟ್ಟ ಬೆಕ್ಕಿನಂತೆ ಆಗಿದೆ. ಮಾಲಿನಿ ಕಾಟದಿಂದ ಯಾವುದೇ ದಾರಿ ಕಾಣದೆ ಚನ್ನವಲ್ಸೆಗೆ ಬಂದಿದ್ದು ಆಗಿದೆ. ಬರುವ ಹಾದಿಯಲ್ಲಿ ರಾಹುಲ್ ಮತ್ತು ಹೂವಿ ಏನೇ ಪ್ಲ್ಯಾನ್ ಮಾಡಿದರೂ ಏನನ್ನು ತಡೆಯುವುದಕ್ಕೆ ಸಾಧ್ಯವಾಗಲಿಲ್ಲ. ಮಾಲಿನಿ ಮಾಡಿದ್ದ ಫ್ಲ್ಯಾನ್ ವರ್ಕೌಟ್ ಆಗಿತ್ತು. ಕಡೆಗೂ ಎಲ್ಲರೂ ಚನ್ನವಲ್ಸೆ ತಲುಪಿದ್ದಾರೆ. ಮಾಲಿನಿ ಸತ್ಯ ತಿಳಿಯುವುದಕ್ಕಾಗಿ ಎಲ್ಲದನ್ನು ಸಹಿಸಿಕೊಳ್ಳುತ್ತಿದ್ದಾಳೆ. ಮೇಲ್ನೋಟಕ್ಕೆ ಎಲ್ಲರನ್ನು ಪ್ರೀತಿ ಮಾಡುತ್ತಿರುವವಳಂತೆ ನಾಟಕವಾಡುತ್ತಿದ್ದಾಳೆ.

  ಚನ್ನವಲ್ಸೆ ತಲುಪಿರುವ ಮನೆಯವರೆಲ್ಲರನ್ನು ಕಂಡು ಗೌರ ಸಂತಸಪಟ್ಟಿದ್ದಾಳೆ. ಆದರೆ ಇದೆಲ್ಲದರ ಹಿಂದೆ ಒಂದು ದೊಡ್ಡ ಸತ್ಯ ಮುಚ್ಚಿಡಲಾಗಿದೆ ಎಂಬುದು ಗೌರನಿಗೆ ತಿಳಿಯುವುದು ಕಷ್ಟವಾಗಿಲ್ಲ. ಮಾಲಿನಿ ಮಾಡಿದ ಪ್ಲ್ಯಾನ್ ಕೂಡ ಅಷ್ಟೇ ಸಲೀಸಾಗಿ ಸಕ್ಸಸ್ ಆಗಲಿದೆ. ಸತ್ಯವನ್ನು ಹೂವಿ ಮತ್ತು ರಾಹುಲ್ ತಾನೇ ಎಷ್ಟು ದಿನ ಅಂತ ಮುಚ್ಚಿಡುತ್ತಾರೆ. ಕೊನೆಗೊಂದು ದಿನ ತಿಳಿಯಲೇಬೇಕಲ್ಲವೆ.

  ಬೆಟ್ಟದ ಹೂವಿನ ಟೀಂ ನೋಡಿ ವಾವ್ ಎಂದ ಪ್ರೇಕ್ಷಕರು.. ಕಾರಣ ಆ ಒಂದು ಫೋಟೊ..!ಬೆಟ್ಟದ ಹೂವಿನ ಟೀಂ ನೋಡಿ ವಾವ್ ಎಂದ ಪ್ರೇಕ್ಷಕರು.. ಕಾರಣ ಆ ಒಂದು ಫೋಟೊ..!

  ಹೂವಿಯ ಸತ್ಯವನ್ನು ಎಲ್ಲರ ಮುಂದೆ ಹೇಳುತ್ತಾಳಾ ಕಾಳಿ

  ಹೂವಿಯ ಸತ್ಯವನ್ನು ಎಲ್ಲರ ಮುಂದೆ ಹೇಳುತ್ತಾಳಾ ಕಾಳಿ

  ಹೂವಿಗೆ ಮತ್ತು ಗೌರನಿಗೆ ದುಷ್ಮನ್ ಎಲ್ಲಿದ್ದಾರೆ ಎಂದರೆ ಅದು ಮನೆಯಲ್ಲಿಯೇ ಇದ್ದಾರೆ ಎನ್ನಬಹುದು. ಕಾಳಿಗೆ ಅದು ಯಾವ ಜನ್ಮದ ಕೋಪವೋ ಏನೋ ಗೊತ್ತಿಲ್ಲ. ಗೌರನನ್ನು ಕಂಡರೂ ಕೋಪ ಮಾಡಿಕೊಳ್ಳುತ್ತಲೇ ಇರುತ್ತಾಳೆ. ಹೂವಿಯನ್ನು ಕಂಡರೆ ಕೊಂದೆ ಬಿಡುವಷ್ಟು ಆಕ್ರೋಶ ಹೊರ ಹಾಕುತ್ತಿರುತ್ತಾಳೆ. ಇದೀಗ ಚನ್ನವಲ್ಸೆಗೆ ಬಂದಿರುವ ಹೂವಿ ಕೊರಳಲ್ಲಿ ಮಾಂಗಲ್ಯ ಇಲ್ಲದೆ ಇರುವುದನ್ನು ಕಂಡು ಶಾಕ್ ಆಗಿದ್ದಾಳೆ. ಊರಿಗೆ ಕೇಳಿಸುವಷ್ಟು ಜೋರಾಗಿ ಕಿರುಚಿ ಹೇಳುತ್ತಿರುವ ಕಾಳಿ, ಹೇ ಗೌರ ಬಾರೇ.. ನಿನ್ನ ಮಗಳೂ ಏನೋ ಸಮಸ್ಯೆ ಮಾಡಿಕೊಂಡು ಬಂದಿದ್ದಾಳೆ ಎಂದಿದ್ದಾಳೆ.

  Comedy Khiladigalu 4: ಅರ್ಜುನ್ ಜನ್ಯಾ ಮಾತು ಕೇಳಿ ಗಳಗಳನೇ ಕಣ್ಣೀರಿಟ್ಟ ಅನುಶ್ರೀ..!Comedy Khiladigalu 4: ಅರ್ಜುನ್ ಜನ್ಯಾ ಮಾತು ಕೇಳಿ ಗಳಗಳನೇ ಕಣ್ಣೀರಿಟ್ಟ ಅನುಶ್ರೀ..!

  ಹೂವಿಯ ಜೊತೆಗಿದ್ದಾಳೆ ದೀಪ್ತಿ

  ಹೂವಿಯ ಜೊತೆಗಿದ್ದಾಳೆ ದೀಪ್ತಿ

  ಮುಸ್ಲಿ ಆ ರೀತಿ ಕಿರುಚಾಡಿಕೊಂಡು ಹೋಗಿದ್ದನ್ನು ಕಂಡ ಹೂವಿ ಭಯಗೊಂಡಿದ್ದಾಳೆ. ಈ ಮುಸ್ಲಿ ಇನ್ನೇನು ಸಮಸ್ಯೆ ಮಾಡುತ್ತಾಳೋ ಅಂತ ಹೆದರಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ದೀಪ್ತಿ ಮತ್ತು ರಾಹುಲ್ ಬಂದಿದ್ದಾರೆ. ರಾಹುಲ್, ಹೂವಿಯನ್ನು ಏನಾಯಿತು ಎಂದು ಸಮಸ್ಯೆ ಬಗ್ಗೆ ಕೇಳಿದ್ದಾನೆ. ಅದಕ್ಕೆ ಹೂವಿ ಮುಸ್ಲಿಗೆ ನನ್ನ ಕೊರಳಲ್ಲಿ ತಾಳಿ ಇಲ್ಲದೆ ಇರುವುದು ಗೊತ್ತಾಗಿದೆ. ಈಗ ಅಮ್ಮು ಬಳಿ ಹೋಗಿ ಏನು ಹೇಳುತ್ತಾಳೋ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾಳೆ. ಅಲ್ಲಿಂದ ಹೊರ ನಡೆದ ದೀಪ್ತಿ ತಾಳಿಯನ್ನು ತಂದು ಕಟ್ಟು ಎಂದು ಹೇಳಿದ್ದಾಳೆ. ಹೂವಿಗೆ ಧೈರ್ಯ ತುಂಬಿದ್ದಾಳೆ. ನಾನು ನಿನ್ನ ಜೊತೆಗಿರುತ್ತೀನಿ ಎಂದು ಹೇಳಿದ್ದಾಳೆ.

  ದೀಪ್ತಿಯ ಸಹಾಯದಿಂದ ಸರಿಯಾಗುತ್ತಾ ಇಬ್ಬರ ಜೀವನ?

  ದೀಪ್ತಿಯ ಸಹಾಯದಿಂದ ಸರಿಯಾಗುತ್ತಾ ಇಬ್ಬರ ಜೀವನ?

  ದೀಪ್ತಿಯ ಮುಂದೆ ಹೂವಿ ತಾಳಿ ವಿಚಾರ ಮಾತನಾಡಿದ್ದು, ರಾಹುಲ್‌ಗೆ ಶಾಕ್ ಆಗಿದೆ. ದೀಪ್ತಿ ಮುಂದೆ ಈ ರೀತಿಯೆಲ್ಲಾ ಮಾತನಾಡುತ್ತಾರಾ ಏನಾಗಿದೆ ನಿನಗೆ ಎಂದಾಗ ಹೂವಿ ಸತ್ಯ ಹೇಳುತ್ತಾಳೆ. ದೀಪ್ತಿಗೆ ಎಲ್ಲವೂ ಗೊತ್ತು. ನನ್ನ ನಿಮ್ಮ ಮದುವೆಯಾಗಿರುವುದು ತಿಳಿದಿದೆ ಎಂದಿದ್ದಾಳೆ. ಹೇಗೆ, ಯಾವಾಗ ಎಂದಾಗ. ಎಲ್ಲವೂ ಬೆಂಗಳೂರಿನಲ್ಲಿಯೇ ಗೊತ್ತಾಗಿದೆ ಎನ್ನುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬಂದ ದೀಪ್ತಿಗೆ ರಾಹುಲ್ ನಡೆದ ಘಟನೆಯನ್ನು ಮತ್ತೊಮ್ಮೆ ವಿವರಿಸಲು ಹೋಗುತ್ತಾನೆ. ಆಗ ದೀಪ್ತಿ ನನಗೆ ಎಲ್ಲಾ ಗೊತ್ತಿದೆ. ಆದರೆ ಇಂಥ ಸಂದರ್ಭದಲ್ಲಿ ನೀನು ಹೂವಿ ಜೊತೆಗಿರಬೇಕು. ಗಂಡನಾದವನ ಧರ್ಮ. ಮೊದಲು ತಾಳಿ ಕಟ್ಟು ಎಂದು ಕಟ್ಟಿಸುತ್ತಾಳೆ.

  ರಾಹುಲ್ & ಹೂವಿ ಮದುವೆ ಗುಟ್ಟು ರಟ್ಟಾಗುತ್ತಾ..?

  ರಾಹುಲ್ & ಹೂವಿ ಮದುವೆ ಗುಟ್ಟು ರಟ್ಟಾಗುತ್ತಾ..?

  ಈಗಾಗಲೇ ಹೂವಿ ಮತ್ತು ರಾಹುಲ್ ಮದುವೆ ಎರಡು ಬಾರಿ ಚನ್ನವಲ್ಸೆಯಲ್ಲಿಯೇ ಆಗಿದೆ. ಈಗ ತಾಳಿ ಇಲ್ಲ ಎಂದು ಜಗಳ ತೆಗೆದ ಮುಸ್ಲಿಯಿಂದ ತಪ್ಪಿಸಿಕೊಳ್ಳಲು ರಾಹುಲ್ ಹೂವಿಗೆ ಮತ್ತೊಮ್ಮೆ ತಾಳಿ ಕಟ್ಟಿದ್ದಾನೆ. ಇನ್ನೇನು ಗಂಟು ಹಾಕಬೇಕು ಅಷ್ಟರಲ್ಲಿ ಮಾಲಿನಿ ಅದೇ ಜಾಗಕ್ಕೆ ಬರುತ್ತಿದ್ದಾಳೆ. ಅದನ್ನು ಕಂಡ ದೀಪ್ತಿ, ಮಾಲಿನಿ ಬರುತ್ತಿದ್ದಾಳೆ. ಬೇಗ ಕಟ್ಟು ರಾಹುಲ್ ಎಂದು ಎಚ್ಚರಿಕೆ ನೀಡಿದ್ದಾಳೆ. ಮಾಲಿನಿ, ಹೂವಿ ಕೊರಳಲ್ಲಿ ಇರುವ ದಾರ ನೋಡಿದರು ಅದನ್ನು ಹೊರ ಹಾಕುವ ತನಕ ಸಮಾಧಾನವಿರುವುದಿಲ್ಲ ಅವಳಿಗೆ. ಸತ್ಯ ಇಲ್ಲಿಯೇ ಬಯಲಾಗುವುದಂತು ಗ್ಯಾರಂಟಿಯಾಗಿದೆ.

  English summary
  Bettada Hoo Serial October 10th Episode Written Update. Here is the details.
  Monday, October 10, 2022, 23:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X