»   » ನಟಿ ಭಾರತಿ ಪಟ್ಟ ಶ್ರಮದ ಮುಂದೆ ಈಗಿನ ನಟಿಯರದ್ದೇನೂ ಇಲ್ಲ ಬಿಡಿ.!

ನಟಿ ಭಾರತಿ ಪಟ್ಟ ಶ್ರಮದ ಮುಂದೆ ಈಗಿನ ನಟಿಯರದ್ದೇನೂ ಇಲ್ಲ ಬಿಡಿ.!

Posted By:
Subscribe to Filmibeat Kannada

1966 ರಲ್ಲಿ ತಮ್ಮ ಹದಿನೈದನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಭಾರತಿ ವಿಷ್ಣುವರ್ಧನ್... ನೋಡ ನೋಡುತ್ತಿದ್ದಂತೆಯೇ ಸಿಕ್ಕಾಪಟ್ಟೆ ಬಿಜಿಯಾಗ್ಬಿಟ್ಟರು. ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು, ಹಿಂದಿ ಭಾಷೆಯ ಚಿತ್ರಗಳಲ್ಲೂ ನಟಿಸಲು ಶುರು ಮಾಡಿದ ನಟಿ ಭಾರತಿ ರವರಿಗೆ ಅಕ್ಷರಶಃ ಪುರುಸೊತ್ತೇ ಇರಲಿಲ್ಲ.

ಅಂದಿನ ಕಾಲಕ್ಕೆ ನಟಿ ಭಾರತಿ ರವರ ಶೆಡ್ಯೂಲ್ ಹೇಗಿತ್ತು ಅಂದ್ರೆ... ಬೆಳಗ್ಗೆ 7 ಗಂಟೆಯಿಂದ 1 ಗಂಟೆವರೆಗೆ ಒಂದು ಚಿತ್ರಕ್ಕೆ ಕಾಲ್ ಶೀಟ್, ಮಧ್ಯಾಹ್ನ 6-10 ಗಂಟೆವರೆಗೆ ಇನ್ನೊಂದು ಚಿತ್ರದಲ್ಲಿ ಅಭಿನಯ. ರಾತ್ರಿ 10 ರಿಂದ ಮುಂಜಾನೆ 5 ಗಂಟೆವರೆಗೆ ಮತ್ತೊಂದು ಚಿತ್ರದಲ್ಲಿ ನಟನೆ... ಹೀಗೆ ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದ ನಟಿ ಭಾರತಿ ಊಟದ ವಿರಾಮದಲ್ಲಿ ನಿದ್ದೆ ಮಾಡುತ್ತಿದ್ದರಂತೆ. ಲೈಟಿಂಗ್ ಅರೇಂಜ್ಮೆಂಟ್ ಗ್ಯಾಪ್ ನಲ್ಲಿ ಊಟ-ತಿಂಡಿ ಮುಗಿಸುತ್ತಿದ್ದರಂತೆ. [ನಟಿ ಭಾರತಿ ವಿಷ್ಣುವರ್ಧನ್ ರವರಿಗೆ ನನಸಾಗದ ಒಲಿಂಪಿಕ್ಸ್ ಕನಸು]

Bharathi Vishnuvardhan should be role model for young Actresses

ವೃತ್ತಿ ಜೀವನದಲ್ಲಿ ಹೀಗೆ ಕಷ್ಟ ಪಟ್ಟ ನಟಿ ಭಾರತಿ ರವರ ಶ್ರಮಕ್ಕೆ ತಕ್ಕ ಪ್ರತಿಫಲವೂ ಸಿಕ್ಕಿದೆ. ಚಿತ್ರರಂಗಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ನಟಿ ಭಾರತಿ ರವರಿಗೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳು ಲಭಿಸಿದೆ. ಚಿತ್ರರಂಗದಲ್ಲಿ ನಟಿ ಭಾರತಿ ಸಲ್ಲಿಸಿರುವ ಸೇವೆಗೆ ಪದ್ಮಶ್ರೀ ಗೌರವ ಕೂಡ ಸಂದಿದೆ.

''ನಾಯಕ ನಟಿಯರು ಹೇಳಿದ ಟೈಮ್ ಗೆ ಸರಿಯಾಗಿ ಬರಲ್ಲ'' ಅಂತ ಗೊಣಗುವ ಎಷ್ಟೋ ನಿರ್ಮಾಪಕರು, ನಿರ್ದೇಶಕರು ಈಗ ಇದ್ದಾರೆ. ಅಂತಹ ಮಾರ್ಡನ್ ನಟಿಮಣಿಯರಿಗೆಲ್ಲ ನಟಿ ಭಾರತಿ ವಿಷ್ಣುವರ್ಧನ್ ರೋಲ್ ಮಾಡೆಲ್ ಆದರೆ ಒಳಿತು..!

English summary
Kannada Actress Bharathi Vishnuvardhan should be role model for young Actresses.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada