Just In
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಂಚಲ ನಿಶ್ಚಿತಾರ್ಥಕ್ಕೆ ಹೋಗಲು ಜಾನಕಿಯನ್ನು ಒಪ್ಪಿಸಿದ ನಿರಂಜನ್
ಜಾನಕಿ ಮುದ್ದು ತಂಗಿ ಚಂಚಲ ನಿಶ್ಚಿತಾರ್ಥಕ್ಕೆ ಹೋಗದಿರಲು ನಿರ್ಧಾರಮಾಡಿದ್ದಾರೆ. ಅಪ್ಪ ಭಾರ್ಗಿಯ ಮಾತಿನಿಂದ ಬೇಸರಗೊಂಡಿರುವ ಜಾನಕಿ ತಂಗಿ ನಿಶ್ಚಿತಾರ್ಥಕ್ಕೆ ಹೋಗುತ್ತಿಲ್ಲ. ಆದ್ರೆ ಅಕ್ಕ ಬರದೆ ಹೋದರೆ ನಿಶ್ಚಿತಾರ್ಥವೆ ಬೇಡ ಎಂದು ಹೇಳುತ್ತಿದ್ದಾಳೆ.
ಜಾನಕಿ ಬೇಕು ಅಂತಾನೆ ನಿಶ್ಚಿತಾರ್ಥಕ್ಕೆ ಬರುತ್ತಿಲ್ಲ ಎಂದು ಚಂದು ಭಾರ್ಗಿ ಪತ್ನಿ ರಶ್ಮಿ ಬಳಿ ರೇಗಾಡುತ್ತಿದ್ದಾರೆ. ಜಾನಕಿ ಬರದಿದ್ರು ಚಂಚಲಳನ್ನು ನಿಶ್ಚಿತಾರ್ಥಕ್ಕೆ ಒಪ್ಪಿಸುವುದು ಹೇಗೆ ಅಂತ ಗೊತ್ತು ಎಂದು ರಶ್ಮಿ ವಿರುದ್ಧವೆ ಸವಾಲ್ ಹಾಕಿದ್ದಾರೆ.
ನಿಶ್ಚಿತಾರ್ಥಕ್ಕೆ ಹೋದರೆ ಭಾರ್ಗಿ ಜೊತೆ ಜಗಳವಾಗುವ ಸಂಭವ ವಿರುತ್ತೆ, ಇದರಿಂದ ನಿಶ್ಚಿತಾರ್ಥ ಸಂಭ್ರಮ ಹಾಳಾಗುವ ಸಾಧ್ಯತೆ ಇದೆ ಎಂದು ಯೋಚಿಸಿ ತಂಗಿ ಎಂಗೇಜ್ ಮೆಂಟ್ ಗೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಆದ್ರೆ ಚಿರಂತನ್ ನಿರಂಜನ್ ಗೆ ಹೇಳಿ ನಿರಂಜನ್ ಜಾನಕಿಯನ್ನು ನಿಶ್ಚಿತಾರ್ಥಕ್ಕೆ ಹೋಗಲು ಒಪ್ಪಿಸಿದ್ದಾರೆ. ಮುಂದೆ ಓದಿ..

ನಿಶ್ಟಿತಾರ್ಥ ನಿಲ್ಲಿಸುವಂತೆ ಹೇಳಿದ ಚಂಚಲ
ನಿಶ್ಚಿತಾರ್ಥ ಬೇಡ ಎಂದು ಚಂಚಲ ಚಿರಂತನ್ ಗೆ ಹೇಳಿದ್ದಾರೆ. ಆದ್ರೆ ಆಗಲೆ ಚಿರಂತನ್ ಮತ್ತು ಭಾರ್ಗಿ ಇಬ್ಬರು ಎಲ್ಲಾ ರಾಜಕೀಯ ಗಣ್ಯರನ್ನು ಆಹ್ವಾನ ಮಾಡಿದ್ದಾರೆ. ಅಲ್ಲದೆ ಭಾರ್ಗಿ ಈಗಾಗಲೆ ಮಗಳ ನಿಶ್ಚಿತಾರ್ಥಕ್ಕೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಅಕ್ಕ ಬರದೆ ನಿಶ್ಚಿತಾರ್ಥ ಬೇಡ ಎಂದು ಹಠ ಹಿಡಿದಿದ್ದಾಳೆ ಚಂಚಲ. ಜಾನಕಿ ಮನಸ್ಸಿಗೆ ನೋವಾಗಿದ್ದರಿಂದ ಬರುತ್ತಿಲ್ಲ ಎಂದು ಚಂಚಲ ಚಿರಂತನ್ ಬಳಿ ಹೇಳಿಕೊಂಡು ನೊಂದುಕೊಳ್ಳುತ್ತಿದ್ದಾಳೆ.

ಜಾನಕಿ ಕರೆಸಲು ಚಿರಂತನ್ ಹೊಸ ಪ್ಲಾನ್
ಜಾನಕಿಯನ್ನು ನಿಶ್ಚಿತಾರ್ಥಕ್ಕೆ ಕರೆಸಲು ಚಿರಂತನ್ ಹೊಸ ಪ್ಲಾನ್ ಮಾಡಿದ್ದಾರೆ. ನಿರಂಜನ್ ಗೆ ಫೋನ್ ಮಾಡಿ ನಿಶ್ಚಿತಾರ್ಥಕ್ಕೆ ಆಹ್ವಾನ ನೀಡಿದ್ದಾರೆ. ಅಲ್ಲದೆ ನಿರಂಜನ್ ಹೋಗಲೆ ಬೇಕಾಗಿದೆ. ಯಾಕಂದ್ರೆ ಚಿರಂತನ್ ಕೈ ಕೆಳಗೆ ನಿರಂಜನ್ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಜಾನಕಿಯನ್ನು ಕರೆದುಕೊಂಡು ಬರಬೇಕು ಎಂದು ಹೇಳಿದ್ದಾರೆ ಚಿರಂತನ್.

ಚಿರಂತನ್ ಕ್ರಿಮಿನಲ್ ಬ್ಯಾಗ್ರೌಂಡ್ ಬಗ್ಗೆ ಮೀರಾ ಪ್ರಶ್ನೆ
ಜಾನಕಿ ಜೀವನದ ಹಾಗೆ ಚಂಚಲ ಜೀವನ ಹಾಳೋದು ಬೇಡ ಎಂದು ಮೀರಾ ಭಾರ್ಗಿ ಬಳಿ ಚರ್ಚಿಸಿದ್ದಾರೆ. ಆದ್ರೆ ಭಾರ್ಗಿ, ಮದುವೆಗೂ ಮುನ್ನ ನನ್ನ ಮೇಲೆ ಸಾಕಷ್ಟು ಕ್ರಿಮಿನಲ್ ಕೇಸ್ ಗಳಿದ್ದವು. ಆದ್ರೆ ಈಗ ಅದನ್ನೆಲ್ಲ ಮರೆತು ಮೇಲೆ ಬಂದಿದ್ದೀನಿ. ಆದ್ರೆ ಚಿರಂತನ್ ಮೇಲೆ ಒಂದೇ ಎಫ್ ಐ ಆರ್ ಇದೆ ಅಷ್ಟೆ. ಮುಂದೆ ಹೀಗಾಗುವುದಿಲ್ಲ. ಚಿರಂತನ್ ಅನ್ನು ನಾನು ಮೇಲೆ ತರುತ್ತೇನೆ ಎಂದು ಮೀರಾ ಬಳಿ ಹೇಳಿ ಅಳಿಯನನ್ನು ಸಮರ್ಥಿಸಿಕೊಂಡಿದ್ದಾರೆ ಚಿರಂತನ್.

ಜಾನಕಿ ಜೊತೆ ನಿರಂಜನ್ ಮಾತು
ಜಾನಕಿಯನ್ನು ನಿಶ್ಚಿತಾರ್ಥಕ್ಕೆ ಕರೆದುಕೊಂಡು ಹೋಗಲು ನಿರಂಜನ್ ಪ್ಲಾನ್ ಮಾಡಿ ಜಾನಕಿಯನ್ನು ಒಪ್ಪಿಸಿದ್ದಾರೆ. ಭಾರ್ಗಿ ಮತ್ತು ಜಾನಕಿ ನಡುವೆ ಮನಸ್ತಾಪ ಹೆಚ್ಚಾಗುತ್ತಿದೆ. ಹಾಗಾಗಿ ಜಾನಕಿ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಚಂಚಲ ನಿಶ್ಚಿತಾರ್ಥ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ, ಅಲ್ಲದೆ ಬ್ಯುಸಿನೆಸ್ ದೃಷ್ಟಿಯಿಂದ ಹೋಗಬೇಕಾಗಿದೆ ಎಂದು ಹೇಳಿ ಜಾನಕಿಯನ್ನು ಒಪ್ಪಿಸಿದ್ದಾರೆ ನಿರಂಜನ್.

ಚಂಚಲಗೆ ಭಾರ್ಗಿ ಕಡೆಯಿಂದ ಮಜ್ರದ ಉಂಗುರ
ಚಂಚಲಗೆ ಮಾತ್ರ ಮಜ್ರದ ಉಂಗುರ ತರಿಸಿದ್ದೀರಿ, ಅಲ್ಲದೆ ಚಂಚಲಗೋಸ್ಕರ ವಿಶೇಷವಾಗಿ ಆರ್ಡರ್ ಮಾಡಿಸಿ ತರಿಸಿದ್ದೀರಿ. ಆದರೆ ಜಾನಕಿಗೆ ಮಾತ್ರ ತಂದಿಲ್ಲ ಎಂದು ರಶ್ಮಿ ಪತಿ ಭಾರ್ಗಿ ಹತ್ರ ಬೇಸರ ಹಂಚಿಕೊಂಡಿದ್ದಾರೆ. ಆದ್ರೆ ಜಾನಕಿಯನ್ನು ಮತ್ತೆ ಅವಮಾನಿಸಿದ್ದಾರೆ ಭಾರ್ಗಿ. ಜಾನಕಿಗೆ ನೋವಾದರೆ ಏನು ಆಗಬೇಕಾಗಿಲ್ಲ. ನಿಮ್ಮನ್ನ ನೋಡಿ ಜಾನಕಿಯನ್ನು ಸಹಿಸಿಕೊಂಡಿದ್ದೀನಿ ಎಂದು ಭಾರ್ಗಿ ಮತ್ತಷ್ಟು ಖಾರವಾಗಿ ಮಾತನಾಡಿದ್ದಾರೆ.