For Quick Alerts
  ALLOW NOTIFICATIONS  
  For Daily Alerts

  ಉದಯ ಟಿವಿಯಲ್ಲಿ 'ಸೇವಂತಿ': ಕಿರುತೆರೆಯಲ್ಲಿ ಮತ್ತೆ ಭಾರತಿ ವಿಷ್ಣುವರ್ಧನ್

  |

  ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ಇಪ್ಪತ್ತೈದು ಯಶಸ್ವಿ ವರ್ಷಗಳನ್ನು ಸದ್ಯದಲ್ಲಿಯೇ ಪೂರೈಸುತ್ತಿರುವ ಉದಯ ಟಿವಿ ವಿಭಿನ್ನ ಧಾರಾವಾಹಿಗಳಿಂದಲೇ ಮನೆಮಾತಾಗಿದೆ. ಒಂದಕ್ಕಿಂತ ಒಂದು ವಿಭಿನ್ನ ಕಥೆಗಳನ್ನು ಕನ್ನಡದ ವೀಕ್ಷಕರಿಗೆ ನೀಡಿದೆ. ಈ ಸಾಲಿನಲ್ಲಿ ಈಗ ಹೊಸ ಸೇರ್ಪಡೆ 'ಸೇವಂತಿ'.

  ಕನ್ನಡದ ಮನರಂಜನಾ ವಾಹಿನಿಗಳ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ. ಹೊಸ ತಂತ್ರಜ್ಞಾನ, ವಿನೂತನ ಕಥಾ ಹಂದರ, ನವಿರಾದ ನಿರೂಪಣೆ ಎಲ್ಲವನ್ನೂ ಒಳಗೊಂಡು ಕನ್ನಡದ ವೀಕ್ಷಕರಿಗೆ ಹೊಸ ಧಾರಾವಾಹಿಯನ್ನು ಉಣ ಬಡಿಸಲು ಸಿದ್ಧತೆ ನಡೆಸಿದೆ ಉದಯ ಟಿವಿ.

  'ಸೇವಂತಿ' ಎಂಬ ಈ ಸುಂದರ ಧಾರಾವಾಹಿ ಫೆಬ್ರವರಿ 25 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ವಿಶೇಷ ಅಂದ್ರೆ ಇದೇ ಧಾರಾವಾಹಿಯಲ್ಲಿ ಭಾರತಿ ವಿಷ್ಣುವರ್ಧನ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಮುಂದೆ ಓದಿರಿ...

  'ಸೇವಂತಿ' ಕಥಾಹಂದರ

  'ಸೇವಂತಿ' ಕಥಾಹಂದರ

  ಒಂದಾಗಬೇಕೆಂದುಕೊಂಡಾಗ ದೂರವಾಗುವ, ದೂರವಾಗಬೇಕೆಂದುಕೊಂಡಾಗ ಒಂದಾಗಲು ಬಯಸುವ ಹುಡುಗಿಯ ಕಥೆ ‘ಸೇವಂತಿ' - ಒಂದು ದೃಶ್ಯ ವೈಭವವಾಗಿ ವೀಕ್ಷಕರ ಮುಂದೆ ಬರಲಿದೆ.

  ಸುವರ್ಣ ಧಾರಾವಾಹಿಯಲ್ಲಿ ಅನ್ನಪೂರ್ಣೆಯಾಗಿ ಭಾರತಿ

  ಸೀರಿಯಲ್ ಹೀರೋ-ಹೀರೋಯಿನ್

  ಸೀರಿಯಲ್ ಹೀರೋ-ಹೀರೋಯಿನ್

  ಚೆಂದುಳ್ಳಿ ಚೆಲುವೆ ನಟಿ ಪಲ್ಲವಿ ಗೌಡ 'ಸೇವಂತಿ' ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇವರ ಜೋಡಿಯಾಗಿ ಹ್ಯಾಂಡ್ಸಮ್ ಶಿಶಿರ್ ಅವರು ನಾಯಕ ಅರ್ಜುನ್ ಆಗಿ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.

  ಅದ್ಧೂರಿ ಸೆಟ್ ನಲ್ಲಿ 'ಮಾನಸ ಸರೋವರ' ಚಿತ್ರೀಕರಣ: 250 ಸಂಚಿಕೆಗಳನ್ನು ಪೂರೈಸಿದ ಧಾರಾವಾಹಿ

  ಮತ್ತೆ ಕಿರುತೆರೆ ಕಡೆಗೆ ಭಾರತಿ ವಿಷ್ಣುವರ್ಧನ್

  ಮತ್ತೆ ಕಿರುತೆರೆ ಕಡೆಗೆ ಭಾರತಿ ವಿಷ್ಣುವರ್ಧನ್

  ಈ ಹಿಂದೆ 'ಭಾಗ್ಯವಂತರು', 'ಜನನಿ' ಧಾರಾವಾಹಿಗಳಲ್ಲಿ ನಟಿಸಿದ್ದ ಭಾರತಿ ವಿಷ್ಣುವರ್ಧನ್ ಇದೀಗ ಬಹಳ ದಿನಗಳ ನಂತರ ಮತ್ತೆ ಕಿರುತೆರೆಗೆ ಆಗಮಿಸುತ್ತಿದ್ದಾರೆ. 'ಸೇವಂತಿ' ಸೀರಿಯಲ್ ನಲ್ಲಿ ನಟಿ ಭಾರತಿ ವಿಷ್ಣುವರ್ಧನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

  ಕನ್ನಡ ಕಿರುತೆರೆಯಲ್ಲಿ ರಾಧಿಕಾ ಶರತ್ ಕುಮಾರ್: ಉದಯ ಟಿವಿಯಲ್ಲಿ ಹೊಸ ಸೀರಿಯಲ್ 'ಚಂದ್ರಕುಮಾರಿ'

  ಡೈರೆಕ್ಟರ್ ಯಾರು.?

  ಡೈರೆಕ್ಟರ್ ಯಾರು.?

  ಪ್ರಸಿದ್ಧ ನಿರ್ಮಾಣ ಸಂಸ್ಥೆ ಸರೆಗಮ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಮಂಜುನಾಥ್ ಭಟ್, ಹಂಸ, ಮೈಕೋ ಶಿವು, ಕೃಷ್ಣ ಅಡಿಗ, ಸಂಗೀತ, ಗಿರೀಶ್ 'ಸೇವಂತಿ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

  English summary
  Kannada Actress Bharathi Vishnuvardhan to play main role in Udaya TV's 'Sevanthi' serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X