For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಮನೆ ಸದಸ್ಯರಿಗೆ ಅರಣ್ಯವಾಸ, ಮನೆಗೆ ಎಂಟ್ರಿ ಕೊಟ್ಟ ಹೊಸ ಸ್ಪರ್ಧಿ! ಯಾರದು?

  |

  ಬಿಗ್‌ಬಾಸ್ ಕನ್ನಡ ಸೀಸನ್ 09 ಶುರುವಾಗಿ ಏಳು ವಾರಗಳು ಕಳೆದಿವೆ. ಈ ವರೆಗೆ ಏಳು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಇನ್ನು 11 ಸ್ಪರ್ಧಿಗಳು ಮನೆಯ ಒಳಗಿದ್ದಾರೆ. ಇವರಲ್ಲಿ ಒಬ್ಬರು ಅಂತಿಮ ಸ್ಪರ್ಧಿಯಾಗಿ ಆಯ್ಕೆ ಆಗಲಿದ್ದಾರೆ.

  ವಾರಗಳು ಕಳೆದಂತೆ ಮನೆಯಲ್ಲಿ ಟಾಸ್ಕ್‌ಗಳು ಕಠಿಣವಾಗುತ್ತಾ ಸಾಗುತ್ತಿವೆ. ಒಳ್ಳೆಯ ಸ್ಪರ್ಧಿಗಳು ಎಂದುಕೊಂಡಿದ್ದವರು ಸಹ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ.

  BBK9: ಸ್ವಾರ್ಥಿ ಎಂದಿದ್ದೇ ತಪ್ಪಾಗಿದೆ: ಆರ್ಯವರ್ಧನ್, ರೂಪೇಶ್ ರಾಜಣ್ಣ ಫುಲ್ ಸ್ಕೆಚ್! BBK9: ಸ್ವಾರ್ಥಿ ಎಂದಿದ್ದೇ ತಪ್ಪಾಗಿದೆ: ಆರ್ಯವರ್ಧನ್, ರೂಪೇಶ್ ರಾಜಣ್ಣ ಫುಲ್ ಸ್ಕೆಚ್!

  ಮನೆಯ ಗಟ್ಟಿ ಸ್ಪರ್ಧಿ ಎಂದುಕೊಂಡಿದ್ದ ದೀಪಿಕಾ ದಾಸ್ ಕಳೆದ ವಾರ ಮನೆಯಿಂದ ಹೊರಗೆ ಹೋದರು. ಇದು ಸುದೀಪ್‌ಗೆ ಸಹ ಬೇಸರ ಮೂಡಿಸಿತ್ತು. ಆದರೆ ಇಂದು ಬಿಗ್‌ಬಾಸ್‌ ಮನೆಗೆ ಹೊಸ ಸ್ಪರ್ಧಿಯೊಬ್ಬರ ಆಗಮನವಾಗಿದೆ!

  ಹೌದು, ಬಿಗ್‌ಬಾಸ್‌ನ ಪ್ರೋಮೋ ಪ್ರಕಾರ ಬಿಗ್‌ಬಾಸ್ ಮನೆಗೆ ಹೊಸ ಸ್ಪರ್ಧಿಯೊಬ್ಬರು ಬಂದಿದ್ದಾರೆ. ಆದರೆ ಇದೀಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಆ ಸ್ಪರ್ಧಿ ಯಾರು ಎಂಬುದು ತೋರಿಸಲಾಗಿಲ್ಲ. ಆದರೆ ಕೆಲವು ಊಹೆಗಳ ಪ್ರಕಾರ ಈ ಸ್ಪರ್ಧಿ ಕಳೆದ ವಾರ ಎಲಿಮಿನೇಟ್ ಆದ ದೀಪಿಕಾ ದಾಸ್ ಅವರೇ ಎನ್ನಲಾಗುತ್ತಿದೆ.

  ಸ್ಪರ್ಧಿಗಳಿಗೆ ಹೊಸ ಟಾಸ್ಕ್

  ಸ್ಪರ್ಧಿಗಳಿಗೆ ಹೊಸ ಟಾಸ್ಕ್

  ಇದೀಗ ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ಬಿಗ್‌ಬಾಸ್ ಹೊಸದೊಂದು ಟಾಸ್ಕ್‌ ನೀಡಿದ್ದಾರೆ. ಸ್ಪರ್ಧಿಗಳೆಲ್ಲರೂ ಬಿಗ್‌ಬಾಸ್ ಮನೆಯ ಅಂಗಳದಲ್ಲಿ ಕೃತಕವಾಗಿ ನಿರ್ಮಿಸಲಾಗಿರುವ ಕಾಡಿನಲ್ಲೇ ವಾಸ ಮಾಡಬೇಕು. ತಾವು ತಂದ ಬಟ್ಟೆಗಳನ್ನು ಧರಿಸದೆ ಗೋಣಿಚೀಲಗಳಿಂದ ಉಡುಪುಗಳನ್ನು ಮಾಡಿಕೊಳ್ಳಬೇಕು. ಶೌಚಾಲಯ ಹೊರತುಪಡಿಸಿ ಮನೆಯ ಇನ್ನೇನನ್ನೂ ಬಳಸಬಾರದು. ಟೂತ್‌ಬ್ರಶ್, ಪೇಸ್ಟ್‌ಗಳನ್ನು ಸಹ ಬಳಸುವಂತಿಲ್ಲ. ಅಡುಗೆಯನ್ನೂ ಸಹ ಸೌದೆ ಒಲೆಯಲ್ಲಿಯೇ ಮಾಡಿಕೊಳ್ಳಬೇಕು.

  ಹೊಸ ಸದಸ್ಯೆ ಯಾರು?

  ಹೊಸ ಸದಸ್ಯೆ ಯಾರು?

  ಮನೆಯ ಸದಸ್ಯರೆಲ್ಲರೂ ಈ ಟಾಸ್ಕ್‌ನಲ್ಲಿ ಭಾಗಿಯಾಗಿರುವಾಗ ಬಿಗ್‌ಬಾಸ್ ಮನೆಗೆ ಹೊಸ ಸದಸ್ಯರೊಬ್ಬರ ಎಂಟ್ರಿ ಆಗಿದೆ. ಮನೆಯ ಹೊಸ ಸದಸ್ಯರು ಮಹಿಳೆಯೇ ಆಗಿರುವುದು ಪ್ರೋಮೊದಿಂದ ಗೊತ್ತಾಗುತ್ತಿದೆಯಾದರೂ ಆ ಮಹಿಳೆ ಯಾರು ಎಂಬುದನ್ನು ಪ್ರೋಮೋದಲ್ಲಿ ತೋರಿಸಲಾಗಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ, ಇತ್ತೀಚೆಗಷ್ಟೆ ಎಲಿಮಿನೇಟ್ ಆದ ದೀಪಿಕಾ ದಾಸ್ ಅನ್ನು ಸೀಕ್ರೆಟ್ ರೂಂನಲ್ಲಿರಿಸಿ ಈಗ ಮತ್ತೆ ಬಿಗ್‌ಬಾಸ್‌ಗೆ ಕರೆತರಲಾಗಿದೆ ಎನ್ನಲಾಗುತ್ತಿದೆ.

  ಸೋನು ಗೌಡ ಹೋಗುತ್ತಾರೆ ಎನ್ನಲಾಗಿತ್ತು

  ಸೋನು ಗೌಡ ಹೋಗುತ್ತಾರೆ ಎನ್ನಲಾಗಿತ್ತು

  ಕೆಲವು ದಿನಗಳ ಹಿಂದೆ ಹಬ್ಬಿದ್ದ ಸುದ್ದಿಯಂತೆ, ಬಿಗ್‌ಬಾಸ್ ಮನೆಗೆ ಒಟಿಟಿ ಸ್ಪರ್ಧಿ ಸೋನು ಗೌಡ ಹೋಗುತ್ತಾರೆ ಎನ್ನಲಾಗಿತ್ತು. ಒಟಿಟಿ ಸೀಸನ್‌ನಲ್ಲಿ ಸೋನು ಗೌಡ ಪ್ರಬಲ ಕಂಟೆಸ್ಟೆಂಟ್ ಆಗಿ ಹೊರಹೊಮ್ಮಿದ್ದರು. ಫಿನಾಲೆ ವರೆಗೆ ಸೋನು ಗೌಡ ಬಂದಿದ್ದರು ಆದರೆ ಅಂತಿಮವಾಗಿ ಟಿವಿ ಸೀಸನ್‌ಗೆ ರಾಕೇಶ್ ಅಡಿಗ, ಸಾನಿಯಾ ಐಯ್ಯರ್, ಆರ್ಯವರ್ಧನ್ ಹಾಗೂ ರೂಪೇಶ್ ಶೆಟ್ಟಿ ಆಯ್ಕೆ ಆಗಿದ್ದರು. ರೂಪೇಶ್ ಶೆಟ್ಟಿಯನ್ನು ಚಾಂಪಿಯನ್ ಎಂದು ಹೆಸರಿಸಲಾಗಿತ್ತು.

  ಮನೆಯಲ್ಲಿ ಉಳಿದಿರುವವರ್ಯಾರು?

  ಮನೆಯಲ್ಲಿ ಉಳಿದಿರುವವರ್ಯಾರು?

  ಇದೀಗ ಬಿಗ್‌ಬಾಸ್ ಮನೆಯಲ್ಲಿ ವಿನೋದ್ ಗೊಬ್ರಗಾಲ, ಆರ್ಯವರ್ಧನ್, ಅಮೂಲ್ಯ, ರಾಕೇಶ್ ಅಡಿಗ, ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್, ಕಾವ್ಯಾ, ಅನುಪಮಾ, ದಿವ್ಯಾ ಉರುಡಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ಅವರುಗಳಿದ್ದಾರೆ. ಈಗ ಬಿಗ್‌ಬಾಸ್ ಮನೆಗೆ ಹೊಸ ಸ್ಪರ್ಧಿಯೊಬ್ಬರ ಎಂಟ್ರಿ ಆಗಿರುವುದರಿಂದ ಮನೆಯ ಸದಸ್ಯರ ನಡುವಿನ ಈಕ್ವೇಶನ್‌ಗಳು ಬದಲಾಗುವುದು ಪಕ್ಕಾ.

  English summary
  Bigg Boss Kannada season 09: New member entered the bigg boss house. Promo did not revel new member's face.
  Tuesday, November 22, 2022, 15:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X