Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ಬಿಗ್‌ಬಾಸ್ ಗೆದ್ದವರಿಗೆ ಸಿಗಲಿರುವ ಹಣವೆಷ್ಟು?
ಬಿಗ್‌ಬಾಸ್ ಕನ್ನಡ ಸೀಸನ್ 09 ಕೆಲವೇ ಗಂಟೆಗಳಲ್ಲಿ ಕೊನೆಗೊಳ್ಳಲಿದೆ. ಗ್ರ್ಯಾಂಡ್ ಫಿನಾಲೆಯ ಎರಡನೇ ದಿನದ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಕೆಲವೇ ಗಂಟೆಗಳಲ್ಲಿ ಸುದೀಪ್ ಅವರು ವಿನ್ನರ್ ಅನ್ನು ಘೋಷಿಸಲಿದ್ದಾರೆ.
ಪ್ರಸ್ತುತ ಬಿಗ್‌ಬಾಸ್ ಮನೆಯಲ್ಲಿ ರಾಕೇಶ್ ಅಡಿಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ ಅವರುಗಳಿದ್ದಾರೆ. ಇವರುಗಳಲ್ಲಿ ಒಬ್ಬರು ಬಿಗ್‌ಬಾಸ್ ಕನ್ನಡ ಸೀಸನ್ 09 ರ ವಿನ್ನರ್ ಆಗಲಿದ್ದಾರೆ.
ಬಿಗ್‌ಬಾಸ್ ರಿಯಾಲಿಟಿ ಶೋ ಗೆಲುವು ಸ್ಪರ್ಧಿಗಳಿಗೆ ಬಹಳ ಮಹತ್ವದ್ದು, ಬಿಗ್‌ಬಾಸ್ ವಿನ್ನರ್ ಎನಿಸಿಕೊಂಡರೆ ಮನೊರಂಜನಾ ಕ್ಷೇತ್ರದಲ್ಲಿ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ. ಅದರ ಜೊತೆಗೆ ದೊಡ್ಡ ಮೊತ್ತದ ಬಹುಮಾನ ಮೊತ್ತವೂ ಸಹ ವಿನ್ನರ್‌ಗೆ ಸಿಗುತ್ತದೆ.
ಈ ಬಾರಿ ಬಿಗ್‌ಬಾಸ್ ಗೆದ್ದವರಿಗೂ ಸಹ ದೊಡ್ಡ ಮೊತ್ತದ ಹಣ ಬಹುಮಾನವಾಗಿ ಸಿಗಲಿದೆ. ಗೆದ್ದವರಿಗೆ ನೀಡಲಾಗುವ ಬಹುಮಾನ ಎಷ್ಟೆಂದು ಸ್ವತಃ ಸುದೀಪ್ ಅವರೇ ಇಂದಿನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಬಿಗ್‌ಬಾಸ್ ಗೆದ್ದವರಿಗೆ ಟ್ರೋಫಿಯ ಜೊತೆಗೆ 50 ಲಕ್ಷ ರುಪಾಯಿ ನಗದನ್ನು ಆಯೋಜಕರು ನೀಡುತ್ತಾರೆ. ಇದರ ಜೊತೆಗೆ ಬ್ರ್ಯಾಂಡ್ ಒಂದು 10 ಲಕ್ಷ ರು ನಗದು ಬಹುಮಾನವನ್ನು ನೀಡುತ್ತದೆ. ಅಲ್ಲಿಗೆ ಗೆದ್ದವರಿಗೆ ಬರೋಬ್ಬರಿ 60 ಲಕ್ಷ ರುಪಾಯಿ ಹಣ ಸಿಗಲಿದೆ.
ಗೆದ್ದವರಿಗೆ 60 ಲಕ್ಷ ರುಪಾಯಿ ಹಣವಿ ಗೆದ್ದವರಿಗೆ ಸಿಗಲಿದೆ ಎಂದು ಸುದೀಪ್ ಬಿಗ್‌ಬಾಸ್ ಮನೆಯಲ್ಲಿ ಉಳಿದಿರುವ ಫೈನಲಿಸ್ಟ್‌ಗಳಿಗೆ ಹೇಳಿ, ಅವರ ಮೊದಲನೇ ಸಂಬಳದ ಬಗ್ಗೆಯೂ ಕೇಳಿದರು.
ರೂಪೇಶ್ ರಾಜಣ್ಣ, ಆರ್ಕೆಸ್ಟ್ರಾದಲ್ಲಿ ಹಾಡಿ ಗಳಿಸಿದ ನೂರು ರುಪಾಯಿ ಮೊದಲ ಸಂಬಳವೆಂದು, ದೀಪಿಕಾ ದಾಸ್, ಧಾರಾವಾಹಿಯಲ್ಲಿ ನಟಿಸಿ ಬಂದ ಎರಡು ಸಾವಿರ ರುಪಾಯಿ ತಮ್ಮ ಮೊದಲ ಸಂಬಂಳವೆಂದರು. ರೂಪೇಶ್ ಶೆಟ್ಟಿ, ನಾನು ಕ್ರಿಕೆಟ್ ಕಾಮೆಂಟ್ರಿ ಮಾಡಿ 120 ರುಪಾಯಿ ಗಳಿಸಿದ್ದೆ ಎಂದರು. ಬಳಿಕ ರಾಕೇಶ್ ಅಡಿಗ, ನಾನು ಮಿಮಿಕ್ರಿ ಮಾಡಿದ್ದಕ್ಕೆ ಐದುನೂರು ರುಪಾಯಿ ಕೊಟ್ಟಿದ್ದರು ಎಂದರು. ಅರವತ್ತು ಲಕ್ಷ ರುಪಾಯಿ ಗೆಲ್ಲುವ ಸನಿಹದಲ್ಲಿರುವವರು ತಮ್ಮ ಮೊದಲ ಸಂಬಳವನ್ನು ನೆನಪು ಮಾಡಿಕೊಂಡರು.