Don't Miss!
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- News
Bill Pending: ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ: ಕೆಸಿ ಜನರಲ್ ಆಸ್ಪತ್ರೆಗೆ ಬೆಸ್ಕಾಂ ನೋಟಿಸ್
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೆಟ್ಟದ ಹೂ: ರಾಹುಲ್ ಬದಲಾವಣೆ ಕಂಡು ಹೂವಿಗೆ ಆಶ್ಚರ್ಯ: ಮುಂದೇನು?
'ಬೆಟ್ಡದ ಹೂ' ಧಾರಾವಾಹಿಯಲ್ಲಿ ಹೊಸದೊಂದು ಪ್ರೀತಿ, ಪ್ರೇಮವೊಂದು ಶುರುವಾಗಿದೆ. ಅದು ರಾಹುಲ್ ಮತ್ತು ಹೂವಿ ನಡುವೆ. ರಾಹುಲ್ ಅದಾಗಲೇ ಹೂವಿಯನ್ನು ಮದುವೆಯಾಗಿದ್ದೇನೆ ಎಂದು ಗೊತ್ತಿದ್ದರು, ಮಾಲಿನಿಯ ಬದುಕಲ್ಲೂ ಪ್ರವೇಶ ಪಡೆದಿದ್ದಾನೆ. ಆದರೆ ಈಗ ಪರಿಸ್ಥಿತಿ ಹೇಗಿದೆ ಎಂದರೆ ಅತ್ತ ಮಾಲಿನಿ ಜೊತೆ ಇರುವುದಕ್ಕೂ ಆಗುತ್ತಿಲ್ಲ. ಇತ್ತ ಹೂವಿ ಮೇಲೆ ಚಿಗುರುತ್ತಿರುವ ಪ್ರೀತಿಯನ್ನು ಮರೆಮಾಚಲು ಆಗುತ್ತಿಲ್ಲ.
ಇದಕ್ಕಾಗಿಯೇ ರಾಹುಲ್ ನೇರವಾಗಿ ಚನ್ನವಲ್ಸೆಗೆ ಬಂದಿದ್ದಾನೆ. ಮನೆಯವರ ಬಳಿ ಚೆನ್ನೈಗೆ ಹೋಗುತ್ತೇನೆಂದ ರಾಹುಲ್ ಬಂದಿದ್ದು ಮಾತ್ರ ಚನ್ನವಲ್ಸೆಗೆ. ರಾಹುಲ್‌ನನ್ನು ಕಂಡ ಹೂವಿಗೆ ನಂಬಲಾರದಷ್ಟು ಶಾಕ್ ಆಗಿದೆ.
ಆದರೆ ಅಷ್ಟೇ ನಿಷ್ಠುರತೆಯಿಂದಾನೆ ಮಾತಾಡಿದ್ದಾಳೆ. ಇಲ್ಲಿಂದ ಹೊರಡಿ ಎಂದೆ ಹೇಳಿದ್ದಾಳೆ. ಆದರೆ ಇದ್ಯಾವುದಕ್ಕೂ ಬೇಸರ ಮಾಡಿಕೊಳ್ಳದೆ, ರಾಹುಲ್ ಹೂವಿಯನ್ನು ಕರೆದುಕೊಂಡು ಹೋಗಬೇಕೆಂಬ ಹಠ ತೊಟ್ಟಿದ್ದಾನೆ.

ಅಳಿಯನ ಆಗಮನದಿಂದ ಗೌರಗೆ ಸಂತಸ
ಹೂವಿ ಚನ್ನವಲ್ಸೆಗೆ ಬಂದಾಗಿನಿಂದ ಮನಸ್ಸಲ್ಲಿ ತಳಮಳ ಶುರುವಾಗಿದೆ. ಅದರಲ್ಲೂ ಹೂವಿ ಅಜ್ಜಿಗಂತು ಇನ್ನಿಲ್ಲದ ಕೋಪ ತಾಪ ಬಂದಿದೆ. ಅದನ್ನು ಆಗಾಗ ತೋರಿಸಿಕೊಳ್ಳುತ್ತಲೆ ಇದ್ದಾಳೆ. ಹೂವಿ ಗಂಡನನ್ನು ಬಿಟ್ಟು ಬಂದಿರಬೇಕೆಂದೆ ಅನುಮಾನ ವ್ಯಕ್ತಪಡಿಸಿದ್ದಾಳೆ. ಆದರೆ ಹೂವಿ ಮಾತ್ರ ಯಾವುದೇ ಸತ್ಯ ಹೇಳದೆ ಮುಚ್ಚಿಟ್ಟಿದ್ದಾಳೆ. ರಾಹುಲ್ ಆಗಮನ ಕಂಡು ಗೌರ ಖುಷಿಪಟ್ಟಿದ್ದಾಳೆ. ಮಗಳ ಬಂದ ಹಿಂದೆನೇ ಅಳಿಯ ಬಂದದ್ದು ಕಂಡು ಗೌರನ ಮನಸ್ಸು ತಣ್ಣಗಾಗಿದೆ, ಖುಷಿ ಹೆಚ್ಚಾಗಿದೆ.

ಹೂವಿ ಮನಸ್ಸು ವಾಲುತ್ತಿದೆ
ಇದ್ದವರ ಬೆಲೆ ದೂರಾದ ಮೇಲೆ ಗೊತ್ತಾಗುವುದು ಎಂಬುದು ಅನುಭವಸ್ಥರ ಮಾತು. ಅದೇ ಈಗ ರಾಹುಲ್ ಮನಸ್ಸಿನಲ್ಲಿಯೂ ಆಗುತ್ತಿರುವ ಬದಲಾವಣೆ. ಹೂವಿ ಜೊತೆಯಲ್ಲಿಯೆ ಇದ್ದಾಗ ಅಷ್ಟಾಗಿ ಹೂವಿಯ ಮನದ ಬಡಿತ ರಾಹುಲ್‌ಗೆ ಟಚ್ ಆಗಲೇ ಇಲ್ಲ. ಆದರೆ ಹೂವಿ ಅದ್ಯಾವಾಗ ನನ್ನ ನಿಮ್ಮ ಸಂಬಂಧ ಮುಗಿದೇ ಹೋಯಿತು ಎಂದು ದೂರ ಬಂದು ಬಿಟ್ಟಳೋ, ರಾಹುಲ್ ಮನಸ್ಸು ಚಡಪಡಿಸುವುದಕ್ಕೆ ಶುರು ಮಾಡಿದೆ. ಹೂವಿಯನ್ನು ನೋಡಲೇಬೇಕೆಂದು ಹೊರಟಿದ್ದಾನೆ. ಆಗಾಗ ಬುದ್ದಿ ನೀನು ಯಾಕೆ ಈ ರೀತಿ ಮಾಡುತ್ತಿದ್ದೀಯಾ ರಾಹುಲ್ ಎಂದರೆ ಮನಸ್ಸು ಮಾತ್ರ ನೀನು ಈಗ ಮಾಡುತ್ತಿರುವುದೇ ಸರಿ. ಹೂವಿ ಪ್ರೀತಿಗೆ ನ್ಯಾಯ ಕೊಡು ಎನ್ನುತ್ತಿದೆ. ಸದ್ಯಕ್ಕೆ ರಾಹುಲ್ ಮನಸಿನ ಮಾತನ್ನೇ ಕೇಳಿ ಹೊರಟಿದ್ದಾನೆ.

ಹೂವಿ ಆಯಸ್ಸಿಗಾಗಿ ರಾಹುಲ್ ಹಾರೈಕೆ
ನಮ್ಮ ಮನೆ ಹಿರಿಯರನ್ನು ಕೇಳಿದರೆ, ಗಂಡ ತಿಂದ ತಟ್ಟೆಯಲ್ಲಿ ಹೆಂಡತಿ ತಿಂದರೆ ಒಳ್ಳೆಯದು ಎನ್ನುತ್ತಾರೆ. ಹಾಗೇ ಆ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಹೂವಿ ಮನೆಯಲ್ಲಿಯೂ ಆ ಪದ್ಧತಿಯನ್ನು ಸಾರಿ ಸಾರಿ ಹೇಳುತ್ತಾರೆ. ರಾಹುಲ್‌ಗೆ ಹಾಕಿದ ಒಂದು ರೊಟ್ಟಿಯಲ್ಲಿ ಅರ್ಧ ರೊಟ್ಟಿ ತಿನ್ನುವಾಗಲೇ ಸಾಕಾಯಿತು. ಉಳಿದ ಅರ್ಧ ರೊಟ್ಟಿಯನ್ನು ಹೂವಿಗೆ ತಿನ್ನಲು ಗೌರ ಹೇಳಿದಳು. ಅದಕ್ಕೆ ಕಾರಣ ಗಂಡ ಬಿಟ್ಟ ತಟ್ಟೆಯಲ್ಲಿ ಊಟ ಮಾಡಿದರೆ ಗಂಡನ ಆಯಸ್ಸು ಹೆಚ್ಚಾಗುತ್ತದೆ ಎಂಬುದು. ಇದಕ್ಕೆ ರಾಹುಲ್ ಸಂಪೂರ್ಣ ಒಪ್ಪಿಗೆ ಕೂಡ ಇದೆ. ನಿನ್ನ ಆಯಸ್ಸು ಹೆಚ್ಚಾಗುತ್ತದೆ ಎಂದರೆ ನಾನು ನಿನ್ನ ಎಂಜಲು ತಿನ್ನುತ್ತೇನೆ ಎಂದು ಆಶ್ಚರ್ಯ ಉಂಟು ಮಾಡಿದ್ದಾನೆ.
ಗೌರಗೆ ಮತ್ತೊಮ್ಮೆ ಮನಸ್ಸಾಗಿದೆಯಾ
ಗೌರ ಮತ್ತು ಹೂವಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಾತ ಹುಲಿಯಪ್ಪ. ಗೌತಮ್ ಗೌರನ ಪ್ರೀತಿಯಲ್ಲಿ ಬಿದ್ದು, ಪ್ರೀತಿಯ ಕಾಣಿಕೆಯಾಗಿ ಹೂವಿ ಹುಟ್ಟಿದ ಮೇಲೆ ಗೌತಮ್ ಮತ್ತೆ ಗೌರನನ್ನು ನೋಡಲು ಕೂಡ ಆಗಲಿಲ್ಲ. ಈ ಮಧ್ಯೆ ಹುಲಿಯಾನೆ ಗೌರ ಮತ್ತು ಹೂವಿಯನ್ನು ನೋಡಿಕೊಳ್ಳುತ್ತಿದ್ದಾನೆ. ಆದರೆ ಗೌರನಿಗೆ ಹುಲಿಯಾನ ಮೇಲಿದ್ದ ಭಾವನೆಯನ್ನು ರಾಹುಲ್ ಕೆಣಕಿದ್ದಾನೆ. ನೀವ್ಯಾಕೆ ಹುಲಿಯಾನ ಹೆಸರೇಳಿದರೆ ಇಷ್ಟೊಂದು ನಾಚಿಕೆ ಪಟ್ಟುಕೊಳ್ತೀರಾ ಎಂದು.